

Vastu tips: ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಉತ್ತಮವಾಗಿ ನಡೆಸಲು ಅಥವಾ ಲಾಭಗಳಿಸುವ ಸಲುವಾಗಿ ಅನೇಕ ರೀತಿಯ ವಸ್ತುಗಳನ್ನು ತಮ್ಮ ಅಂಗಡಿಯಲ್ಲಿ ಇಡಲು ಬಯಸುತ್ತಾರೆ. ಕೆಲವರು ಕುಬೇರನ ಚಿತ್ರ, ಲಕ್ಷ್ಮೀ ಫೋಟೋ, ಆಮೆ, ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಅಭಿವೃದ್ಧಿಯನ್ನು ಹೊಂದಬಹುದು ಎಂದು ಯೋಚಿಸಿರುತ್ತಾರೆ.
ಅಂದಹಾಗೇ, ವಾಸ್ತು ಪ್ರಕಾರ, ಅಂಗಡಿಯ ಮುಂದೆ ಕೆಲವು ವಸ್ತುಗಳು ಅಥವಾ ತಪ್ಪು ವಸ್ತುಗಳು ಇದ್ದರೆ, ಲಕ್ಷ್ಮಿ ನಿಮ್ಮ ಅಂಗಡಿಯನ್ನು ಎಂದಿಗೂ ಪ್ರವೇಶಿಸುವುದಿಲ್ಲ ಎಂದು ಹೇಳುತ್ತದೆ. ಇದರಿಂದಾಗಿ, ವ್ಯವಹಾರಗಳು ನಿಧಾನಗೊಳ್ಳುತ್ತವೆ. ಅಲ್ಲದೇ, ಆರ್ಥಿಕ ನಷ್ಟಗಳು ಸಂಭವಿಸಲು ಪ್ರಾರಂಭಿಸುತ್ತವೆ ಎಂದು ತಿಳಿಸಿದೆ. ಹಾಗಿದ್ದರೆ, ಆ ವಸ್ತಗಳು ಯಾವುದು ಎಂದು ನೋಡೋಣ ಬನ್ನಿ...
ನೀವು ನಡೆಸುವ ಅಂಗಡಿಯ ಮುಂದೆ ಎಂದಿಗೂ ಕಸ ಅಥವಾ ಕಸದ ತೊಟ್ಟಿಯನ್ನು ಇಡಬೇಡಿ ಎಂದು ವಾಸ್ತು ತೋರಿಸುತ್ತದೆ. ಈ ರೀತಿ ಕಸವನ್ನು ಇಟ್ಟರೆ, ನಿಮ್ಮ ಅಂಗಡಿಯೊಳಗೆ ಯಾವ ಕಾರಣಕ್ಕೂ ಲಕ್ಷ್ಮೀ ಕಾಲಿಡುವುದಿಲ್ಲ. ಏಕೆಂದರೆ, ಲಕ್ಷ್ಮೀಗೆ ಶಿಸ್ತು, ಸ್ವಚ್ಛತೆ ಮುಖ್ಯ. ಆಕೆ ಸುಗಂಧವನ್ನು ಪ್ರೀತಿಸುತ್ತಾಳೋ ಹೊರತು ದುರ್ಗಂಧವನ್ನಲ್ಲ. ಹಾಗಾಗಿ ನೀವೇನಾದರೂ, ನಿಮ್ಮ ಅಂಗಡಿ ಮುಂದೆ ಕಸವನ್ನು ಇಟ್ಟರೆ ಲಕ್ಷ್ಮೀ ಒಳಗೆ ಪ್ರವೇಶಿಸುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ಅಂಗಡಿಯ ಮುಂದೆ ಯಾವುದೇ ಅಡತಡೆಗಳಿರಬಾರದು. ಇದರರ್ಥ ಅಂಗಡಿಯ ಬಾಗಿಲಿನ ಮುಂದೆ ತೆರೆದ ಸ್ಥಳವಿರಬೇಕು. ಅಂದರೆ, ಯಾವುದೇ ಗೋಡೆ, ಕಬ್ಬಿಣದ ಕಂಬಗಳು, ವಿದ್ಯುತ್ ಕಂಬಗಳು, ಪೋಸ್ಟರ್ಗಳು ಇರಬಾರದು ಎಂದು ತಿಳಿಸಿದ್ದಾರೆ. ಇವು ಅಂಗಡಿಗೆ ನಕರಾತ್ಮಕ ಶಕ್ತಿಯನ್ನು ನೀಡುತ್ತವೆ. ಹಾಗೆಯೇ ಇದು ಏಳಿಗೆಯಾಗದಂತೆ ತಡೆಯುತ್ತದೆ.
ಕತ್ತಲೆಯು ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಅಂಗಡಿಯ ಒಳಗೆ ಅಥವಾ ಹೊರಗೆ ಎಂದಿಗೂ ಕತ್ತಲೆ ಇರಬಾರದು. ಹಾಗಾಗಿ ಅಂಗಡಿಯನ್ನು ಯಾವಾಗಲು ಬೆಳಕಿನಿಂದ ತುಂಬಿರುವಂತೆ ಮಾಡಿರಿ. ದೊಡ್ಡ ದೀಪಗಳನ್ನು ಅಳವಡಿಸಿ. ಏಕೆಂದರೆ ಲಕ್ಷ್ಮೀ ದೇವಿಯು ಕತ್ತಲೆಯಲ್ಲಿ ಇರಲು ಇಷ್ಟಪಡುವುದಿಲ್ಲ. ಇದರಿಂದ ನಿಮ್ಮ ಅಂಗಡಿಯೊಳಗೆ ಆಕೆ ಕಾಲನ್ನು ಇಡುವುದಿಲ್ಲ. ಹಾಗಾಗಿ ಎಂದಿಗೂ ನಿಮ್ಮ ಅಂಗಡಿ ಒಳಗೆ ಮತ್ತು ಹೊರಗೆ ದೀಪವನ್ನು ಬೆಳಗಿಸಿ.
ನಿಮ್ಮ ಅಂಗಡಿಯ ಮುಂದೆ ದುರ್ವಾಸನೆ ಬಂದಾಗ, ಅದು ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸುತ್ತದೆ. ಇದು ಅಂಗಡಿಯಲ್ಲಿ ಉತ್ಸಾಹ ಮತ್ತು ಸಂತೋಷವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಕಲುಷಿತವಿದ್ದರೆ, ಅಂಗಡಿಗಳಿಗೆ ಜನ ಬರಲು ಇಷ್ಟ ಪಡುವುದಿಲ್ಲ. ಇಂತಹ ಪ್ರದೇಶಗಳಲ್ಲಿ ಲಕ್ಷ್ಮಿ ಕೂಡಾ ವಾಸಿಸುವುದಿಲ್ಲ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಕುಂಠಿತಗೊಳ್ಳುತ್ತದೆ. ಹಾಗೆಯೇ ವ್ಯವಹಾರವನ್ನು ನಿಧಾನಗೊಳಿಸುತ್ತದೆ.
ಅಂಗಡಿಯ ಹೊರಗೆ ಯಾವಾಗಲೂ ಸಗಮವಾದ ರಸ್ತೆ ಇರಬೇಕೆಂದು ವಾಸ್ತು ತಿಳಿಸುತ್ತದೆ. ಏನಾದರೂ ನಿಮ್ಮ ಅಂಗಡಿಯ ಮುಂದೆ ಇಳಿಜಾರು ಪ್ರದೇಶವಿದ್ದರೆ, ಎಲ್ಲಾ ಹಣವು ಹರಿಯಲು ಪ್ರಾರಂಭಿಸುತ್ತದೆ. ಇಳಿಜಾರು ಇದ್ದರೆ, ಲಕ್ಷ್ಮೀ ಬಾಗಿಲಿನ ಒಳಗೆ ಪ್ರವೇಶಿಸುವುದಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.