ಈ ಮಾನ್ಸೂನ್​​ನಲ್ಲಿ ಮದುವೆಯಾಗಲು ಪ್ಲಾನ್ ಮಾಡ್ತಿದ್ದೀರಾ?; ಜೂನ್-ಜುಲೈ ತಿಂಗಳ ಬೆಸ್ಟ್ ವೆಡ್ಡಿಂಗ್ ಡೇಟ್ಸ್ ಇಲ್ಲಿದೆ..Marriage Dates

June July 2026 Marriage Dates
June July 2026 Marriage Dates
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ ಮತ್ತು ಜುಲೈ 2026ರಲ್ಲಿರುವ ಶುಭ ಮುಹೂರ್ತ ಪಟ್ಟಿ ಇಲ್ಲಿದೆ.
  • ಜೂನ್ ತಿಂಗಳ ಮೊದಲ 15 ದಿನಗಳ ಕಾಲ ಮದುವೆಗೆ ಯಾವುದೇ ಶುಭ ಲಗ್ನಗಳಿಲ್ಲ.
  • ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಚಾತುರ್ಮಾಸ ಹಿನ್ನೆಲೆ ಯಾವುದೇ ಶುಭ ಮುಹೂರ್ತಗಳು ಇಲ್ಲ.
June July 2026 Marriage Dates: ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಮುಹೂರ್ತಕ್ಕೆ ದಿನಾಂಕ, ಸಮಯ ನಿಗದಿ ಮಾಡುವುದು ಸಾಮಾನ್ಯ.  ಅದರಲ್ಲೂ ವಿಶೇಷವಾಗಿ ವಿವಾಹದ ಮುಹೂರ್ತಕ್ಕೆ ಸಾಕಷ್ಟು ಯೋಚಿಸಿ ದಿನಾಂಕವನ್ನು ಫಿಕ್ಸ್​ ಮಾಡಲಾಗುತ್ತದೆ. ಈ ಮಾನ್ಸೂನ್​ ತಿಂಗಳಲ್ಲಿ  ಮದುವೆ ನಿಶ್ಚಯಿಸಲು ಯೋಜಿಸುತ್ತಿದ್ದರೆ, ಪಂಚಾಂಗ ಮತ್ತು ಜ್ಯೋತಿಷ್ಯ ತಜ್ಞರ ಪ್ರಕಾರ ಯಾವೆಲ್ಲಾ ದಿನಗಳು ಅತ್ಯಂತ ಶುಭಪ್ರದವಾಗಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಜೂನ್​ನ ಮೊದಲ ವಾರದಲ್ಲಿ ಶುಭ ಲಗ್ನದ ಕೊರತೆ

ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ , ಜೂನ್ 2026ರ ಮೊದಲ ವಾರ ಅಂದರೆ,15ನೇ ತಾರೀಖಿನವರೆಗೂ ಯಾವುದೇ ಶುಭ ಲಗ್ನಗಳು ಇಲ್ಲ. ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ಮದುವೆಗೆ ಹೆಚ್ಚು ಸೌಕರ್ಯದ ದಿನಗಳಿವೆ.

​ಜೂನ್ 2026ರ ಶುಭ ವಿವಾಹ ಮುಹೂರ್ತ ಯಾವುದು?

  • ​ಜೂನ್ 19 (ಶುಕ್ರವಾರ)
  • ​ಜೂನ್ 21 (ರವಿವಾರ)
  • ​ಜೂನ್ 28 (ರವಿವಾರ)

​ಜುಲೈ 2026ರಲ್ಲಿರುವ ಶುಭ ಮುಹೂರ್ತ ಯಾವುದು?

ಜುಲೈ ತಿಂಗಳು ಮುಗಿಯುತ್ತಿದ್ದಂತೆ ಚಾತುರ್ಮಾಸದ ಅವಧಿ ಆರಂಭವಾಗುತ್ತದೆ. ಈ ತಿಂಗಳ ಆರಂಭದಲ್ಲಿ ಎರಡು ಪ್ರಮುಖ ದಿನ ಮಾತ್ರ ಮದುವೆ ಉತ್ತ,ಮ ಲಗ್ನ ಎಂದು ಪರಿಗಣಿಸಲಾಗಿದೆ ಅದು 
  • ​ಜುಲೈ 7 (ಮಂಗಳವಾರ)​
  • ಜುಲೈ 16 (ಗುರುವಾರ)

ಆಗಸ್ಟ್​ನಿಂದ ಅಕ್ಟೋಬರ್​ವರೆಗೂ ಇಲ್ಲ ಮುಹೂರ್ತ

ಜುಲೈ ಮುಗಿಯುತ್ತಿದ್ದಂತೆ ಆಗಸ್ಟ್​ನಿಂದ ಚಾತುರ್ಮಾಸ ಆರಂಭವಾಗುತ್ತದೆ. ಹೀಗಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್  ತಿಂಗಳಲ್ಲಿ ಯಾವುದೇ ಶುಭಕಾರ್ಯ ಮಾಡೋದಿಲ್ಲ. ಅದರಲ್ಲು ಮದುವೆಯಂತಹ ಸಮಾರಂಭಗಳಿಗೆ ಡೇಟ್​ ಫಿಕ್ಸ್​ ಮಾಡೋದೆ ಇಲ್ಲ.  ಇದರ ನಂತರ ಮತ್ತೆ ನವೆಂಬರ್ ಮತ್ತು ಡಿಸೆಂಬರ್ 2026ರಲ್ಲಿ ಮಾತ್ರ ವಿವಾಹಕ್ಕೆ ಮತ್ತಷ್ಟು ಶುಭ ದಿನಗಳು ಲಭ್ಯವಾಗಲಿವೆ,(ಏಜೆನ್ಸೀಸ್).
ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಮಾಹಿತಿ, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net