ನಿತ್ಯ ಭವಿಷ್ಯ: ಈ ರಾಶಿಯ ಕೃಷಿಕರಿಗೆ ಬೆಳೆದ ಬೆಳೆಗೆ ನಿರೀಕ್ಷಿತ ಲಾಭ ಬರುವುದು

nitya bhavishya
nitya bhavishya
Published on
ಮೇಷ: ಆರೋಗ್ಯದ ಮೇಲೆ ಹತಾಶೆ ಪರಿಣಾಮ ಬೀರೀತು. ಸಕಾರಾತ್ಮಕವಾಗಿ ಯೋಚಿಸಿ. ಅಮೂಲ್ಯ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ: 9
ವೃಷಭ: ಹಣಕಾಸಿನ ಪರಿಸ್ಥಿತಿ ಉತ್ತಮ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಕೃಷಿಕರಿಗೆ ಬೆಳೆದ ಬೆಳೆಗೆ ನಿರೀಕ್ಷಿತ ಲಾಭ ಬರುವುದು. ಶುಭಸಂಖ್ಯೆ:1
ಮೀಥುನ: ಸ್ವಂತ ಉದ್ಯಮದಲ್ಲಿ ಆಸಕ್ತಿ. ಮಾತಿನ ಮೇಲೆ ನಿಯಂತ್ರಣವಿರಲಿ. ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ನಿವಾರಣೆಯಾಗಲಿದೆ. ಶುಭಸಂಖ್ಯೆ:6
ಕಟಕ: ಕೌಟುಂಬಿಕ ವಿಷಯದಲ್ಲಿ ಗೊಂದಲ. ಹಳೆಯ ಜಗಳಗಳನ್ನು ಇಂದು ಬಗೆಹರಿಸಿಕೊಳ್ಳಿ. ಹೂವು ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4
ಸಿಂಹ: ಮಿಶ್ರಫಲದ ದಿನ. ಮಾನಸಿಕ ಶಾಂತಿಗಾಗಿ ಪ್ರಾರ್ಥನೆ. ವಿಶ್ರಾಂತಿಗೆ ಆದ್ಯತೆ ನೀಡಿ. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8
ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ದಿನ. ಆಟೋಟ ಸ್ಪರ್ಧೆಗಳಲ್ಲಿ ಸಕಾರಾತ್ಮಕ ಫಲಿತಾಂಶ. ಸಂಗೀತಗಾರರಿಗೆ ವಿದೇಶ ಪ್ರವಾಸ ಯೋಗ. ಶುಭಸಂಖ್ಯೆ:4
ತುಲಾ: ಮಗಳಿಗೆ ವಿವಾಹದ ಪ್ರಸ್ತಾಪಗಳು ಬರುವ ಸಾಧ್ಯತೆ. ಹೊಸ ಕೆಲಸದ ಕಡೆಗೆ ಗಮನವಿರಲಿ. ಗೃಹ ನಿರ್ಮಾಣದ ಆಸೆ ಈಡೇರಲಿದೆ. ಶುಭಸಂಖ್ಯೆ:2
ವೃಶ್ಚಿಕ: ಆಕರ್ಷಕ ವ್ಯಕ್ತಿತ್ವದಿಂದ ಗಮನ ಸೆಳೆಯುವಿರಿ. ಸಂವಹನ ಕೌಶಲದಿಂದ ಕೆಲಸದಲ್ಲಿ ಯಶ. ಔಷಧ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 2
ಧನಸ್ಸು: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಸಹೋದ್ಯೋಗಿಗಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ದಾಂಪತ್ಯದಲ್ಲಿ ಪ್ರಮುಖ ಬದಲಾವಣೆ.ಶುಭಸಂಖ್ಯೆ: 2
ಮಕರ: ದೀರ್ಘಕಾಲದ ವ್ಯಾಯಾಮದಿಂದ ಆರೋಗ್ಯ ಸುಧಾರಣೆ. ಮಗನ ವಿವಾಹ ವಿಷಯದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವಿರಿ.ಶುಭಸಂಖ್ಯೆ:1
ಕುಂಭ: ಹೂಡಿಕೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಿಯಾದ ಸಮಯ. ರಫ್ತು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:6
ಮೀನಾ: ಹೊಸ ವ್ಯಾಪಾರದಲ್ಲಿ ಬದಲಾವಣೆಯ ದಿನ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ನಿವಾರಣೆಯಾಗಲಿದೆ. ಶುಭಸಂಖ್ಯೆ:3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net