ನಿತ್ಯ ಭವಿಷ್ಯ: ಈ ರಾಶಿಯವರು ಸಂಗಾತಿಯ ಆರ್ಥಿಕ ಸಹಾಯದಿಂದ ಸಾಲ ತೀರಿಸುವಿರಿ

ನಿತ್ಯ ಭವಿಷ್ಯ
ನಿತ್ಯ ಭವಿಷ್ಯ
Published on
ಮೇಷ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಆತ್ಮೀಯರ ಜತೆಗೆ ಪ್ರಮುಖ ವಿಷಯದ ಚರ್ಚೆ. ಆಹಾರ ಪದಾರ್ಥ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಆಸ್ತಿ ಮಾರಾಟ ವಿಚಾರದಲ್ಲಿ ಜಾಗ್ರತೆ. ಖಾಸಗಿ ವಲಯದ ಉದ್ಯೋಗಿಗಳಿಗೆ ವಿದೇಶ ಪ್ರಯಾಣ. ತೆಂಗು ಕೃಷಿಕರಿಗೆ ಧನ ಲಾಭ. ಶುಭಸಂಖ್ಯೆ: 4
ಮಿಥುನ: ಮಕ್ಕಳ ವಿದ್ಯಾಭ್ಯಾಸದ ಯಶದಿಂದ ಸಂತೋಷ. ಮೇಲಧಿಕಾರಿಗಳಿಂದ ಹೊಗಳಿಕೆ. ಗೃಹಪಯೋಗಿ ವಸ್ತು ಖರೀದಿಯಲ್ಲಿ ಲಾಭ. ಶುಭಸಂಖ್ಯೆ:8
ಕಟಕ: ಹಿರಿಯರ ಮಾರ್ಗದರ್ಶನದಿಂದ ಕಾರ್ಯಸಿದ್ಧಿ. ಧರ್ಮಕಾರ್ಯದಲ್ಲಿ ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಉದ್ಯಮ ಸ್ಥಾಪನೆ. ಶುಭಸಂಖ್ಯೆ: 5
ಸಿಂಹ: ಪದವಿ ದಾರಿಯಲ್ಲಿ ಗೆಲುವು ಸಾಧಿಸುವ ಚಿಂತನೆಗೆ ಯಶ. ಸಹೋದ್ಯೋಗಿಯ ಸಹಾಯ. ನಕಾರಾತ್ಮಕ ಯೋಚನೆ ನಿಯಂತ್ರಿಸಿ. ಶುಭಸಂಖ್ಯೆ:7
ಕನ್ಯಾ: ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯಸಾಧನೆ. ರೈತಾಪಿ ವರ್ಗದವರಿಗೆ ಶುಭ ಸುದ್ದಿ. ಶುಭಸಂಖ್ಯೆ:2
ತುಲಾ: ಎಚ್ಚರಿಕೆಯ ನಡೆಯಿಂದ ಪ್ರಮುಖ ಅನಾಹುತ ತಪ್ಪಲಿದೆ. ವ್ಯಾಪಾರದ ಒಪ್ಪಂದ ಮುಂದೂಡಿ. ಪುಸ್ತಕ ವ್ಯಾಪಾರದಲ್ಲಿ ಅಭಿವೃದ್ಧಿ.ಶುಭಸಂಖ್ಯೆ:2
ವೃಶ್ಚಿಕ: ದಾಂಪತ್ಯದಲ್ಲಿ ತಿರುವು. ತಾಂತ್ರಿಕ ಪದವೀಧರರಿಗೆ ವಿದೇಶ ಪ್ರಯಾಣ ಯೋಗ. ವೃತ್ತಿಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ: 4
ಧನಸ್ಸು: ನಾಟ್ಯ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಉತ್ಪಾದನಾ ಕ್ಷೇತ್ರದವರಿಗೆ ಧನ ಲಾಭ. ಷೇರು ಹೂಡಿಕೆಯಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ:8
ಮಕರ: ಸಂಗಾತಿಯ ಆರ್ಥಿಕ ಸಹಾಯದಿಂದ ಸಾಲ ತೀರಿಸುವಿರಿ. ಕಿರುಚಿತ್ರ ನಟರಿಗೆ ಸಾಮಾಜಿಕ ಮನ್ನಣೆ. ಸಾಹಿತಿಗಳಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ:1
ಕುಂಭ: ಹೊಸ ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ. ಗೃಹ ನಿರ್ಮಾಣ ಪ್ರಾರಂಭ. ಉದ್ಯೋಗ ಬದಲಾವಣೆ. ಮನಸ್ಸು. ಶುಭಸಂಖ್ಯೆ:4
ಮೀನಾ: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಗೌರವ ಸಿಗಲಿದೆ. ಸಾಲಗಳಿಂದ ಮುಕ್ತಿ. ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿಗಳು ಹೆಚ್ಚುತ್ತವೆ. ಶುಭಸಂಖ್ಯೆ:2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net