ನಿತ್ಯಭವಿಷ್ಯ; ಈ ರಾಶಿಯವರ ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು

Nitya Bhavishya
Nitya Bhavishya
Published on
ಮೇಷ: ಕೈಗೊಂಡ ಹೊಸ ವ್ಯವಹಾರದಲ್ಲಿ ಸಾಧಾರಣ ಲಾಭ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 8
ವೃಷಭ: ಹಿತಶತ್ರುಗಳನ್ನು ಸಮರ್ಥವಾಗಿ ಎದುರಿಸುವಿರಿ. ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಸಿಗಲಿದೆ. ಸಂಗೀತ ಶಿಕ್ಷಕರಿಗೆ ಧನ ಲಾಭ. ಶುಭಸಂಖ್ಯೆ: 4
ಮಿಥುನ: ವಾರ್ತಾ ವಾಚಕರಿಗೆ ಬಡ್ತಿ. ಲೆಕ್ಕಪರಿಶೋಧಕ ವೃತ್ತಿಯಲ್ಲಿ ಯಶಸ್ಸು. ವಿದ್ಯಾರ್ಥಿಗಳ ಆಯ್ಕೆಯಂತೆ ಕಾಲೇಜಿನಲ್ಲಿ ಪ್ರವೇಶ ಲಭ್ಯ. ಶುಭಸಂಖ್ಯೆ: 4
ಕಟಕ: ವಿವಾಹದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಸಾಲ ತೀರಿಸಲು ಆತ್ಮೀಯರ ಸಹಾಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಮನಶ್ಶಾಂತಿ. ಶುಭಸಂಖ್ಯೆ: 2
ಸಿಂಹ: ನಗೆ ಭಾಷಣಕಾರರಿಗೆ ಬೇಡಿಕೆ ಹೆಚ್ಚಲಿದೆ. ಟಿವಿ ಚಾನೆಲ್​ ಮಾಲೀಕರಿಗೆ ಕೆಲಸಗಾರರ ಅಭಾವ. ಬಟ್ಟೆ ವ್ಯಾಪಾರಿಗಳ ಲಾಭ ಹೆಚ್ಚಳ. ಶುಭಸಂಖ್ಯೆ: 6
ಕನ್ಯಾ: ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಪ್ರೀತಿಸಿದವರಿಂದ ಬೇಸರವಾಗುವಂಥ ಕೆಲಸ. ದಿನಾಂತ್ಯದಲ್ಲಿ ಸಂಕಷ್ಟ ನಿವಾರಣೆ. ಶುಭಸಂಖ್ಯೆ: 7
ತುಲಾ: ಆರೋಗ್ಯ ವಿಷಯದಲ್ಲಿ ಎಚ್ಚರ. ಸಿನಿಮಾ ರಂಗದ ನೌಕರರಿಗೆ ವೇತನ ಹೆಚ್ಚಳ. ಪೆಟ್ರೋಲ್​ ಬಂಕ್​ ಸ್ಥಾಪನೆಗೆ ಇದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 8
ವೃಶ್ಚಿಕ: ಸರ್ಕಾರಿ ಉದ್ಯೋಗ ಪ್ರಾಪ್ತಿ. ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ತೆರವುಗೊಳ್ಳಲಿದೆ. ದೈಹಿಕ ಶಿಕ್ಷಕರಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4
ಧನುಸ್ಸು: ಪ್ರತಿಭಾಶಾಲಿಗಳಿಗೆ ವಿಶೇಷ ವೇದಿಕೆ ದೊರೆತು ಸಂತಸ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ರೇಷ್ಮೆ ಕೃಷಿಕರಿಗೆ ಶುಭದಿನ. ಶುಭಸಂಖ್ಯೆ: 8
ಮಕರ: ಗುರುಬಲವಿಲ್ಲದೆ ಸ್ಥಗಿತವಾಗಿದ್ದ ಕೆಲಸ ಪುನರಾರಂಭ. ಕಚೇರಿ ನವೀಕರಣಕ್ಕೆ ನಿರ್ಧಾರ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಶುಭಸಂಖ್ಯೆ: 9
ಕುಂಭ: ರೇಷ್ಮೆ ವಸ್ತ್ರ ಮಾರಾಟದಲ್ಲಿ ಆದಾಯ. ಎಲೆಕ್ಟ್ರಾನಿಕ್ಸ್​ ಉತ್ಪನ್ನಗಳಿಂದ ಲಾಭ ಗಳಿಸುವಿರಿ. ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಲಾಭ. ಶುಭಸಂಖ್ಯೆ: 9
ಮೀನ: ಪಿತ್ರಾರ್ಜಿತ ಆಸ್ತಿ ದಕ್ಕಲಿದೆ. ರಕ್ಷಣಾ ವಿಭಾಗದಲ್ಲಿ ಉದ್ಯೋಗ ಸಿಗುವ ಸಾಧ್ಯತೆ. ಬಾಳೆ ಮತ್ತು ತೆಂಗು ಕೃಷಿಕರಿಗೆ ಸಾಧಾರಣ ಲಾಭ. ಶುಭಸಂಖ್ಯೆ: 6
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net