ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಶ್ರಮಕ್ಕೆ ತಕ್ಕ ಫಲ ಸಿಗುವುದು

Nitya Bhavishya
Nitya Bhavishya
Published on
ಮೇಷ: ಹೊಸ ಕಾರ್ಯಗಳಿಗೆ ಕೈ ಹಾಕಲು ಇದು ಸುವರ್ಣ ಕಾಲ. ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ, ತರಾತುರಿಯಲ್ಲಿ ನಿರ್ಧಾರ ಬೇಡ. ಶುಭಸಂಖ್ಯೆ: 7
ವೃಷಭ: ಲಾಭದಾಯಕ ದಿನ. ಹಳೆಯ ಬಾಕಿ ಕೈ ಸೇರುವುದು. ಆರೋಗ್ಯದತ್ತ ಗಮನವಿರಲಿ. ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.ಶುಭಸಂಖ್ಯೆ:8
ಮಿಥುನ: ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ. ಸ್ನೇಹಿತರೊಂದಿಗೆ ಪ್ರವಾಸ, ಔತಣಕೂಟ. ಸಂವಹನದಲ್ಲಿ ಸ್ಪಷ್ಟತೆಯಿರಲಿ. ಶುಭಸಂಖ್ಯೆ:7
ಕಟಕ: ಅಸ್ಥಿರತೆ ಇರಬಹುದು ಆದರೆ ತಾಳ್ಮೆ ಮುಖ್ಯ. ಧಾರ್ವಿುಕ ಕಾರ್ಯಕ್ಕಾಗಿ ಸಮಯವಿಡಿ. ಹೂಡಿಕೆಗೆ ಮುನ್ನ ತಜ್ಞರ ಸಲಹೆ ಇರಲಿ. ಶುಭಸಂಖ್ಯೆ:4
ಸಿಂಹ: ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಪ್ರತಿಫಲ ಸಿಗಲಿದೆ. ಶುಭಸಂಖ್ಯೆ:1
ಕನ್ಯಾ: ಮನೆಯಲ್ಲಿ ಶುಭ ಕಾರ್ಯ ಜರುಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ ಇಟ್ಟುಕೊಂಡಿರುವವರಿಗೆ ಶುಭ ದಿನ. ಶುಭಸಂಖ್ಯೆ:6
ತುಲಾ: ಮಾನಸಿಕ ನೆಮ್ಮದಿ ಸಿಗಲಿದೆ. ದೂರ ಪ್ರಯಾಣಯೋಗ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ. ಆರ್ಥಿಕ ವಹಿವಾಟಿನಲ್ಲಿ ಎಚ್ಚರ. ಶುಭಸಂಖ್ಯೆ:9
ವೃಶ್ಚಿಕ: ಎದುರಾಳಿಗಳ ಮೇಲೆ ವಿಜಯ. ಹಠಾತ್ ಧನಲಾಭದ ಸಾಧ್ಯತೆ. ಕೆಲಸದ ಒತ್ತಡ ಹೆಚ್ಚಿದ್ದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ:2
ಧನಸ್ಸು: ಶೈಕ್ಷಣಿಕ ರಂಗದಲ್ಲಿರುವವರಿಗೆ ಉತ್ತಮ ಫಲಿತಾಂಶ. ಪ್ರೇಮ ವಿಚಾರದಲ್ಲಿ ಜಯದ ಲಕ್ಷಣವಿದೆ. ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ. ಶುಭಸಂಖ್ಯೆ:7
ಮಕರ: ಆಸ್ತಿ ವಿವಾದ ಬಗೆಹರಿಯಲಿದೆ. ವಾಹನ ಖರೀದಿ ಯೋಗವಿದೆ. ತಾಯಿಯ ಕಡೆಯಿಂದ ಹಣದ ಸಹಕಾರ. ಎಚ್ಚರದಿಂದಿರಿ. ಶುಭಸಂಖ್ಯೆ:4
ಕುಂಭ: ಶ್ರಮಕ್ಕೆ ತಕ್ಕ ಫಲ ಸಿಗುವುದು. ಸೋದರ-ಸೋದರಿಯರೊಂದಿಗೆ ಸೌಹಾರ್ದ ಇರಲಿ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಶುಭಸಂಖ್ಯೆ:5
ಮೀನ: ಮಾತಿನಿಂದ ಕಾರ್ಯ ಸಾಧನೆ. ಉಳಿತಾಯದತ್ತ ಗಮನ ನೀಡುವುದು ತೀರಾ ಅಗತ್ಯ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ:8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net