ತುಳಸಿ ಮಾಲೆ ಧರಿಸಿರುವವರು ಈರುಳ್ಳಿ-ಬೆಳ್ಳುಳ್ಳಿಯುಳ್ಳ ಆಹಾರ ಸೇವನೆ ಮಾಡಬಹುದೇ?; ಇಲ್ಲಿವೆ ಧಾರ್ಮಿಕ ನಿಯಮಗಳು..Tulasi Mala

 ತುಳಸಿ ಮಾಲೆ ಧರಿಸಿರುವವರು ಈರುಳ್ಳಿ-ಬೆಳ್ಳುಳ್ಳಿಯುಳ್ಳ ಆಹಾರ ಸೇವನೆ ಮಾಡಬಹುದೇ?; ಇಲ್ಲಿವೆ ಧಾರ್ಮಿಕ ನಿಯಮಗಳು..Tulasi Mala
Published on: 
  • ತುಳಸಿ ಮಾಲೆಗೆ ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಸ್ಥಾನವಿದೆ

  • ತುಳಸಿ ಮಾಲೆಯನ್ನು ಧರಿಸಿದಾಗ ಈರುಳ್ಳಿ-ಬೆಳ್ಳುಳ್ಳಿ ಆಹಾರ ಸೇವನೆ ತಪ್ಪಿಸಬೇಕು

  • ಮುಟ್ಟಿನ ಸಮಯದಲ್ಲಿ ತುಳಸಿ ಮಾಲೆ ತೆಗೆದಿಡಬೇಕು ಎನ್ನುವ ನಿಯಮವಿಲ್ಲ

Tulsi Mala rules: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದೆ. ವೈಷ್ಣವ ಸಂಪ್ರದಾಯದಲ್ಲಿ ತುಳಸಿಯನ್ನು ಕೃಷ್ಣನಿಗೆ ಸಮಾನವಾಗಿ ಪೂಜೆ ಮಾಡಲಾಗುತ್ತದೆ. ಹೀಗಾಗಿಯೇ ತುಳಸಿ ಹಬ್ಬದಂದು ಕೃಷ್ಣನ ಪೂಜೆಗೂ ಪ್ರಾಶಸ್ತ್ಯ ನೀಡಲಾಗುತ್ತದೆ. ಹಲವರಿಗೆ ಕಾಡುವ ಗೊಂದಲ ಎಂದರೆ ಒಣಗಿದ ತುಳಸಿಯಿಂದ ತಯಾರಿಸಿದ ಮಾಲೆಯನ್ನು ಧರಿಸಿದ ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಧರಿಸಬೇಕಾ ಎನ್ನುವುದು. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

  • ತುಳಸಿ ಮಾಲೆ ಧರಿಸಿ ಈರುಳ್ಳಿ-ಬೆಳ್ಳುಳ್ಳಿ ತಿಂದರೆ ಏನಾಗುತ್ತದೆ?

ಸಾಮಾನ್ಯವಾಗಿ ಬ್ರಾಹ್ಮಣ ಮತ್ತು ಲಿಂಗಾಯತರು ಬೆಳ್ಳುಳ್ಳಿ ಹಾಗೂ ಈರುಳ್ಳಿಯಿಂದ ತಯಾರಿಸಿದ ಆಹಾರವನ್ನು ತಿನ್ನುವುದಿಲ್ಲ. ಆದರೆ, ಕೃಷ್ಣನಿಗಾಗಿ ಹಲವರು ತುಳಸಿ ಮಾಲೆ ಧರಿಸುತ್ತಾರೆ. ಅಂತವರು ಆ ಮಾಲೆಯನ್ನು ಧರಿಸಿದ ನಂತರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ತಯಾರಿಸಿದ ಆಹಾರವನ್ನು ಸೇವಿಸಬೇಕೋ ಅಥವಾ ಬೇಡವೋ ಎನ್ನುವುದೇ ಗೊಂದಲ. ಭಕ್ತಿ ಮಾರ್ಗ ಅನುಸರಿಸುವವರು ಈರುಳ್ಳಿ ಹಾಗೂ ಬೆಳ್ಳುಳ್ಳಿ ಇರುವ ಆಹಾರವನ್ನು ಸೇವಿಸದೇ ಇರುವುದು ಒಳಿತು ಎನ್ನಲಾಗುತ್ತದೆ. ಆಧ್ಯಾತ್ಮಿಕ ಮಾಲೆಯನ್ನು ಧರಿಸುವವರು ತಮ್ಮ ಆಹಾರ ಪದ್ಧತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆ ಮಾಡಬೇಕು.

  • ತುಳಸಿ ಮಾಲೆ ಏಕೆ ತೆಗೆಯಬೇಕು?

ನೀವು ಈರುಳ್ಳಿ ಮತ್ತು ಬೆಳ್ಳುಳ್ಳಿ ಮಿಶ್ರಣದ ಆಹಾರವನ್ನು ಸೇವನೆ ಮಾಡುವಾಗ ತಾತ್ಕಾಲಿಕವಾಗಿ ತುಳಸಿ ಮಾಲೆಯನ್ನು ತೆಗೆದು ಹಾಕಬೇಕು ಎನ್ನಲಾಗಿದೆ. ಊಟವಾದ ನಂತರ ನಿಮ್ಮ ಕೈ ಕಾಲು ಮುಖ ಸ್ವಚ್ಛಗೊಳಿಸಿ ಆನಂತರ ಪವಿತ್ರವಾದ ತುಳಸಿ ಮಾಲೆ ಧರಿಸಬೇಕು ಎನ್ನುವುದು ಇದೆ. ವೈಷ್ಣವ ಸಂಪ್ರದಾಯದ ಪ್ರಕಾರ ಎಂದಿಗೂ ತುಳಸಿ ಮಾಲೆ ತೆಗೆದು ಹಾಕಬಾರದು ಎನ್ನುವ ನಂಬಿಕೆ ಇದೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಆಹಾರ ಸೇವನೆ ಎಂದು ಬಂದಾಗ ಅದನ್ನು ತಾತ್ಕಾಲಿಕವಾಗಿ ತೆಗೆದು ಹಾಕುವುದು ಒಳಿತು ಎನ್ನಲಾಗುತ್ತದೆ.

  • ಮಲಗುವಾಗ ತುಳಸಿ ಮಾಲೆ ಧರಿಸಬೇಕೆ?

ಮಲಗುವಾಗ ತುಳಸಿ ಮಾಲೆಯನ್ನು ಧರಿಸುವುದು ಹೆಚ್ಚು ಒಳಿತು ಎನ್ನಲಾಗಿದೆ. ವೈಷ್ಣವ ಸಂಪ್ರದಾಯದಲ್ಲಿ ತುಳಸಿ ಮಾಲೆ ಪವಿತ್ರ ಎಂದು ಪರಿಗಣಿಸಲಾಗಿದೆ. ಮಲಗುವಾಗ ತುಳಸಿ ಮಾಲೆಯನ್ನು ಯಾವುದೇ ಭಯವಿಲ್ಲದೆ ಆರಾಮದಾಯಕವಾಗಿ ಧರಿಸಬಹುದು.

  • ಮುಟ್ಟು, ಸ್ನಾನದ ಸಮಯದಲ್ಲಿ ತುಳಸಿ ಮಾಲೆಯನ್ನು ತೆಗೆದಿಡಬೇಕೆ?

ಮುಟ್ಟಿನ ಸಮಯದಲ್ಲಿ ತುಳಸಿ ಮಾಲೆ ತೆಗೆದು ಹಾಕಬೇಕು ಎನ್ನುವುದು ಎಲ್ಲಿಯೂ ಇಲ್ಲ. ಎಲ್ಲ ಸಮಯದಲ್ಲಿಯೂ ತುಳಬಸಿ ಮಾಲೆ ಪವಿತ್ರ. ಸ್ನಾನದ ಸಮಯದಲ್ಲಿ ತುಳಸಿ ಮಾಲೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದು ಹಾಕಬಹುದು. ಅಥವಾ ಧರಿಸಿಯೇ ಸ್ನಾನ ಮಾಡಬಹುದು ಎಲ್ಲವೂ ಅವರ ಅವರ ಇಚ್ಛೆ ಎನ್ನಲಾಗಿದೆ.

  • ಈ ವಿಷಯ ನೆನಪಿರಲಿ

ತುಳಸಿ ಮಾಲೆ ಧರಿಸಿದ ನಂತರ ಸಾತ್ವಿಕ ಆಹಾರವನ್ನೇ ಸೇವನೆ ಮಾಡಬೇಕು. ಆಗಾಗ್ಗೆ ಮಾಲೆಯನ್ನು ಸ್ವಚ್ಛವಾಗಿಡುವಂತೆ ನೋಡಿಕೊಳ್ಳಿ. ತುಳಸಿ ಮಾಲೆಯನ್ನು ಧರಿಸಿದ ನಂತರ ಪ್ರಾಮಾಣಿಕತೆ, ಆಧ್ಯಾತ್ಮಿಕತೆ ಹಾಗೂ ಒಳ್ಳೆಯ ವ್ಯಕ್ತಿತ್ವ, ನಡೆವಳಿಕೆಯಲ್ಲಿಯೂ ಶುದ್ಧತೆ, ಪ್ರಾಮಾಣಿಕತೆ ಇರಬೇಕು ಎನ್ನಲಾಗುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net