ನಿತ್ಯಭವಿಷ್ಯ; ಈ ರಾಶಿಯವರ ಮನೆಯಲ್ಲಿ ವಿವಾಹ ಕಾರ್ಯ ಜರುಗಲಿದೆ

Nitya Bhavishya
Nitya Bhavishya
Published on
ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ: 7.
ವೃಷಭ: ಗಿರಣಿ ಮಾಲೀಕರಿಗೆ ಕೆಲಸಗಾರರ ಬಗ್ಗೆ ಕಾಳಜಿ ಇರಲಿ. ಪ್ರಭಾವಿ ವ್ಯಕ್ತಿಯ ಭೇಟಿ. ಹೊಸ ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 5
ಮಿಥುನ: ಸರ್ಕಾರಿ ಕೆಲಸ ಸರಾಗವಾಗಿ ಆಗಲಿದೆ. ಮನೆಯಲ್ಲಿ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಮನಸ್ತಾಪ. ಶುಭಸಂಖ್ಯೆ: 8
ಕಟಕ: ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಬೆಳೆಗಳ ಕೃಷಿಕರಿಗೆ ಅಧಿಕ ಲಾಭ. ಬುದ್ಧಿವಂತಿಕೆಯಿಂದ ಆಪತ್ತಿನಿಂದ ಪಾರಾಗುವಿರಿ. ಶುಭಸಂಖ್ಯೆ: 6
ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಆರೋಗ್ಯ ಚೇತರಿಕೆ. ಶುಭಸಂಖ್ಯೆ: 1
ಕನ್ಯಾ: ಪ್ರಮುಖ ತೀರ್ಮಾನಗಳಲ್ಲಿ ಎಚ್ಚರ ಇರಲಿ. ರಂಗಕರ್ಮಿಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ಮಾಣಕ್ಕೆ ಅನುಕೂಲ. ಶುಭಸಂಖ್ಯೆ: 8
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗೌರವ. ವಿಜ್ಞಾನಿಗಳಿಗೆ ಸಂಶೋಧನೆಯಲ್ಲಿ ಯಶಸ್ಸು. ವೈದ್ಯರ ಸಲಹೆ ನಿರ್ಲಕ್ಷಿಸಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಶುಭಸಂಖ್ಯೆ: 7
ವೃಶ್ಚಿಕ: ಔಷಧ ಮಾರಾಟದವರಿಗೆ ಬೇಡಿಕೆ. ಪೊಲೀಸ್ ಅಧಿಕಾರಿಗಳೊಂದಿಗೆ ವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 4
ಧನುಸ್ಸು: ದೈಹಿಕ ಶ್ರಮಕ್ಕೆ ತಕ್ಕ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 2
ಮಕರ: ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸಗಾರರಿಗೆ ಆದಾಯವಿದೆ. ಟ್ರಾವೆಲ್ಸ್ ಏಜೆನ್ಸಿಯವರಿಗೆ ಉತ್ತಮ ಹಣ ಸಂಪಾದನೆ. ಶುಭಸಂಖ್ಯೆ: 2
ಕುಂಭ: ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರ. ಸಿಎ ವಿದ್ಯಾರ್ಥಿಗಳಿಗೆ ಯಶಸ್ಸು, ನ್ಯಾಯಾಲಯದ ಕೆಲಸ ಶೀಘ್ರವಾಗಿ ಮುಗಿಯಲಿದೆ. ಶುಭಸಂಖ್ಯೆ: 3
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದ ಹುಡುಕಾಟ ಸಫಲವಾಗಲಿದೆ. ಶುಭಸಂಖ್ಯೆ: 9
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net