ಮೇಷ: ಶಿಕ್ಷಣದಲ್ಲಿ ಗಮನ ಕೆಂದ್ರೀಕರಿಸಿದರೆ ಉತ್ತಮ ಸಾಧನೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚುತ್ತದೆ. ಆರೋಗ್ಯ ಅಲಕ್ಷಿಸಬೇಡಿ. ಶುಭಸಂಖ್ಯೆ: 9.ವೃಷಭ: ಭೂ ಕ್ರಯ ವಿಕ್ರಯದಲ್ಲಿ ನಿರೀಕ್ಷಿತ ಫಲ. ಕುಟುಂಬದಲ್ಲಿ ನಿಮಗೆ ಬೆಂಬಲ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಂಡುಬರಬಹುದು. ಶುಭಸಂಖ್ಯೆ:3.ಮಿಥುನ: ಅಲಕ್ಷ್ಯದಿಂದ ಅವಕಾಶ ತಪ್ಪುವ ಸಾಧ್ಯತೆ. ದಣಿವು ಹೆಚ್ಚಾದೀತು. ಹಣಕಾಸು ಸಾಮಾನ್ಯ ಸ್ಥಿತಿಯಲ್ಲಿದ್ದರೂ ಕೆಲಮಟ್ಟಿನ ಸುಧಾರಣೆ. ಶುಭಸಂಖ್ಯೆ:6.ಕಟಕ: ಶಿಕ್ಷಣದಲ್ಲಿ ಪ್ರಗತಿ. ಗುರುಗಳಿಂದ ಮೆಚ್ಚುಗೆ. ಕುಟುಂಬದಲ್ಲಿ ಸಂತಸದ ಕ್ಷಣ. ಆರೋಗ್ಯ ಉತ್ತಮ. ಆರ್ಥಿಕ ಲಾಭದ ಸೂಚನೆ. ಶುಭಸಂಖ್ಯೆ:8.ಸಿಂಹ: ಸ್ಪರ್ಧೆಗಳಲ್ಲಿ ಯಶ. ಕುಟುಂಬದಲ್ಲಿ ಗೌರವ ಹೆಚ್ಚಳ. ಆರೋಗ್ಯದಲ್ಲಿ ಸಣ್ಣ ತೊಂದರೆಗಳು ಕಂಡುಬರಬಹುದು. ಆರ್ಥಿಕ ಸ್ಥಿರತೆ. ಶುಭಸಂಖ್ಯೆ:4.ಕನ್ಯಾ: ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ. ಕುಟುಂಬದಿಂದ ಸಹಕಾರ. ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ಹೊಸ ಯೋಜನೆ ಯಶಸ್ವಿ. ಶುಭಸಂಖ್ಯೆ:9.ತುಲಾ: ಸಂಗೀತ ಕಲಾವಿದರಿಗೆ ವಿಶೇಷ ಗೌರವ. ಧಾರ್ವಿುಕ ಕಾರ್ಯಕ್ರಮದಿಂದ ಮನಃಶಾಂತಿ. ಕೃಷಿ ಉಪಕರಣ ವ್ಯವಹಾರದಲ್ಲಿ ಲಾಭ.ಶುಭಸಂಖ್ಯೆ:6.ವೃಶ್ಚಿಕ: ಗೃಹ ನಿರ್ವಣದಲ್ಲಿ ಒತ್ತಡ ಹೆಚ್ಚಾದೀತು. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಅನಿರೀಕ್ಷಿತ ಖರ್ಚು. ಶುಭಸಂಖ್ಯೆ:9.ಧನಸ್ಸು: ಕ್ರೀಡಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ತಾಯಿಯ ಆರೋಗ್ಯ ಉತ್ತಮ. ಶುಭಸಂಖ್ಯೆ:1.ಮಕರ: ಕಾಂಡಿಮೆಂಟ್ಸ್ ವ್ಯಾಪಾರ ನಿಧಾನವಾದರೂ ಸ್ಥಿರ ಪ್ರಗತಿ. ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹ ಸಿದ್ದಿ. ಶುಭಸಂಖ್ಯೆ:7.ಕುಂಭ: ನಿಮ್ಮ ನಿರ್ಧಾರಕ್ಕೆ ಕುಟುಂಬದ ಬೆಂಬಲ. ಆರೋಗ್ಯದಲ್ಲಿ ಚೇತರಿಕೆ. ಚಿನ್ನ ಬೆಳ್ಳಿ ವ್ಯವಹಾರ, ಹಣಕಾಸಿನಲ್ಲಿ ಲಾಭದ ಸಾಧ್ಯತೆ. ಶುಭಸಂಖ್ಯೆ:5.ಮೀನ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ. ಕುಟುಂಬದಲ್ಲಿ ಸೌಹಾರ್ದ ವಾತಾವರಣ. ಹೊಸ ಆದಾಯ ಮಾರ್ಗ ಕಾಣುವುದು. ಶುಭಸಂಖ್ಯೆ: 8