ವಯನಾಡಿನಲ್ಲಿ ಒಟ್ಟು ಮೂರ್ನಾಲ್ಕು ಪೋಸ್ಟರ್ ಅಂಟಿಸಲಾಗಿದ್ದು ಅದರಲ್ಲಿ ಹೀಗಿದೆ, 'ವಯನಾಡನ್ನು ಮರೆತು ಬಿಡಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕರನ್ನು ಮತ್ತೆ ಗೆಲ್ಲಿಸೋದಿಲ್ಲ. ಚುನಾವಣೆಗೆ ನಿಲ್ಲಬೇಡಿ ಎಂದು. ಮತ್ತೊಂದರಲ್ಲಿ ಕೆಸಿ ವೇಣುಗೋಪಾಲ್ ನಿಮ್ಮ ಬ್ಯಾಗ್ ಹೊರುವವರು ಆಗಿರಬಹುದು ಆದರೆ, ನಿಮ್ಮ ಮೇಲೆ ಇಲ್ಲಿನ ಜನಕ್ಕೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೂರನೇ ಪೋಸ್ಟರ್ನಲ್ಲಿ ಆರ್ಜಿ ಮತ್ತು ಪಿಜಿ ಇದು ಎಚ್ಚರಿಕೆ ಅಲ್ಲ. ಈ ತಪ್ಪಿಗಾಗಿ ನಿಮ್ಮನ್ನು ಎಂದಿಗೂ ಕೇರಳದ ನಿಮ್ಮ ಬ್ಲಂಡರ್ ಅನ್ನು ಮರೆಯೋದಿಲ್ಲ. 2019ರಲ್ಲಿ ರಾಹುಲ್ ಗಾಂಧಿಯವರ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರವನ್ನು ಸೋತಿದ್ದರು. ಮುಂದಿನ ದಿನದಲ್ಲಿ ಪ್ರಿಯಾಂಕಾ ಗಾಂಧಿಯವರು ವಯನಾಡಿನಲ್ಲಿ ಈ ಸಮಸ್ಯೆ ಎದುರಿಸಬಹುದು' ಎಂದು ಇಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟರ್ ಅಂಟಿಸಲಾಗಿದೆ.