ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ

Nitya Bhavishya
Nitya Bhavishya
Published on
ಮೇಷ: ರಾಜಕೀಯ ಶಾಸ್ತ್ರದಲ್ಲಿ ಉನ್ನತ ಪದವಿ ಗಳಿಸುವಿರಿ. ಮಕ್ಕಳ ವಿಚಾರವಾಗಿ ಹೆಮ್ಮೆ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಶುಭಸಂಖ್ಯೆ: 2
ವೃಷಭ: ದೀರ್ಘಕಾಲದ ಸಮಸ್ಯೆಗೆ ಪರಿಹಾರ. ವಿರೋಧಿಗಳಿಂದಲೂ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 1
ಮಿಥುನ: ಹಿರಿಯರ ಸಲಹೆಯಿಂದ ಕುಟುಂಬದ ಸಮಸ್ಯೆ ಇತ್ಯರ್ಥ. ಸ್ನೇಹಿತರ ನೆರವಿನಿಂದ ಸಾಲ ತೀರಿಸುವಿರಿ. ಕೃಷಿಕರಿಗೆ ಅಧಿಕ ಲಾಭ. ಶುಭಸಂಖ್ಯೆ: 7
ಕಟಕ: ಕುಟುಂಬದ ಸಲಹೆಯೊಂದಿಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಿ. ಸಿಹಿ ಅಂಗಡಿ ಮಾಲೀಕರಿಗೆ ಇದ್ದ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 6
ಸಿಂಹ: ಸಂಗಾತಿಯ ಅನಾರೋಗ್ಯಕ್ಕೆ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಿ. ಸ್ವಯಂ ಉದ್ಯೋಗದ ಮಹಿಳೆಯರಿಗೆ ದ್ವಿಗುಣ ಲಾಭ. ಶುಭಸಂಖ್ಯೆ: 8
ಕನ್ಯಾ: ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ನಿವಾರಣೆ. ಬ್ಯಾಂಕಿನ ಸಾಲ ಮರುಪಾವತಿ ಮಾಡುವಿರಿ. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ. ಶುಭಸಂಖ್ಯೆ: 5
ತುಲಾ: ಪ್ರಮುಖ ಯೋಜನೆಗೆ ಸಂಪನ್ಮೂಲ ಕ್ರೋಡೀಕರಣ. ಸ್ವಉದ್ಯೋಗಕ್ಕೆ ನೆರವು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ: 2
ವೃಶ್ಚಿಕ: ನಿರೀಕ್ಷಿತ ಮೂಲಗಳಿಂದ ಆದಾಯ. ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಸಿಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 2
ಧನಸ್ಸು: ಉದ್ಯೋಗಸ್ಥ ಮಹಿಳೆಯರು ಸಮಾಧಾನದಿಂದಿರಿ. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಲಭ್ಯ. ಶುಭಸಂಖ್ಯೆ: 3
ಮಕರ: ಪಾಲುದಾರಿಕೆಯಲ್ಲಿರುವ ಅಂತರ್ಗತ ಗೊಂದಲ ಪರಿಹಾರ. ಹಣ ಹೂಡಿಕೆಯಲ್ಲಿ ಎಚ್ಚರವಿರಲಿ. ಆಸ್ತಿ ವಿವಾದ ಕಗ್ಗಂಟಾಗಲಿದೆ. ಶುಭಸಂಖ್ಯೆ: 6
ಕುಂಭ: ಕೃಷಿಯಂತ್ರ ಮಾರಾಟದಲ್ಲಿ ಲಾಭ. ಪ್ರೇಮದಲ್ಲಿ ಹಿನ್ನಡೆ. ಆಸ್ತಿ ಕ್ರಯ ವಿಕ್ರಯದಲ್ಲಿ ಲಾಭಗಳಿಸುವಿರಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3
ಮೀನ: ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಆರಕ್ಷಕ ವೃತ್ತಿಯವರಿಗೆ ವರ್ಗಾವಣೆ. ಕೋರ್ಟ್ ವಿಚಾರದಲ್ಲಿ ವಿಳಂಬ. ಮನೆಯಲ್ಲಿ ಸಂಭ್ರಮ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net