ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುತ್ತೀರಾ? ಈ ಅಭ್ಯಾಸ ನಿಮ್ಮನ್ನು ಈ ತೊಂದರೆಗಳಿಗೆ ಸಿಲುಕಿಸುತ್ತದೆ, ಜಾಗುರಾಕರಾಗಿರಿ!| Astrology

untitled-design-2025-09-13t153434476-68c541eed7355
Published on

Astrology: ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುತ್ತೀರಾ? ಈ ಅಭ್ಯಾಸ ಸಾಮಾನ್ಯವಾಗಿರಬಹುದು ಆದರೆ, ಜೋತಿಷ್ಯದ ಪ್ರಕಾರ ಇದು ನಿಮ್ಮ ಇಡೀ ದಿನದ ದಿಕ್ಕನ್ನೇ ಬದಲಾಯಿಸಬಹುದು. ಕೆಲವೊಮ್ಮೆ ನಾವು ಏನನ್ನೂ ಯೋಚಿಸದೇ ಮಾಡುವಂತಹ ಕೆಲವು ನಿರ್ಧಾರಗಳು ನಮ್ಮ ಜೀವನದಲ್ಲಿ ಆಳವಾದ ಪರಿಣಾಮವನ್ನು ಉಂಟುಮಾಡುತ್ತವೆ.

ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವುದು ಕೇವಲ ನಡವಳಿಕೆಯಲ್ಲ, ಆದರೆ, ಇದು ನಮ್ಮ ಶಕ್ತಿಯ ಮಟ್ಟದಲ್ಲಿ ದೊಡ್ಡ ತಪ್ಪಾಗಿರಬಹುದು ಎಂದು ಜ್ಯೋತಿಷ್ಯಗಳು ನಿರೂಪಿಸಿವೆ.

ಬೆಳಗಿನ ಸಮಯ ಏಕೆ ಮುಖ್ಯ?

ಬೆಳಿಗ್ಗೆ ಎಂಬುದು ನಿದ್ರೆಯಿಂದ ಎಚ್ಚರಗೊಳ್ಳಲು ಮಾತ್ರವಲ್ಲ. ಬದಲಿಗೆ ಇದು ದೇಹ ಮತ್ತು ಮನಸ್ಸನ್ನು ಹೊಸ ದಿಕ್ಕಿಗೆ ಸೆಳೆಯುವ ಕ್ಷಣವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮೊಳಗಿನ ಶಕ್ತಿಯು ಸಮತೋಲನದಲ್ಲಿರುವುದರಿಂದ ನೀವೇನಾದರೂ ಕನ್ನಡಿಯನ್ನು ನೋಡಿದರೆ ಅದು ನಿಮ್ಮನ್ನು ವಿರುದ್ಧ ದಿಕ್ಕಿಗೆ ಕರೆದೊಯ್ಯುತ್ತದೆ.

ಗಾಜು ಶುಕ್ರ ಗ್ರಹಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಇದು ಸೌಂದರ್ಯ, ಬಯಕೆ ಮತ್ತು ಭ್ರಮೆಯೊಂದಿಗೆ ಸಂಬಂಧ ಹೊಂದಿರುವ ಗ್ರಹವಾಗಿದೆ. ಅಂದರೆ, ಕನ್ನಡಿಯು ನೀವು ಏನನ್ನು ನೋಡುತ್ತೀರೋ ಅದನ್ನು ಮಾತ್ರ ತೋರಿಸುತ್ತದೆ. ಬದಲಿಗೆ ನಿಮ್ಮ ಮನಸ್ಸಿನಲ್ಲಾಗುವ ಸನ್ನಿವೇಶಗಳನ್ನು ತೋರಿಸುವುದಿಲ್ಲ.

ಅದರಿಂದಾಗುವ ಅನಾನುಕೂಲಗಳೇನು?

1. ದಿನ ಗೊಂದಲದಿಂದ ಪ್ರಾರಂಭ

ನೀವು ನಿದ್ರೆಯಿಂದ ಎದ್ದ ತಕ್ಷಣ ಕನ್ನಡಿಯನ್ನು ನೇರವಾಗಿ ನೋಡಿದಾಗ ಇಮಗೆ ನೈಜ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗಾಗಲೇ ನಿಮ್ಮ ಮನಸ್ಸು ಗೊಂದಲದಿಂದ ಇರುತ್ತದೆ. ಈ ವೇಳೆ ನೀವು ಕನ್ನಡಿ ನೋಡಿದಾಗ ಇನ್ನಷ್ಟು ಗೊಂದಲದಲ್ಲಿರುವಂತೆ ಭಾಸವಾಗುತ್ತದೆ. ಹಾಗೆಯೇ ಈ ಪರಿಣಾಮ ಇಡೀ ದಿನ ನೀವು ಸರಿಯಾದ ಮಾರ್ಗ ತೆಗೆದುಕೊಳ್ಳಲು ಆಗುವುದಿಲ್ಲ.

2. ನಕಾರಾತ್ಮಕ ಶಕ್ತಿಯ ಪರಿಣಾಮ

ನಿದ್ರೆಯ ನಂತರ, ದೇಹವು ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಹಾದು ಹೋಗುತ್ತದೆ. ಈ ಸಮಯದಲ್ಲಿ ನಿಮ್ಮೊಳಗಿನ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ. ಈ ಸಂದರ್ಭದಲ್ಲಿ ನೀವೇನಾದರೂ ಕನ್ನಡಿಯಲ್ಲಿ ಮುಖ ನೋಡಿದರೆ, ಈ ಶಕ್ತಿಯು ನಿಮ್ಮೊಳಗೆ ಮನೆ ಮಾಡುತ್ತದೆ. ಇದು ನಿಮ್ಮ ಮನಸ್ಥಿತಿ, ಆಲೋಚನೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರಬಹುದು.

3. ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಸ್ಯೆ

ಎದ್ದ ಕೂಡಲೇ ನಿಮ್ಮ ಮನಸ್ಸು ಗೊಂದಲಕ್ಕೊಳಗಾಗಿರುತ್ತದೆ. ಈ ವೇಳೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ.ಈ ಅಭ್ಯಾಸವು ಕ್ರಮೇಣ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಗೊಳಿಸಲು ಪ್ರಾರಂಭಿಸುತ್ತದೆ.

4. ಕಠಿಣ ಪರಿಶ್ರಮದ ನಂತರ ಕಾರ್ಯದಲ್ಲಿ ವಿಫಲ

ನೀವು ನಿರಂತರ ಗುರಿ ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಸಹ ಗುರಿ ತಲುಪುವಲ್ಲಿ ವಿಫಲರಾಗುತ್ತೀರಿ. ಈ ಫಲಿತಾಂಶಗಳು ನಿಮ್ಮ ದಿನ ಹೇಗೆ ಪ್ರಾರಂಭವಾಗಿರುತ್ತದೆಯೋ ಅವುಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಗಿ ಇವೆಲ್ಲಾ ಸಮಸ್ಯೆಯಿಂದ ನೀವು ತಪ್ಪಿಸಿಕೊಳ್ಳಲು ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬೇಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net