ಮೇಷ: ಹೊಸ ಉದ್ಯಮದಿಂದ ಒಳಿತು. ಅಮೂಲ್ಯ ವಸ್ತು ಸಂಗ್ರಹ. ಸಾರ್ವಜನಿಕವಾಗಿ ಮಾತಿನ ಮೇಲೆ ಹಿಡಿತವಿರಲಿ. ಕಳೆದದ್ದು ಸಿಗಲಿದೆ. ಶುಭಸಂಖ್ಯೆ: 9.ವೃಷಭ: ಲೇವಾದೇವಿ ವ್ಯವಹಾರದಲ್ಲಿ ಲಾಭವಾಗುವುದು. ಕುಲದೇವರ ದೇವಾಲಯಕ್ಕೆ ಭೇಟಿ. ಸಂಗಾತಿಯ ಆರೋಗ್ಯ ಸುಧಾರಿಸಲಿದೆ. ಶುಭಸಂಖ್ಯೆ: 5.ಮಿಥುನ: ದಿನಸಿ ವರ್ತಕರಿಗೆ ಶುಭ. ವಾಹನ ಖರೀದಿ ಯೋಗ. ಹಿರಿಯರ ಮಾರ್ಗದರ್ಶನದಿಂದ ಪ್ರಗತಿ. ಹೊಸ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 9.ಕಟಕ: ಗಣಕಯಂತ್ರ ಮಾರಾಟದಿಂದ ಉತ್ತಮ ಆದಾಯ. ಅಲಂಕಾರಿಕ ವಸ್ತು ಖರೀದಿಗೆ ವ್ಯಯ. ಆಟೋಮೊಬೈಲ್ ಕ್ಷೇತ್ರದಲ್ಲಿ ಕೀರ್ತಿ. ಶುಭಸಂಖ್ಯೆ: 7.ಸಿಂಹ: ಮೇಲಧಿಕಾರಿಗಳಿಂದ ಪ್ರಶಂಸೆ. ರಕ್ತ ಸಂಬಂಧಿ ವ್ಯಾಧಿ ಇರುವವರು ವೈದ್ಯರ ಸಲಹೆ ಪಾಲಿಸಿ. ಸಾಲ ಮರುಪಾವತಿಗೆ ಅವಕಾಶ. ಶುಭಸಂಖ್ಯೆ: 2.ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಭೋಜನಕೂಟ. ಅಧಿಕಾರಿಗಳಿಂದ ನಿಮ್ಮ ಸಾಧನೆಗೆ ಪ್ರಶಂಸೆ. ಶುಭಸಂಖ್ಯೆ: 3.ತುಲಾ: ಮಾನಸಿಕ ಶಾಂತಿಯನ್ನು ಪಡೆಯುವಿರಿ. ಕಾರ್ಖಾನೆಯ ಕೆಲಸಗಾರರಿಗೆ ಅಗ್ನಿಭಯ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 7.ವೃಶ್ಚಿಕ: ಅಣ್ಣನ ಆರೋಗ್ಯದಲ್ಲಿ ಗಣನೀಯ ಚೇತರಿಕೆ. ಸರ್ಕಾರಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ. ಆರಕ್ಷಕರಿಗೆ ಶುಭದಾಯಕ ದಿನ. ಶುಭಸಂಖ್ಯೆ: 1.ಧನಸ್ಸು: ಹೊಸ ಯೋಜನೆಗಳ ಆರಂಭ. ಅಡಿಕೆ ವ್ಯವಸಾಯದಲ್ಲಿದ್ದ ಸಮಸ್ಯೆ ಪರಿಹಾರವಾದೀತು. ಭೂವ್ಯಾಪಾರದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 8.ಮಕರ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ ಸಾಧ್ಯತೆ. ಬಂಧುಗಳಿಂದ ಮಾನ್ಯತೆ ಸಿಗಲಿದೆ. ಟ್ರಾವೆಲ್ಸ್‌ನವರಿಗೆ ಅಧಿಕ ಪ್ರಮಾಣದ ಲಾಭ. ಶುಭಸಂಖ್ಯೆ: 3.ಕುಂಭ: ಅನಗತ್ಯ ಅಲೆದಾಟವನ್ನು ನಿಯಂತ್ರಿಸಿ. ಸಂಗೀತ ಕಲಾವಿದರಿಗೆ ಧನ ಲಾಭ. ಬ್ಯಾಂಕಿನಲ್ಲಿ ನಿರೀಕ್ಷಿಸಿದ್ದ ಸಾಲ ಮಂಜೂರಾಗಲಿದೆ. ಶುಭಸಂಖ್ಯೆ: 5.ಮೀನ: ಇಷ್ಟದ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಸಿಗಲಿದೆ. ಅತಿಯಾದ ನಂಬಿಕೆಯಿಂದ ತೊಂದರೆ. ಪದವಿ ಪ್ರಾಪ್ತಿಯಲ್ಲಿದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 7