ನಿತ್ಯ ಭವಿಷ್ಯ: ಈ ರಾಶಿಯವರ ಕಠಿಣ ಶ್ರಮಕ್ಕೆ ಸೂಕ್ತ ಫಲ ಸಿಗಲಿದೆ

Nitya Bhavishya
Nitya Bhavishya
Published on
ಮೇಷ: ಪಾರಂಪರಿಕ ವ್ಯವಹಾರಗಳಲ್ಲಿ ಮುನ್ನಡೆಯಾಗುವುದು. ಸಿನಿಮಾ ರಂಗದವರಿಗೆ ಶುಭ. ಕೃಷಿಕರಿಗೆ ಆದಾಯದಲ್ಲಿ ಏರಿಕೆ. ಶುಭಸಂಖ್ಯೆ: 7
ವೃಷಭ: ಸಾಲ ತೀರಿಸಲು ಸ್ನೇಹಿತರ ಸಹಕಾರ ಸಿಗಲಿದೆ. ವಿವಾಹಕಾಂಗಳಿಗೆ ಶುಭದಿನ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ.ಶುಭಸಂಖ್ಯೆ:1
ಮೀಥುನ: ಹೊಸ ಕೆಲಸದಲ್ಲಿ ಜಯವಾಗುವುದು. ಕಠಿಣ ಶ್ರಮಕ್ಕೆ ಸೂಕ್ತ ಫಲ ಸಿಗಲಿದೆ. ಕುಟುಂಬದ ಸದಸ್ಯರಿಂದ ನೆರವು ದೊರೆಯುವುದು. ಶುಭಸಂಖ್ಯೆ:3
ಕಟಕ: ಆರ್ಥಿಕ ಸ್ಥಿತಿಯಲ್ಲಿ ನಿರೀಕ್ಷಿತ ಪ್ರಗತಿಯಾಗುವುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಿ. ಆಹಾರ ಧಾನ್ಯಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:8
ಸಿಂಹ: ಕಾರ್ಮಿಕ ಸಮುದಾಯದವರಿಗೆ ಶುಭಸಮಾಚಾರ. ಉದ್ಯೋಗದಲ್ಲಿ ಅಭಿವೃದ್ಧಿ. ಕರಕುಶಲ ವಸ್ತುಗಳ ತಯಾರಕರಿಗೆ ಶುಭದಿನ. ಶುಭಸಂಖ್ಯೆ:6
ಕನ್ಯಾ: ಉದ್ಯೋಗ ಪ್ರಾಪ್ತಿಗೆ ಗಣ್ಯರ ಸಹಾಯ ಸಹಕಾರಿ. ಸಾರ್ವಜನಿಕ ಕೆಲಸದಲ್ಲಿ ಒತ್ತಡ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 2
ತುಲಾ: ನಿಮ್ಮ ಯೋಚನೆಗಳು ಕೈಗೂಡಲಿವೆ. ಕಟ್ಟಡ ವಿನ್ಯಾಸಕರಿಗೆ ಲಾಭದಾಯಕ ದಿವಸ. ಕಚೇರಿಯಲ್ಲಿ ಮಾತುಗಳಿಂದ ಮುಜುಗರ. ಶುಭಸಂಖ್ಯೆ:7
ವೃಶ್ಚಿಕ: ಆದಾಯದಲ್ಲಿ ಸ್ಥಿರತೆ ಮುಂದುವರಿಯುವುದು. ಪರಿಸರವಾದಿಗಳಿಗೆ ಸಮಾಜದ ಗೌರವ. ಸ್ವಯಂ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ:1
ಧನುಸ್ಸು: ಬಂಧುಗಳಿಂದ ಸೂಕ್ತ ಮಾರ್ಗದರ್ಶನ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ನೌಕರರಿಗೆ ಅಧಿಕಾರಿಗಳಿಂದ ಸಹಾಯ.ಶುಭಸಂಖ್ಯೆ:3
ಮಕರ: ವಿಚ್ಛೇದಿತರಿಗೆ ವಿವಾಹ ಯೋಗ. ಮಹಿಳಾ ವೈದ್ಯಕಿಯ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ. ಶುಭಸಂಖ್ಯೆ:4
ಕುಂಭ: ಬ್ಯಾಂಕಿನಿಂದ ಧನಸಹಾಯ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳ ಮಧ್ಯಸ್ಥಿಕೆಯಲ್ಲಿ ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ:8
ಮೀನಾ: ಗೃಹ ಮಾರಾಟಗಾರರಿಗೆ ಆದಾಯ. ವಿದ್ಯುತ್​ ಸ್ಥಾವರದ ಕಾರ್ಮಿಕರ ಬಡ್ತಿ ನಿಗದಿ. ಹಳೆಯ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ:9
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net