'ನಿಮ್ಮ ಪ್ರೀತಿ, ಸಂಬಂಧ ಗಟ್ಟಿಯಾಗಿ ಉಳಿಯಬೇಕಾ?; ವಾಸ್ತು ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ..Vastu Tips For Love

'ನಿಮ್ಮ ಪ್ರೀತಿ, ಸಂಬಂಧ ಗಟ್ಟಿಯಾಗಿ ಉಳಿಯಬೇಕಾ?; ವಾಸ್ತು ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ..Vastu Tips For Love
Published on: 
  • ಪ್ರೀತಿ ಪಾತ್ರರನ್ನು ಸೆಳೆಯಲು ವಾಸ್ತು ಪ್ರಕಾರ ಮನೆಯಲ್ಲಿ ಈ ಬದಲಾವಣೆಗಳನ್ನು ತನ್ನಿ.

  • ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡಬೇಕು.

  • ಕೃಷ್ಣ-ರಾಧೆ ಫೋಟೊ, ಜೋಡಿ ವಸ್ತುಗಳನ್ನು ಮಲಗುವ ಕೋಣೆಯಲ್ಲಿಟ್ಟು ನೋಡಿ.

Vastu Tips For Love : ಜೀವನವಿಡೀ ಜೊತೆಗಿರುವ ಸಂಗಾತಿಯನ್ನು ಬಯಸುವುದು ಎಲ್ಲರ ಆಶಯ. ನಮ್ಮಂತೆ ಚಿಂತನೆ, ಹೊಂದಾಣಿಕೆ..ಖರ್ಚು ವೆಚ್ಚ ಸೇರಿದಂತೆ ಪ್ರತಿ ವಿಚಾರದಲ್ಲಿಯೂ ಸರಿದೂಗಿಸಿಕೊಂಡು ಹೋಗುವ ಒಬ್ಬ ಅಥವಾ ಒಬ್ಬಳು ಜೀವನಕ್ಕೆ ಎಂಟ್ರಿಯಾಗಬೇಕು ಎಂದು ಹಲವರು ಬಯಸುತ್ತಾರೆ. ಆದರೆ, ಕೆಲವೊಂದು ಕಹಿ ಘಟನೆಗಳು ಪ್ರೀತಿ, ಮದುವೆ ಮತ್ತು ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ರೀತಿಯ ಪ್ರೀತಿ-ಸಂಬಂಧದ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಾಚೀನ ವಾಸ್ತು ಶಾಸ್ತ್ರವು ಕೆಲವು ಅತ್ಯಂತ ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ನೀವು ವಾಸ ಮಾಡುವ ಸ್ಥಳದಲ್ಲಿ ಕೆಲವೊಂದು ಬದಲಾವಣೆ ತಂದರೆ ಖಂಡಿತ ಪ್ರೀತಿ ಮತ್ತು ಸಂಬಂಧಗಳಲ್ಲಿ ಸಮತೋಲನವನ್ನು ತರಬಹುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಖ-ಜೀವನ ನಡೆಸಬಹುದು ಎಂದು ನಂಬಲಾಗಿದೆ. ಹಾಗಾದರೆ, ಸಂಬಂಧಗಳಲ್ಲಿ ನೆಮ್ಮದಿ ತರಲು ನೆರವಾಗುವ ಪ್ರಮುಖ ವಾಸ್ತು ಸಲಹೆಗಳು ಯಾವುದು ಎನ್ನುವುದು ನೋಡೋಣ.

ಕ್ವಾರ್ಟ್ಜ್ ಸ್ಫಟಿಕ ಇರಿಸಿ

ನಿಮ್ಮ ಪ್ರೀತಿ ಪಾತ್ರರನ್ನು ಒಲಿಸಿಕೊಳ್ಳಲು..ಸದಾ ನಿಮ್ಮ ಮೇಲೆ ಪ್ರೇಮವಿಟ್ಟಿರುವಂತೆ ನೋಡಿಕೊಳ್ಳಲು ರೋಸ್ ಕ್ವಾರ್ಟ್ಜ್ ಅನ್ನು ನೀವು ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ಇಡಿ. ರೋಸ್ ಕ್ವಾರ್ಟ್ಜ್ ಹಾರ್ಟ್ ಜೋಡಿಯನ್ನು ಇರಿಸುವುದರಿಂದ ಪ್ರೀತಿಯ ಶಕ್ತಿ ಮತ್ತು ಭಾವನಾತ್ಮಕ ನಂಟು ಹೆಚ್ಚಾಗುತ್ತದೆ.

ಜೋಡಿ ವಸ್ತುಗಳನ್ನು ಇಡಿ

ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಮೂಡದೇ ಇರಲು. ಹೊಂದಾಣಿಕೆಯಿಂದ ಬಾಳುವಂತೆ ಮಾಡಲು ನಿಮ್ಮ ಮಲಗುವ ಕೋಣೆಯಲ್ಲಿ ಯಾವಾಗಲೂ ಜೋಡಿ ವಸ್ತುಗಳನ್ನು ಇಡಿ. ಉದಾಹರಣೆಗೆ ಪಕ್ಷಿಗಳು ಅಥವಾ ಎರಡು ಹೃದಯದ ಆಕಾರದ ವಸ್ತುಗಳು ಸೇರಿದಂತೆ ಹಲವು. ಇದು ಒಗ್ಗಟ್ಟು ಮತ್ತು ಪಾಲುದಾರಿಕೆಯನ್ನು ಸೂಚಿಸುತ್ತದೆ. ಮನೆಯಲ್ಲಿ ಒಂಟಿ ಕುರ್ಚಿ, ಒಂಟಿ ಪ್ರತಿಮೆ ಇಡಬೇಡಿ. ಈ ಒಂಟಿ ಅಲಂಕಾರಿಕ ವಸ್ತು ಒಂಟಿತನದ ಭಾವನೆಯನ್ನು ಹೆಚ್ಚಿಸಬಹುದು.

Also Read
ಮನೆಗೆ ತಂದ ತುಳಸಿ ಗಿಡ ಬೇಗನೆ ಒಣಗ್ತಿದ್ಯಾ?; ಮನೆಯಲ್ಲಿರುವ ನೆಗಟಿವ್​ ಎನರ್ಜಿಯೇ ಕಾರಣ, ವಾಸ್ತು ಪರಿಹಾರವೇನು?.. Vastu Tips
'ನಿಮ್ಮ ಪ್ರೀತಿ, ಸಂಬಂಧ ಗಟ್ಟಿಯಾಗಿ ಉಳಿಯಬೇಕಾ?; ವಾಸ್ತು ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ..Vastu Tips For Love

ಕಣ್ಣಿಗೆ ಕುಕ್ಕುವ ಬಣ್ಣ ಬೇಡ

ನೀವು ಮಲಗುವ ಕೋಣೆಯಲ್ಲಿ ಪೀಚ್​ ಕಲರ್​ ಬಣ್ಣದ ಪೇಂಟ್ ಇರಲಿ. ಎದ್ದ ತಕ್ಷಣ ಮನಸ್ಸಿಗೆ ಕಿರಿಕಿರಿ ಮಾಡುವ, ಅಥವಾ ಮಲಗುವಾಗ ಇರಿಟೇಟ್ ಮಾಡುವ ಬಣ್ಣವನ್ನು ಮಲಗುವ ಕೋಣೆಗೆ ಹಚ್ಚುವುದು ಬೇಡ. ಗುಲಾಬಿ, ತಿಳಿ ಹಸಿರು, ರೋಸ್ ಅಥವಾ ತಿಳಿ ಕೆಂಪು ಬಣ್ಣದಂತಹ ಶಾಂತ ಮತ್ತು ರೋಮ್ಯಾಂಟಿಕ್ ಬಣ್ಣಗಳನ್ನು ಬಳಸುವಂತೆ ವಾಸ್ತು ಹೇಳುತ್ತದೆ. ಕಪ್ಪು, ಬೂದು ಅಥವಾ ಕಂದು ಬಣ್ಣದಂತಹ ಗಾಢ ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ.

ಮನೆಯ ನೈಋತ್ಯ ದಿಕ್ಕು ಸ್ವಚ್ಛವಾಗಿರಲಿ

ವಾಸ್ತು ಶಾಸ್ತ್ರದ ಪ್ರಕಾರ, ನೈಋತ್ಯ ದಿಕ್ಕು ಪ್ರೀತಿ, ಸ್ಥಿರತೆ ಮತ್ತು ದೀರ್ಘಕಾಲೀನ ಸಂಬಂಧಗಳೊಂದಿಗೆ ನೇರ ಸಂಬಂಧ ಹೊಂದಿದೆ. ನಿಮ್ಮ ಮನೆಯ ಈ ಮೂಲೆ ಅಸ್ತವ್ಯಸ್ತವಾಗಿದ್ದರೆ, ಕೊಳೆಯಾಗಿದ್ದರೆ ಅಥವಾ ಒಡೆದ ವಸ್ತುಗಳಿದ್ದರೆ ಇದು ಪ್ರೀತಿಯ ಶಕ್ತಿಯನ್ನು ಕುಂದಿಸುತ್ತದೆ.

ಈ ದಿಕ್ಕಿನಲ್ಲಿ ಮಂಚ ಇರಲಿ

ನೀವು ಮಲಗುವ ಕೋಣೆಯಲ್ಲಿ ಮಂಚ ನೈಋತ್ಯ ದಿಕ್ಕಿನಲ್ಲಿರಲಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಇಷ್ಟೇ ಅಲ್ಲದೆ ನಿಮ್ಮ ತಲೆಯು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಈ ವ್ಯವಸ್ಥೆಯು ಮಾನಸಿಕ ಸ್ಥಿರತೆ ಭಾವನಾತ್ಮಕ ಭದ್ರತೆಯನ್ನು ಮೂಡಿಸುತ್ತದೆ.

ಹೂವುಗಳಿಂದ ಕೋಣೆ ಇರಲಿ

ಮಲ್ಲಿಗೆ, ಗುಲಾಬಿ ಮತ್ತು ಚಂದನದ ಸುವಾಸನೆ ಭರಿತ ಹೂಗಳನ್ನು ಮಲಗುವ ಕೋಣೆಯಲ್ಲಿರಲಿ. ಸೆನ್ಸುಯಲ್ ಮತ್ತು ಆಹ್ವಾನಿಸುವ ವಾತಾವರಣವನ್ನು ಸೃಷ್ಟಿಸಲು ಎಸೆನ್ಷಿಯಲ್ ಆಯಿಲ್, ಧೂಪದ್ರವ್ಯ ಅಥವಾ ಅರೋಮಾ ಡಿಫ್ಯೂಸರ್‌ಗಳನ್ನು ಬಳಸಿ. ಇದರೊಂದಿಗೆ ತಾಜಾ ಹೂವುಗಳನ್ನು, ವಿಶೇಷವಾಗಿ ಪ್ರೀತಿಯ ಸಂಕೇತವಾದ ಪಿಯೋನಿ ಹೂವುಗಳನ್ನು ಕೋಣೆಯಲ್ಲಿಡಿ.

ರಾಧಾ-ಕೃಷ್ಣನ ಚಿತ್ರ ಇರಲಿ

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ನೀವು ಪ್ರತಿದಿನ ನೋಡಬಹುದಾದ ಜಾಗದಲ್ಲಿ ರಾಧಾ-ಕೃಷ್ಣನ ಚಿತ್ರವನ್ನು ಇರಿಸಿ. ಇದು ಶುದ್ಧ ಪ್ರೀತಿಯ ಸಂಕೇತವಾಗಿದ್ದು, ನಿಮ್ಮ ಜೀವನಕ್ಕೆ ಪ್ರೀತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net