ಮೇಷ: ವಿಷ್ಕುಂಭ ಯೋಗದ ಪ್ರಭಾವದಿಂದ ಆರ್ಥಿಕವಾಗಿ ಲಾಭವಾಗಲಿದೆ. ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚಾಗಬಹುದು. ಶುಭಸಂಖ್ಯೆ: 9.ವೃಷಭ: ಕೆಲಸದಲ್ಲಿ ಬದಲಾವಣೆ ಅಸಮಾಧಾನ ತಂದೀತು. ಭಾವನೆ ನಿಯಂತ್ರಿಸಿ. ದೈಹಿಕ ಪರಿಶ್ರಮದಿಂದ ಹಣ ಸಂಪಾದನೆ ಮಾಡುವಿರಿ. ಶುಭಸಂಖ್ಯೆ: 9.ಮಿಥುನ: ಯೋಜನೆ ಕಾರ್ಯಗತಗೊಳಿಸಲು ಸಕಾಲ. ಸೃಜನಶೀಲತೆಗೆ ಮನ್ನಣೆ. ಅಪರಿಚಿತರಿಗೆ ಮಾಹಿತಿ ನೀಡುವ ಮುನ್ನ ಪರಿಶೀಲಿಸಿ. ಶುಭಸಂಖ್ಯೆ:7.ಕಟಕ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಭಾವನೆ ಹೆಚ್ಚಾಗ ಬಹುದು, ಆಸ್ತಿ ಮಾರಾಟ ವೇಳೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ:4.ಸಿಂಹ: ಕೆಲಸದಲ್ಲಿ ನಾಯಕತ್ವದ ಗುಣಗಳು ಹೊರ ಹೊಮ್ಮಲಿವೆ. ಸಹೋದ್ಯೋಗಿಗಳ ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಶುಭಸಂಖ್ಯೆ:3.ಕನ್ಯಾ: ಆತ್ಮಾವಲೋಕನಕ್ಕೆ ಸೂಕ್ತವಾದ ದಿನ. ಆರ್ಥಿಕ ಒತ್ತಡದಿಂದ ಏಕಾಗ್ರತೆ ಕಷ್ಟವಾಗಬಹುದು. ಮಹಿಳೆಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ:1.ತುಲಾ: ಸಾರ್ವಜನಿಕವಾಗಿ ಸಂಯಮದಿಂದ ವರ್ತಿಸಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಲ್ಲವನ್ನೂ ಪರಿಶೀಲಿಸುವುದು ಕ್ಷೇಮಕರ. ಶುಭಸಂಖ್ಯೆ:1.ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದೀರ್ಘಕಾಲೀನ ಹೂಡಿಕೆಗಳ ಬಗ್ಗೆ ಗಮನ ಕೊಡಿ. ನಿರಂತರ ಅಧ್ಯಯನದಿಂದ ಲಾಭವಾಗಲಿದೆ. ಶುಭಸಂಖ್ಯೆ:6.ಧನಸ್ಸು: ಪ್ರವಾಸಕ್ಕೆ ತೆರಳುವ ಸಾಧ್ಯತೆ. ಮಕ್ಕಳಿಗಾಗಿ ಖರ್ಚು ಹೆಚ್ಚಾದೀತು. ವೃತ್ತಿಯಲ್ಲಿ ಹಣ ಗಳಿಸುವಿರಿ. ಸಾಮಾನ್ಯಜ್ಞಾನ ವಿಸ್ತರಿಸಿಕೊಳ್ಳಿ. ಶುಭಸಂಖ್ಯೆ:2.ಮಕರ: ವೃತ್ತಿ ಜೀವನದಲ್ಲಿ ಸುವರ್ಣಕಾಲ. ಯೋಜಿತ ರೀತಿಯಲ್ಲಿ ಕೆಲಸ ಮಾಡಿ ಯಶಸ್ವಿಯಾಗುವಿರಿ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:4.ಕುಂಭ: ಆರ್ಥಿಕ ಪ್ರಗತಿ ಸಾಧಿಸುವಿರಿ. ಹೊಸ ಆಲೋಚನೆಗಳು ಫಲ ನೀಡುತ್ತವೆ. ಜೀವನದ ಕೆಲ ಪರಿಸ್ಥಿತಿಗಳಿಂದ ಆತಂಕ ಉಂಟಾದೀತು. ಶುಭಸಂಖ್ಯೆ:8.ಮೀನ: ಈ ದಿನ ಮಿಶ್ರಫಲಗಳು ದೊರೆಯಲಿವೆ. ದೀರ್ಘಕಾಲಿಕ ಅನಾರೋಗ್ಯ ಪರಿಹಾರವಾಗಲಿದೆ. ಔಷದ ವ್ಯಾಪಾರದಲ್ಲಿ ದ್ವಿಗುಣ ಲಾಭ. ಶುಭಸಂಖ್ಯೆ: 6