ಮನುಷ್ಯರಲ್ಲ, ದೆವ್ವಗಳಿಂದ ನಿರ್ಮಾಣವಾಯ್ತು ಈ ಶಿವನ ದೇಗುಲ; ಇದರ ಹಿಂದಿರುವ ನಿಗೂಢ ರಹಸ್ಯವೇನು?..Shiva Temple

Kakanmath Temple
Kakanmath Temple
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದ ಮೊರೆನಾದ ಸಿಹೋನಿಯಾ ಗ್ರಾಮದಲ್ಲಿದೆ ದೆವ್ವ ಕಟ್ಟಿದ ದೇವಸ್ಥಾನ
  • ಒಂದೇ ರಾತ್ರಿಯಲ್ಲಿ ಯಾವುದೇ ಅಂಟಿನ ಸಹಾಯವಿಲ್ಲದೆ ದೇಗುಲ ನಿರ್ಮಿಸಲಾಯ್ತು ಎನ್ನುವುದು ಪ್ರತೀತಿ
  • 11ನೇ ಶತಮಾನದಲ್ಲಿ ರಾಜನೊಬ್ಬ ತನ್ನ ಶಿವಭಕ್ತೆ ಪತ್ನಿಗಾಗಿ ದೇಗುಲ ನಿರ್ಮಿಸಿದ್ದಾನೆ ಎಂದು ಸಹ ಹೇಳಲಾಗುತ್ತದೆ
Kakanmath Temple: ಭಾರತದಲ್ಲಿರುವ ರಾಜಸ್ಥಾನ, ಹಂಪಿ, ದೆಹಲಿ, ಪಂಜಾಬ್, ಹೈದರಾಬಾದ್​​​ ಹೀಗೆ ನಾನಾ ರಾಜ್ಯಗಳು ತನ್ನದೇ ಆದ ಐತಿಹಾಸಿಕ ಹೆಗ್ಗುರುತ್ತನ್ನು ಹೊಂದಿದೆ. ಕೆಲವು ನಿಜವಾದರೆ ಇನ್ನು ಕೆಲವು ಜನರ ಬಾಯಿಂದ ಬಾಯಿಗೆ ಪದವಾಗಿ ಬಂದ ದಂತೆ ಕತೆಗಳು. ಅದೇ ಸಾಲಿನಲ್ಲಿ ಒಂದು ಅದ್ಭುತ ಅಥವಾ ಅಚ್ಚರಿ ಎನಿಸುವ ವಿಚಾರವೊಂದಿದೆ. ಅದೇನು ಎಂದರೆ, ಮಧ್ಯಪ್ರದೇಶದ ಮೊರೆನಾದ ಸಿಹೋನಿಯಾ ಗ್ರಾಮದಲ್ಲಿರುವ ಕಾಕನಮಠ ದೇವಾಲಯವನ್ನು ದೆವ್ವಗಳು ನಿರ್ಮಿಸಿವೆ ಎನ್ನುವುದು.
ಹೌದು, ಸ್ಥಳೀಯ ಜನರ ಪ್ರಕಾರ, ಕಾಕನಮಠ ದೇವಾಲಯವನ್ನು ಅಂದಿನ ಕಾಲದಲ್ಲಿ ಭೂತಗಳು ನಿರ್ಮಿಸಿವೆ ಎಂದು ಹೇಳಿದರೆ, ಕೆಲವರು ರಾಜರ ಕಾಲದಲ್ಲಿ ಕನಕವತಿ ಎನ್ನುವ ರಾಣಿಗಾಗಿ ಕಟ್ಟಿಸಿದ್ದು ಎನ್ನಲಾಗುತ್ತಿದೆ. ಆದರೆ, ಸತ್ಯ ಯಾವುದು ಎನ್ನುವುದು ಇನ್ನು ನಿಗೂಢವಾಗಿ ಉಳಿದಿದೆ. ಅಷ್ಟೇ ಅಲ್ಲದೆ ಬೆಳಂದಿಗಳಲ್ಲಿ ಈ ದೇವಾಲಯದಲ್ಲಿ ದೆವ್ವ ಬಿಡಿಸಲಾಗುತ್ತದೆ ಎನ್ನುವ ಮಾಹಿತಿಯೂ ಇದೆ.

ಏನಿದು ಕತೆ?

ಮೊರೆನಾದಲ್ಲಿರುವ ಕಾಕನಮಠ ದೇವಾಲಯ ಕಟ್ಟಲು ದೆವ್ವಗಳು ರಾತ್ರೋರಾತ್ರಿ ಹೊಲವೊಂದಕ್ಕೆ ಕಲ್ಲುಗಳನ್ನು ರವಾನೆ ಮಾಡಿ ಕಟ್ಟಲು ಶುರು ಮಾಡಿದ್ದರಂತೆ. ಆಗ ಇಡೀ ಪ್ರದೇಶವೇ ನಿದ್ರೆ ಮಾಡುತ್ತಿತ್ತಂತೆ ಈ ಬಗ್ಗೆ ಯಾರಿಗೂ ಅರಿವೇ ಇರಲ್ಲಿಲ್ಲವಂತೆ. ಹೀಗೆ ಕಟ್ಟುತ್ತಲೇ ಇರುವಾಗ ನಸುಕಿನ ಮುಂಜಾನೆಯಲ್ಲಿ ಮಹಿಳೆಯೊಬ್ಬಳು ನೂಲನ್ನು ಎಣೆಯುವ ಶಬ್ಧ ಕೇಳಿ ಬಂದಿತ್ತಂತೆ. ಇದರಿಂದ ಭಯಭೀತರಾದ ದೆವ್ವಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದವು ಎನ್ನಲಾಗುತ್ತದೆ. ಹೀಗಾಗಿಯೇ ಇಂದಿಗೂ ಈ ದೇವಾಲಯದ ನಿರ್ಮಾಣ ಅರ್ಧಂಬರ್ಧವಾಗಿ ಉಳಿದಿದೆ ಎನ್ನಲಾಗುತ್ತದೆ.

ರಾಜ ಕಟ್ಟಿದ ದೇಗುಲವಾ?

ಇತಿಹಾಸದ ಪ್ರಕಾರ, 11 ನೇ ಶತನಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಕಷ್ವಾಹ ರಾಜವಂಶದ ಕೀರ್ತಿರಾಜ್​ನ ಪತ್ನಿ ಕನಕವತಿ ಶಿವನ ಭಕ್ತಳಾಗಿದ್ದ ಕಾರಣ ಆಕೆಗಾಗಿ ಈ ದೇಗುಲವನ್ನು ಕಟ್ಟಿಸಿ, ಪತ್ನಿಯ ಹೆಸರನ್ನೇ ಹೋಲುವ ಕಾಕನ ಮಠ ಹೆಸರಿಟ್ಟರು ಎನ್ನುವುದು ಇದೆ.

ದೇಗುಲದ ವಿಶೇಷತೆ ಏನು?

ಕಾಕನಮಠ ದೇವಾಲಯವು ಸುಣ್ಣ ಮತ್ತು ಸಿಮೆಂಟ್​ ಯಾವುದೇ ವಸ್ತು ಬಳಕೆ ಮಾಡದೇ ಒಂದೇ ರಾತ್ರಿಯಲ್ಲಿ ಕಟ್ಟಿದ ದೇಗುಲ ಎನ್ನಲಾಗುತ್ತದೆ. ಇದು ಗ್ವಾಲಿಯರ್​ನಿಂದ ಸುಮಾರು 75 ಕಿ.ಮೀ ದೂರದಲ್ಲಿದೆ. ನೆಲಮಟ್ಟದಿಂದ 115 ಕಿಮೀ ಎತ್ತರದಲ್ಲಿರುವ ಈ ದೇವಾಲಯ ನಿಗೂಢ ದೇಗುಲವಾಗಿ ಪ್ರಸಿದ್ಧಿ ಪಡೆದಿದೆ ಎನ್ನಲಾಗುತ್ತಿದೆ. ಇದರ ಗರ್ಭಗುಡಿಯಲ್ಲಿ ಶಿವನನ್ನು ಸ್ಥಾಪಿಸಲಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ವಾಸ್ತುಶಿಲ್ಪ ಹಲವರ ಗಮನವನ್ನು ಸೆಳೆಯುತ್ತದೆ. ಗಣೇಶನ ವಿಗ್ರಹ, ದೇವತೆಗಳ ನಾಟ್ಯ ಪ್ರದರ್ಶನ, ಷಣ್ಮುಖ ಸೇರಿ ಹಲವು ಕೆತ್ತನೆಗಳು ಇಲ್ಲಿವೆ. ಹೀಗಾಗಿ ಇವನ್ನು ದೆವ್ವಗಳು ನಿರ್ಮಿಸಿರೋದಿಲ್ಲ ಎನ್ನುವುದು ಇತಿಹಾಸಕಾರರ ಸಂಶಯ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net