ಜನ್ಮದಿನಾಂಕದಲ್ಲಿದೆ ನಿಮ್ಮ ವೃತ್ತಿ ಜೀವನದ ರಹಸ್ಯ ವಿಚಾರ: ತಿಳಿಯೋದು ಇಷ್ಟೇ ಸಿಂಪಲ್​..Career prediction by birth date

Career prediction by birth date
Career prediction by birth date
Published on

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಜನ್ಮದಿನದಲ್ಲಿದೆ ನಿಮ್ಮ ಮುಂದಿನ ಯಶಸ್ಸಿನ ಗುಟ್ಟು
  • ಜನ್ಮದಿನದ ಮೂಲಕ ಭವಿಷ್ಯದ ಬಗ್ಗೆ ಮಾಹಿತಿ ಪಡೆಯೋದು ಹೇಗೆ?
  • ನಿಮ್ಮ ಜನ್ಮದಿನ, ವರ್ಷ ತಿಂಗಳನ್ನು ಗುಣಿಸಿ ಭವಿಷ್ಯದ ಬಗ್ಗೆ ಮಾಹಿತಿ ಪಡೆಯಿರಿ
Career prediction by birth date: ಎಐ, ಕಂಪ್ಯೂಟರ್​ ಬಳಕೆ, ರೋಬೋಟ್​ಗಳ ಬಳಕೆ ಮಾಡುತ್ತಿರುವ ಈ ಹೊತ್ತಿನಲ್ಲಿಯೂ ಅನೇಕರು ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗುತ್ತಾರೆ. ಹೀಗಾಗಿಯೇ ಭಾರತದ ಪ್ರತಿ ರಾಜ್ಯದ, ಜಿಲ್ಲೆಯ ಗ್ರಾಮಗಳ ಗಲ್ಲಿ ಗಲ್ಲಿಯಲ್ಲಿಯೂ ಜ್ಯೋತಿಷಗಳ ಕಚೇರಿಯಿರುತ್ತದೆ, ದೇವಸ್ಥಾನದ ಮುಂದೆ ಕಣಿ ಹೇಳೋರು ಇರುತ್ತಾರೆ. ಎಲ್ಲರಿಗೂ ಭವಿಷ್ಯ ಏನಾಗುತ್ತದೆ ಎಂದು ತಿಳಿದುಕೊಳ್ಳೋದೆ ಒಂದು ಕುತೂಹಲ.
ಜ್ಯೋತಿಷ್ಯ ಶಾಸ್ತ್ರದಲ್ಲಿನ ಸಂಖ್ಯಾ ಶಾಸ್ತ್ರಕ್ಕೆ ತುಂಬಾನೆ ಪ್ರಾಮುಖ್ಯತೆ ಇದೆ. ಹುಟ್ಟಿದ ದಿನಾಂಕದ ಮೂಲಕ ಮುಂದಿನ ಭವಿಷ್ಯ, ಸರ್ಕಾರಿ ಕೆಲಸ, ಜೀವನದ ಹಾದಿ, ವೃತ್ತಿ ಜೀವನದ ಅಂಶವನ್ನು ಅಳೆಯುವ ಪ್ರಬಲ ಅಂಶವಾಗಿದೆ. ನಿಮ್ಮ ಜನ್ಮ ದಿನಾಂಕದ ಮೂಲಕ ನಿಮ್ಮ Radix Number ನಂಬರ್​ ಪತ್ತೆ ಹಚ್ಚಿ ಯಾವ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಬಹುದು. ಅದು ಹೇಗೆ ಅನ್ನೋದಕ್ಕೆ ಮಾಹಿತಿ ಇಲ್ಲಿದೆ.

ಮೂಲಾಂಕ ತಿಳಿಯೋದು ಹೇಗೆ?

ನಿಮ್ಮ ಹುಟ್ಟಿದ ದಿನಾಂಕವನ್ನು ಒಂದೇ ಅಂಕಿಗೆ ತರುವುದು ಮೂಲಾಂಕ ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 6-08-1999 ಇದ್ದರೆ ಅದನ್ನು 6+8+1+9+9+9=42= 4+2=6 ಎಂದು ಕೂಡುವುದು ಇದಕ್ಕೆ ಸಿಗುವ 6 ಉತ್ತರವೇ ಮೂಲಾಂಕ ಎನ್ನಲಾಗುತ್ತದೆ.

ಯಾವ ಮೂಲಾಂಕವು ಏನು ಹೇಳುತ್ತದೆ?

1ರಿಂದ ಮೂರು ಯಾರಿಗೆ ಅದೃಷ್ಟ, ನಷ್ಟ?

1ರಿಂದ3ರವರೆಗೆ ಮೂಲಾಂಕ ಪಡೆದುಕೊಳ್ಳುವವರು ಬಹಳ ಅದೃಷ್ಟವಂತರು, ಕಷ್ಟಪಟ್ಟು ಕೆಲಸ ಮಾಡಿ ತತಮ್ಮ ಜೀವನವನ್ನು ಉತ್ತುಂಗದಲ್ಲಿರಿಸಲು ಯತ್ನಿಸುತ್ತಾರೆ. ಅವರು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಸಹ 27ನೇ ವಯಸ್ಸಿನವರೆಗೂ ಅವರು ಯಶಸ್ಸು ಕಾಣುವುದಿಲ್ಲ. ಮೂಲಂಕ 1 ಇರುವವರ ವಯಸ್ಸು 22ರಿಂದ 28 ವರದಷದವರು ಇನ್ನು 27ರಿಂದ 32 ವರ್ಷದವರ ರಾಡಿಕ್ಸ್​ ಸಂಖ್ಯೆ 3 ಇವರು ಅದೃಷ್ಟವಂತರು.

4ರಿಂದ 6ರವರೆಗಿನವ ಭವಿಷ್ಯ ಹೇಗಿರಲಿದೆ?

4ರಿಂದ 6ರವರೆಗೆ ಮೂಲಾಂಕ ಹೊಂದಿರುವವರು ಬದುಕಿನಲ್ಲಿ ಅನಿರೀಕ್ಷಿತ ಯಶಸ್ಸು ಕಾಣುತ್ತಾರೆ. 5 ಮೂಲಸಂಖ್ಯೆ ಇದ್ದರೆ ಅವರು ಅದೃಷ್ಟವಂತರು. ಚಿಕ್ಕಂದಿನಲ್ಲೇ ಅನಿರೀಕ್ಷಿತವಾಗಿ ಜೀವನವನ್ನು ಬದಲಾಯಿಸುತ್ತಾರೆ. ದೊಡ್ಡ ಮಟ್ಟಕ್ಕೆ ತಲುಪುತ್ತಾರೆ. ಇವರ ವಯಸ್ಸು 21ರಿಂದ 28 ವಯಸ್ಸಿನ ಒಳಗೆ ಯಶಸ್ಸು ಕಾಣುತ್ತಾರೆ. ನಾಲ್ಕನೇ ಮೂಲ ಸಂಖ್ಯೆ ಹೊಂದಿರುವವರು ಜೀವನದಲ್ಲಿ ಬಹಳ ತಡವಾಗಿ ಯಶಸ್ಸನ್ನು ಸಾಧಿಸುತ್ತಾರೆ. ವಿಶೇಷವಾಗಿ ವರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದ ನಂತರವೇ ಯಶಸ್ವಿಯಾಗುತ್ತಾರೆ. ಇವರ ವಯಸ್ಸು 32ರಿಂದ 36 ವಯಸ್ಸಿನ ಒಳಗೆ ಯಶಸ್ಸು ಕಾಣುತ್ತಾರೆ. 6 ಮೂಲಾಂಕ ಹೊಂದಿರುವವರು 25ರಿಂದ 31ವಯಸ್ಸಿನ ಒಳಗೆ ಯಶಸ್ಸು ಕಾಣುತ್ತಾರೆ.

7ರಿಂದ 9 ಮೂಲಾಂಕ ಹೊಂದಿರುವವರ ಬದದುಕು ಹೀಗಿರುತ್ತದೆ..

7ರಿಂದ 9 ಮೂಲಾಂಕ ಸಿಗುವ ವ್ಯಕ್ತಿಗಳು ತುಂಬಾ ಬುದ್ಧಿವಂತರು. ಮೂಲ ಸಂಖ್ಯೆ 7 ಹೊಂದಿರುವವರು 28 ರಿಂದ 34 ವರ್ಷದ ವಯಸ್ಸನ್ನು ದಾಟುವ ವೇಳೆಗೆ ಯಶಸ್ಸು ಕಾಣುತ್ತಾರೆ. 8 ಮೂಲಾಂಕ ಹೊಂದುವವರು 26 ರಿಂದ 33 ವರ್ಷದೊಳಗಿನವರು ಯಶಸ್ಸನ್ನು ಕಾಣುತ್ತಾರೆ. 9 ಸಂಖ್ಯೆ ಹೊಂದಿರುವವರು 26 ರಿಂದ 33 ವರ್ಷದ ವಯಸ್ಸನ್ನು ದಾಟುವ ವೇಳೆ ಯಶಸ್ಸನ್ನು ಕಾಣುತ್ತಾರೆ ಎನ್ನಲಾಗಿದೆ(ಏಜೆನ್ಸೀಸ್).
ಗಮನಿಸಿ: ಮೇಲಿನ ಮಾಹಿತಿಯನ್ನು ಇಂಟರ್ನೆಟ್​ನಲ್ಲಿ ಸಿಕ್ಕ ಮಾಹಿತಿಯ ಆಧಾರವನ್ನು ಸಂಗ್ರಹಿಸಿ ಲೇಖನ ಬರೆಯಲಾಗಿದೆ. ಇದನ್ನು ವಿಜಯವಾಣಿ ಡಾಟ್​ ಕಾಮ್​ ದೃಢ ಪಡಿಸೋದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net