ಮೇಷ: ಕುಟುಂಬದ ಕಲಹ ಮಾತುಕತೆಯಿಂದ ಇತ್ಯರ್ಥ. ನಿಮ್ಮ ಸಾಧನೆಗೆ ಶತ್ರುಗಳಿಂದಲೂ ಪ್ರಶಂಸೆ. ಉದ್ಯೋಗದಲ್ಲಿ ಸ್ಥಾನಪಲ್ಲಟ. ಶುಭಸಂಖ್ಯೆ:8.ವೃಷಭ: ಉದ್ಯೋಗದಲ್ಲಿ ಉನ್ನತ ಪದವಿ ಸಿಗಲಿದೆ. ಕೆಲಸಗಾರರಿಂದ ಉದ್ಯಮ ಅಭಿವೃದ್ಧಿ. ಆಹಾರ ಧಾನ್ಯದ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 7.ಮಿಥುನ: ವಿಚ್ಛೇದನ ಪ್ರಕರಣ ಮತ್ತಷ್ಟು ವಿಳಂಬ ಆಗಲಿದೆ. ದೂರದ ಊರಿಗೆ ಪ್ರಯಾಣ ಮಾಡುವಿರಿ. ಆರ್ಥಿಕ ಮುಗ್ಗಟ್ಟು ಬಗೆಹರಿಯಲಿದೆ. ಶುಭಸಂಖ್ಯೆ:5. ಕಟಕ: ಭೂ ಖರೀದಿಗೆ ಪ್ರಯತ್ನ ಆರಂಭಿಸುವಿರಿ. ವಾಹನ ಮಾಲೀಕರಿಗೆ ಖರ್ಚು. ಮಕ್ಕಳ ಸಾಧನೆಯಿಂದ ಕುಟುಂಬದಲ್ಲಿ ಸಂಭ್ರಮ. ಶುಭಸಂಖ್ಯೆ: 1.ಸಿಂಹ: ಸಾಹಿತಿಗಳು ಮತ್ತು ಬರಹಗಾರರಿಗೆ ಶುಭದಾಯಕ ದಿನ. ಶಿಕ್ಷಣ ಇಲಾಖೆಯ ನೌಕರರಿಗೆ ಬಡ್ತಿ. ಹಳೆಯ ಸ್ನೇಹಿತೆಯ ಭೇಟಿ. ಶುಭಸಂಖ್ಯೆ:3.ಕನ್ಯಾ: ಆಧ್ಯಾತ್ಮಿಕತೆಯತ್ತ ಮನಸ್ಸು ಹೊರಳಲಿದೆ. ನಿವೇಶನ ಖರೀದಿಗೆ ಸುಸಮಯ. ಸಹಕಾರಿ ಸಂಘಗಳಲ್ಲಿ ಪದವಿ ಪ್ರಾಪಿಯಾಗುವುದು. ಶುಭಸಂಖ್ಯೆ: 6.ತುಲಾ: ಗೃಹ ನಿರ್ಮಾಣಕ್ಕೆ ಬಂಧುಗಳಿಂದ ಸಹಕಾರ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯಾಗಲಿದೆ. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಮುಂಬಡ್ತಿ. ಶುಭಸಂಖ್ಯೆ:2.ವೃಶ್ಚಿಕ: ಅನ್ನದಾನ ಮಾಡುವ ಅವಕಾಶವಿದೆ. ಆರ್ಥಿಕವಾಗಿ ಅಭಿವೃದ್ಧಿಯಾಗುವುದು. ಹಿತ ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಅನಿವಾರ್ಯ. ಶುಭಸಂಖ್ಯೆ:4.ಧನುಸ್ಸು: ವಾತ ಸಂಬಂಧಿ ರೋಗ ಗುಣಮುಖವಾಗಲಿದೆ. ವಿದೇಶದಿಂದ ಮಕ್ಕಳು ಬರುವರು. ಅವಿವಾಹಿತರಿಗೆ ವಿವಾಹ ಯೋಗವಿದೆ. ಶುಭಸಂಖ್ಯೆ:2.ಮಕರ: ಕುಟುಂಬದ ಹಿರಿಯರ ಮಾರ್ಗದರ್ಶನ ಸಿಗಲಿದೆ. ಆಸ್ತಿ ವಿಭಾಗದಲ್ಲಿ ಅಸಮಾಧಾನ. ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ಗಳಿಸುವಿರಿ. ಶುಭಸಂಖ್ಯೆ:6.ಕುಂಭ: ಮೇಲಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸುವರು. ವಾಹನ ದುರಸ್ತಿಗೆ ಹಣವ್ಯಯ. ಕನಸಿನ ಮನೆ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:9.ಮೀನ: ಮಗಳಿಗೆ ಮಾಂಗಲ್ಯ ಭಾಗ್ಯ ಕೂಡಿ ಬರಲಿದೆ. ಉದ್ಯೋಗದಲ್ಲಿ ನೆಮ್ಮದಿ. ನನೆಗುದಿಗೆ ಬಿದ್ದ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಶುಭಸಂಖ್ಯೆ: 6