ತುಳಸಿ ಕಟ್ಟೆ ತಪ್ಪು ದಿಕ್ಕಿನಲ್ಲಿದ್ರೆ ಏನಾಗುತ್ತೆ? ದಳ ಕೀಳ್ಬೇಕಾದವರು ಯಾರು?; ಇಲ್ಲಿದೆ ವಾಸ್ತು ಸಲಹೆ..Vastu Tips

ಎಐ ಚಿತ್ರ
ಎಐ ಚಿತ್ರ
Published on: 
  • ತುಳಸಿ ಗಿಡ ಮನೆಯ ಮುಖ್ಯದ್ವಾರದ ಎಡ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು.

  • ತುಳಸಿ ಗಿಡ ಒಣಗಿಹೋದರೆ ಅಶುಭವಲ್ಲ ಇದು ಕೇವಲ ಒಂದು ಮೂಢನಂಬಿಕೆ.

  • ಪ್ರತಿದಿನ ಸಂಜೆ ಸೂರ್ಯಾಸ್ತಕ್ಕೂ ಮುನ್ನ ಸಂಧ್ಯಾ ದೀಪ ಹಚ್ಚಬೇಕು.

  • ಪುರುಷರು ಮಾತ್ರ ತುಳಸಿ ದಳಗಳನ್ನು ಕೀಳಬೇಕು.

Tulsi plant Vastu tips: ಹಳ್ಳಿಯಾಗಲಿ ಅಥವಾ ಸಿಟಿಯಲ್ಲಾಗಲಿ ಮನೆಯ ಮುಂದೆ ತುಳಸಿ ಕಟ್ಟೆ ಇಟ್ಟುಕೊಳ್ಳುವುದು ಹಿಂದೂಗಳ ಸಂಪ್ರದಾಯ. ತುಳಸಿಗೆ ಪವಿತ್ರ ಸ್ಥಾನ ನೀಡಲಾಗುತ್ತದೆ. ತುಳಸಿ ಕಟ್ಟೆಯು ಲಕ್ಷಿಯ ಆವಾಸಸ್ಥಾನ. ಹೀಗಾಗಿ ಅದಕ್ಕಾಗಿಯೇ ಪ್ರತ್ಯೇಕ ವಾಸ್ತುವಿದೆ. ಅದು ಇಷ್ಟೆ ಎತ್ತರ ಇರಬೇಕು ಎನ್ನುವ ನಿಯಮ ಇದೆ. ಸರಿಯಾದ ಎತ್ತರದ ಕಟ್ಟೆ ಹಾಗೂ ಸರಿಯಾದ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ... ಆರ್ಥಿಕ ಅಭಿವೃದ್ಧಿ, ಆರೋಗ್ಯ ವೃದ್ಧಿಯಾಗುತ್ತದೆ. ನಕಾರಾತ್ಮಕ ಶಕ್ತಿಯ ನಿವಾರಣೆಗೆ ಸಹಕಾರಿ ಎನ್ನಲಾಗುತ್ತದೆ. ಆದ್ದರಿಂದ ಮನೆಯಲ್ಲಿ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ತುಳಸಿ ಇರಬೇಕು. ಎಷ್ಟು ಎತ್ತರದ ಕಟ್ಟೆ ಇದ್ದರೆ ಸೂಕ್ತ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ತುಳಸಿ ಕಟ್ಟೆ ಇಡುವ ಸರಿಯಾದ ದಿಕ್ಕು

ಬೆಳಗ್ಗೆ ಎದ್ದು ಬಾಗಿಲು ತೆರೆಯುತ್ತಿದ್ದಂತೆ ತುಳಸಿ ಗಿಡದ ದರ್ಶನ ಮಾಡುವುದು ಅತ್ಯಂತ ಶುಭಕರ. ಈ ಕಾರಣಕ್ಕಾಗಿ ಮನೆಯ ಮುಖ್ಯ ಬಾಗಿಲಿಗೆ ಎದುರುಗಡೆ ಅಥವಾ ಹೊರಗೆ ಹೋಗುವಾಗ ಎಡಭಾಗದಲ್ಲಿ ತುಳಸಿ ಕಟ್ಟೆಯನ್ನು ವ್ಯವಸ್ಥೆ ಮಾಡುವುದು ಉತ್ತಮ.

ಒಂದು ವೇಳೆ ಸ್ಥಳಾವಕಾಶವಿಲ್ಲದಿದ್ದರೆ, ಮನೆಯ ಎಂಟು ದಿಕ್ಕುಗಳಲ್ಲಿ ಎಲ್ಲಿಯಾದರೂ ತುಳಸಿ ಕುಂಡವನ್ನು ಇಟ್ಟುಕೊಳ್ಳಬಹುದು. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಪೂರ್ವ ದಿಕ್ಕಿನ ಬಾಲ್ಕನಿ ಇದ್ದರೆ ನೈಋತ್ಯ ಮೂಲೆಯಲ್ಲಿ, ಹಾಗೂ ಪಶ್ಚಿಮ ದಿಕ್ಕಿನ ಬಾಲ್ಕನಿ ಇದ್ದರೆ ವಾಯುವ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು ಸೂಕ್ತ.

ಗಿಡ ಒಣಗಿಹೋದರೆ ಅಶುಭವಲ್ಲ

ಮನೆಯಲ್ಲಿ ತುಳಸಿ ಗಿಡ ಒಣಗಿಹೋದರೆ ಏನೋ ದೊಡ್ಡ ಅನಿಷ್ಟ ಸಂಭವಿಸುತ್ತದೆ ಎಂದು ಬಹಳಷ್ಟು ಜನರು ಆತಂಕಗೊಳ್ಳುತ್ತಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪು ಕಲ್ಪನೆ. ಮಣ್ಣಿನಲ್ಲಿ ದೋಷವಿರುವುದು, ಸೂರ್ಯನ ಬೆಳಕು ಸರಿಯಾಗಿ ತಗಲದಿರುವುದು, ನೀರು ಹೆಚ್ಚು ಅಥವಾ ಕಡಿಮೆಯಾಗುವುದು ಮುಂತಾದ ನೈಸರ್ಗಿಕ ಕಾರಣಗಳಿಂದ ಮಾತ್ರ ಗಿಡ ಬಾಡುತ್ತದೆ. ಹೀಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಹೊಸ ತಿಳಸಿ ಗಿಡ ತಂದು ಅದನ್ನು ಪೋಷಿಸುವ ಕ್ರಮವನ್ನು ಅರಿತುಕೊಳ್ಳಿ.

ಪೂಜಾ ನಿಯಮಗಳು

ಪ್ರತಿದಿನ ಸಂಜೆ ಸೂರ್ಯಾಸ್ತಕ್ಕೂ ಮುನ್ನ ಸಂಧ್ಯಾ ದೀಪ ಹಚ್ಚಬೇಕು. ಪುರುಷರು ಮಾತ್ರ ತುಳಸಿ ದಳಗಳನ್ನು ಕೀಳಬೇಕು. ಮಾತೃತ್ವಕ್ಕೆ ಮತ್ತು ಪೋಷಣೆಗೆ ಪ್ರತೀಕವಾಗಿರುವ ಸ್ತ್ರೀಯರು ತುಳಸಿ ಎಲೆಗಳನ್ನು ಕೀಳಬಾರದು ಎಂಬುದು ಹಿರಿಯರ ನಿಯಮವಾಗಿದೆ. ಪುರುಷರು ಮಾತ್ರ ದಳಗಳನ್ನು ಕೊಯ್ಯಬೇಕು.

Also Read
ಮನೆಗೆ ತಂದ ತುಳಸಿ ಗಿಡ ಬೇಗನೆ ಒಣಗ್ತಿದ್ಯಾ?; ಮನೆಯಲ್ಲಿರುವ ನೆಗಟಿವ್​ ಎನರ್ಜಿಯೇ ಕಾರಣ, ವಾಸ್ತು ಪರಿಹಾರವೇನು?.. Vastu Tips
ಎಐ ಚಿತ್ರ

ತುಳಸಿ ದಾನ ಮಾಡುವುದು ಒಳ್ಳೆಯದು

ಮನೆಯಲ್ಲಿ ಲಕ್ಷ್ಮಿ ತುಳಸಿ, ರಾಮ ತುಳಸಿ ಅಥವಾ ಕೃಷ್ಣ ತುಳಸಿಯನ್ನು ಬೆಳೆಸಿಕೊಳ್ಳಬಹುದು. ಹಾಗೆಯೇ, ತುಳಸಿ ಗಿಡಗಳನ್ನು ಇತರರಿಗೆ ದಾನ ಮಾಡುವುದರಿಂದ ನಮ್ಮ ಮನೆಯ ಲಕ್ಷ್ಮಿ ಹೊರಟುಹೋಗುತ್ತಾಳೆ ಎಂಬ ಭಯ ಇಟ್ಟುಕೊಳ್ಳಬೇಕಾಗಿಲ್ಲ. ಸಂತೋಷದಿಂದ ಇತರರಿಗೆ ನೀಡುವುದರಿಂದ ಒಳಿತೇ ಹೊರತು ಕೆಟ್ಟದು ಸಂಭವಿಸುವುದಿಲ್ಲ.

ಕುಂಡದ ಅಂಚಿನಲ್ಲಿ ಒಂದು ಸಣ್ಣ ಮನಿಪ್ಲಾಂಟ್ ಬಳ್ಳಿಯನ್ನು ನೆಟ್ಟರೆ, ಅದು ಮಣ್ಣಿನಲ್ಲಿರುವ ದೋಷಗಳನ್ನು ಹೀರಿಕೊಂಡು ತುಳಸಿ ಗಿಡವು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ, (ಏಜೆನ್ಸೀಸ್).