ಅರಿಶಿಣ ನೀರು ಮತ್ತು ಮೆಣಸಿನ ನೀರಿನಿಂದ ದಿನ ಪ್ರಾರಂಭಿಸುತ್ತಾರಂತೆ ಮಹಾರಾಷ್ಟ್ರ ಸಿಎಂ ಪತ್ನಿ...! ಕಾರಣವೇನು..? Kick start morning

amrutafadnavis-6915beee87a2e
Published on

Kick start morning: ಬೆಳಗಿನ ಆರಂಭವು ಇಡೀ ದಿನವನ್ನು ಕಳೆಯಲು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ನಮ್ಮ ಬೆಳಿಗ್ಗೆ ಹೇಗೆ ಪ್ರಾರಂಭವಾಗುತ್ತದೆಯೋ, ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹಾಗೆಯೇ, ಕೆಲವರು ಬೆಳಿಗ್ಗೆ ಚಹಾ, ಕಾಫಿಯೊಂದಿಗೆ ಪ್ರಾರಂಭಿಸಿದರೆ, ಇನ್ನೂ ಕೆಲವರು ಆರೋಗ್ಯಕರ ಹಣ್ಣಿನ ರಸದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.

ನಟಿ ಅಮೃತಾ ಫಡ್ನವೀಸ್ ತಮ್ಮ ಬೆಳಗ್ಗೆಯನ್ನು ಅರಿಶಿನ ಮತ್ತು ಕರಿಮೆಣಸಿನ ನೀರಿನೊಂದಿಗೆ ದಿನವನ್ನು ಪ್ರಾರಂಭಿಸುವುದಾಗಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ತಿಳಿಸಿದ್ದಾರೆ. ಇವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿಣದ ನೀರು ಮತ್ತು ಕರಿಮೆಣಸಿನ ನೀರನ್ನು ಕುಡಿಯುವುದಾಗಿ ತಿಳಿಸಿದ್ದಾರೆ.

ಅರಿಶಿನ ಮತ್ತು ಮೆಣಸಿನ ನೀರಿನ ಪ್ರಯೋಜನಗಳೇನು?

1. ಉರಿಯೂತದ ವಿರುದ್ಧ ಹೋರಾಟ ಮಾಡುತ್ತದೆ

ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಮತ್ತು ಕರಿಮೆಣಸಿನಲ್ಲಿ ಕಂಡುಬರುವ ಪೈಪರಿನ್ ಬಲವಾದ ನೈಸರ್ಗಿಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಸೇವನೆಯು ದೇಹದಲ್ಲಾಗುವ ಊತ, ಅಸ್ವಸ್ಥತೆ, ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಜೀವಕೋಶಗಳ ರಕ್ಷಣೆ

ಅರಿಶಿನ ಮತ್ತು ಮೆಣಸಿನ ಮಿಶ್ರಣವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಜೀವಕೋಶಗಳ ಆರೋಗ್ಯವನ್ನು ರಕ್ಷಿಸುತ್ತದೆ. ನಿಮ್ಮ ಜಿವಕೋಶಗಳಿಗೆ ಹಾನಿಯಾಗುವ, ವಯಸ್ಸಾಗುವಿಕೆಯ ಮತ್ತು ರೋಗಗಳನ್ನು ಉತ್ಪತ್ತಿ ಮಾಡುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಟ ನಡೆಸುತ್ತದೆ. ಇದು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

3. ಜೀರ್ಣಕ್ರಿಯೆಗೆ ಸಹಾಯ

ಅರಿಶಿನದಲ್ಲಿ ಕುರ್ಕುಮಿನ್ ಇರುವುದರಿಂದ ಇದು ಗ್ಯಾಸ್​, ಹೊಟ್ಟೆ ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಈ ಅರಿಶಿಣ ಮತ್ತು ಕರಿಮೆಣಸಿನ ನೀರು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೊಟ್ಟೆಯ ಉಬ್ಬರ, ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.

4. ಮೆದುಳಿನ ಆರೋಗ್ಯ ಬೆಂಬಲಿಸುತ್ತದೆ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ನಿವಾರಣೆಯನ್ನು ಮಾಡುತ್ತದೆ. ಇದರಿಂದ ರಕ್ತ-ಮಿದುಳಿನ ತಡೆಗೋಡೆಯನ್ನು ದಾಟುತ್ತದೆ. ಇದು ಮೆದುಳಿಗೆ ಹೊಸ ನರಗಳು, ಕೋಶಗಳು ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ. ಈ ಪಾನೀಯವನ್ನು ಕುಡಿಯುವುದರಿಂದ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮರೆವಿನ ಕಾಯಿಲೆಯನ್ನು ದೂರ ಕಳುಹಿಸುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net