ಮೇಷ: ವೃತ್ತಿಯಲ್ಲಿ ಹೊಸ ಅವಕಾಶ. ತಾಂತ್ರಿಕ ಶಿಕ್ಷಣದಲ್ಲಿ ಪ್ರಗತಿ ಇದೆ. ಆರೋಗ್ಯದಲ್ಲಿ ಸಣ್ಣ ತೊಂದರೆ. ಬಟ್ಟೆ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5.ವೃಷಭ: ವಿದ್ಯಾರ್ಥಿಗಳಿಗೆ ಮನೋಬಲ ವೃದ್ಧಿಸುವ ಘಟನೆ. ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡುವಿರಿ. ಔಷಧಿ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 2.ಮಿಥುನ: ಶ್ರಮಕ್ಕೆ ತಕ್ಕ ಫಲ. ಆರೋಗ್ಯದ ನಿರ್ಲಕ್ಷ್ಯ ಬೇಡ. ಸ್ಪರ್ಧಾತ್ಮಕ ಮನೋಭಾವ ಇರಲಿ. ಸ್ತ್ರೀ ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಲಿದೆ. ಶುಭಸಂಖ್ಯೆ: 3.ಕಟಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹ. ಹೊಸ ಸಂಪರ್ಕಗಳು ಲಾಭ ತರುತ್ತವೆ. ಶುಭಸಂಖ್ಯೆ: 3.ಸಿಂಹ: ನಟನಾ ಕ್ಷೇತ್ರದಲ್ಲಿ ಹೊಸ ಅವಕಾಶ ದೊರೆಯಬಹುದು. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಬಟ್ಟೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5.ಕನ್ಯಾ: ಮಾಡುವ ಕೆಲಸದಲ್ಲಿ ಒತ್ತಡ ಇದ್ದರೂ ಯಶಸ್ಸು ಸಿಗುತ್ತದೆ. ಆಹಾರ ಕ್ರಮ ಸರಿಯಾಗಿರಲಿ. ವಿವಾಹದ ಪ್ರಯತ್ನ ಫಲ ನೀಡುತ್ತದೆ. ಶುಭಸಂಖ್ಯೆ: 6.ತುಲಾ: ಬಹುದಿನಗಳ ಅನಾರೋಗ್ಯದ ನಂತರ ಆರೋಗ್ಯದಲ್ಲಿ ಸುಖಕರ ಸ್ಥಿತಿ ಇರಲಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ ಉತ್ತಮ ಅವಕಾಶ. ಶುಭಸಂಖ್ಯೆ: 2.ವೃಶ್ಚಿಕ: ಓದಿನಲ್ಲಿ ಗಮನ ಅಗತ್ಯ. ಉದ್ಯೋಗದಲ್ಲಿ ಮುಂಬಡ್ತಿ. ಮಹಿಳೆಯರು ಕುಟುಂಬ - ಉದ್ಯೋಗದ ಸಮತೋಲನ ಕಾಯ್ದುಕೊಳ್ಳಿ. ಶುಭಸಂಖ್ಯೆ: 7.ಧನಸ್ಸು: ವೃತ್ತಿಯಲ್ಲಿ ಉತ್ತಮ ಪದವಿ ಸಿಗಲಿದೆ. ಚಲನಚಿತ್ರ ಗಾಯಕರಿಗೆ ಯಶಸ್ಸು ಸಿಗುತ್ತದೆ. ತಾಜಾ ತರಕಾರಿ ವ್ಯಾಪಾರದಲ್ಲಿ ಬೆಳವಣಿಗೆ. ಶುಭಸಂಖ್ಯೆ: 7.ಮಕರ: ವ್ಯಾಪಾರದಲ್ಲಿ ನಿಧಾನ. ಉದ್ಯೋಗ ನಿಮಿತ್ತ ತಿರುಗಾಟ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ. ಕುಶಲಕರ್ಮಿಗಳಿಗೆ ಅನುಕೂಲ. ಶುಭಸಂಖ್ಯೆ: 3.ಕುಂಭ: ಜವಾಬ್ದಾರಿ ಪೂರ್ಣಗೊಳಿಸಲು ಸಹೋದ್ಯೋಗಿಗಳ ಸಹಾಯ ದೊರೆಯುತ್ತದೆ. ಮಗಳ ವಿವಾಹ ಪ್ರಯತ್ನದಲ್ಲಿ ಶುಭ ಫಲ. ಶುಭಸಂಖ್ಯೆ: 8