ನಿತ್ಯಭವಿಷ್ಯ; ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ

Nitya Bhavishya
Nitya Bhavishya
Published on
ಮೇಷ: ಕಾನೂನು ಕಲಿಕೆಯಲ್ಲಿ ಉತ್ತಮ ಪ್ರಗತಿ. ವಾಣಿಜ್ಯ ಉಪಯೋಗದ ಆಸ್ತಿ ವಿವಾದ ಇತ್ಯರ್ಥ. ದಾಂಪತ್ಯ ಜೀವನದಲ್ಲಿ ತಿರುವು. ಶುಭಸಂಖ್ಯೆ: 8
ವೃಷಭ: ದ್ವಿತೀಯದ ಗುರುವಿನಿಂದ ಹಣ ಗಳಿಕೆ ಹೆಚ್ಚಳ. ಪೆಟ್ರೋಲ್ ಬಂಕ್ ಮಾಲೀಕರಿಗೆ ಒತ್ತಡ ಇಳಿಯಲಿದೆ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7
ಮಿಥುನ: ಕುಲದೇವತಾ ದರ್ಶನ ಮಾಡುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಕನಸು ಈಡೇರಲಿದೆ. ಟ್ರಾವೆಲ್ಸ್ ಮಾಲೀಕರಿಗೆ ಧನ ಲಾಭ. ಶುಭಸಂಖ್ಯೆ: 8
ಕಟಕ: ಸಿಹಿ ತಿಂಡಿಗಳ ವ್ಯಾಪಾರದಲ್ಲಿ ಅಭಿವೃದ್ಧಿ. ಚಿತ್ರಕಲೆಯಲ್ಲಿ ಸಾಧನೆ ಮಾಡುವಿರಿ. ಭರತನಾಟ್ಯ ಶಿಕ್ಷಕರಿಗೆ ಸಮಾಜದಲ್ಲಿ ಗೌರವ. ಶುಭಸಂಖ್ಯೆ: 3
ಸಿಂಹ: ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಸಂಗಾತಿ ಕಡೆಯಿಂದ ಆಸ್ತಿ ಸಿಗಲಿದೆ. ರಾಜಕೀಯ ರಂಗದ ನೇತಾರರಿಗೆ ಶುಭದಾಯಕ ದಿನ. ಶುಭಸಂಖ್ಯೆ: 3
ಕನ್ಯಾ: ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅಕ್ಕಸಾಲಿಗರು, ಕುಶಲಕರ್ಮಿಗಳಿಗೆ ಅನಿರೀಕ್ಷಿತ ಉತ್ತಮ ಸಂಪಾದನೆ ಆಗಲಿದೆ. ಶುಭಸಂಖ್ಯೆ: 6
ತುಲಾ: ಉದ್ಯಮಸ್ಥ ಮಹಿಳೆಯರಿಗೆ ವಿದೇಶ ಪ್ರಯಾಣ ಯೋಗ. ರಸಸಂಜೆ ಆಯೋಜಕರಿಗೆ ವಿಶೇಷ ಲಾಭ. ಸಾರ್ವಜನಿಕವಾಗಿ ಪ್ರಶಂಸೆ. ಶುಭಸಂಖ್ಯೆ: 1
ವೃಶ್ಚಿಕ: ವಿಭಿನ್ನ ಮೂಲಗಳಿಂದ ಹಣ ಗಳಿಸುವಿರಿ. ಧಾರ್ಮಿಕ ಕ್ಷೇತ್ರದ ಕೆಲಸಗಾರರಿಗೆ ಪ್ರಗತಿ. ಸರ್ಕಾರಿ ಕೆಲಸದ ಕನಸು ಈಡೇರಲಿದೆ. ಶುಭಸಂಖ್ಯೆ: 9
ಧನು: ಬ್ಯಾಂಕ್ ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಸಹಕಾರ. ಆಸ್ತಿ ವ್ಯವಹಾರದಲ್ಲಿ ತಾಳ್ಮೆ ಇರಲಿ. ವಸ್ತ್ರ ಉದ್ಯಮದಲ್ಲಿ ಲಾಭ. ಶುಭಸಂಖ್ಯೆ: 4
ಮಕರ: ಕಚೇರಿಯಲ್ಲಿ ಉಂಟಾಗಿದ್ದ ಮನಸ್ತಾಪ ಬಗೆಹರಿಯಲಿದೆ. ವಾಣಿಜ್ಯ ಪದವೀಧರರಿಗೆ ಉತ್ತಮ ಉದ್ಯೋಗ ಪ್ರಾಪ್ತಿ. ಸಂಜೆ ಶುಭ. ಶುಭಸಂಖ್ಯೆ: 2
ಕುಂಭ: ಕೃಷಿ ಉಪಕರಣ ಮಾರಾಟದಲ್ಲಿ ಲಾಭ. ಜೇನು ಕೃಷಿಕರಿಗೆ ಸಹಾಯಧನ ಲಭ್ಯ. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 7
ಮೀನ: ಸ್ವಂತ ವಾಹನ ದುರಸ್ತಿಗೆ ಹಣವ್ಯಯ. ಪ್ರತಿಭಾನ್ವಿತರಿಗೆ ಸೂಕ್ತ ಗೌರವ, ಮನ್ನಣೆ. ಭಾಷಾ ಕಲಿಕಾ ಕೇಂದ್ರದವರಿಗೆ ಧನ ಲಾಭ. ಶುಭಸಂಖ್ಯೆ: 5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net