ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಂಗಾತಿಯಿಂದ ಸೂಕ್ತ ಸಲಹೆ ಸಿಗಲಿದೆ

Nitya Bhavishya
Nitya Bhavishya
Published on
ಮೇಷ: ಸಂಗಾತಿಯಿಂದ ಸೂಕ್ತ ಸಲಹೆ ಸಿಗಲಿದೆ. ಪಾಲುದಾರಿಕೆಯಲ್ಲಿ ಬೇಸರವಾಗುವುದು. ವೈದ್ಯರ ಚಿಕಿತ್ಸೆಯಿಂದ ರೋಗ ಪರಿಹಾರ. ಶುಭಸಂಖ್ಯೆ: 5
ವೃಷಭ: ಕೆಟ್ಟ ಕನಸುಗಳಿಂದ ಭಯ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ದುಬಾರಿ ಪೀಠೋಪಕರಣ ವ್ಯಾಪಾರದಲ್ಲಿ ಹಣ ಸಂಪಾದನೆ. ಶುಭಸಂಖ್ಯೆ: 9
ಮಿಥುನ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯ ಗಳಿಂದ ಲಾಭ ಮತ್ತು ಅನುಕೂಲ. ದಿನಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ.ಶುಭಸಂಖ್ಯೆ: 6
ಕಟಕ: ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಲಾಭ. ಗೃಹ ನಿರ್ವಣದ ಆಸೆ, ಈಡೇರಲಿದೆ. ಸಹೋದ್ಯೋಗಿಗಳ ಸಹಾಯದಿಂದ ಅನುಕೂಲ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೀತಿ ಪ್ರೇಮದ ವಿಷಯಗಳಿಂದ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 9
ಕನ್ಯಾ: ವಾಹನ ಮಾಲೀಕರಿಗೆ ಆರ್ಥಿಕ ಅನುಕೂಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಗತಿ. ಮಕ್ಕಳಿಂದ ಶುಭ. ಕಷ್ಟದಲ್ಲಿರುವವರಿಗೆ ಸಹಾಯ. ಶುಭಸಂಖ್ಯೆ: 7
ತುಲಾ: ಲೇವಾದೇವಿ ವ್ಯವಹಾರದಲ್ಲಿ ಅನುಕೂಲವಿದೆ. ನೆರೆಹೊರೆಯವರಿಂದ ಅನುಕೂಲ. ದಾಯಾದಿಗಳ ಕಿರಿಕಿರಿ. ದುಷ್ಟರ ಭೇಟಿ. ಶುಭಸಂಖ್ಯೆ: 3
ವೃಶ್ಚಿಕ: ಅಲಂಕಾರಿಕ ವಸ್ತು ಖರೀದಿಗೆ ಅಧಿಕ ಖರ್ಚು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಮಹಿಳೆಯರಿಂದ ಸಾಂತ್ವನ. ಶುಭಸಂಖ್ಯೆ: 4
ಧನಸ್ಸು: ಮಕ್ಕಳೊಡನೆ ಘರ್ಷಣೆ . ಜೀವನಾವಶ್ಯಕ ವಸ್ತು ಮಾರಾಟದಿಂದ ಗಣನೀಯ ಲಾಭ. ಸ್ತ್ರೀಯರಿಗೆ ವಾಣಿಜ್ಯ ಕ್ಷೇತ್ರದಲ್ಲಿ ಉದ್ಯೋಗ. ಶುಭಸಂಖ್ಯೆ: 2
ಮಕರ: ಯುವತಿಯರ ಆಕಾಂಕ್ಷೆ ಈಡೇರಲಿದೆ. ಕೃಷಿಯತ್ತ ಒಲವು. ಪ್ರೇಮದಿಂದ ತೊಂದರೆ. ವಿದೇಶದಲ್ಲಿರುವ ಮಕ್ಕಳಿಂದ ಶುಭಸುದ್ದಿ. ಶುಭಸಂಖ್ಯೆ: 7
ಕುಂಭ: ಸ್ಥಿರಾಸ್ತಿ ಖರೀದಿಗೆ ಸುಸಮಯ. ಅಪರಿಚಿತರಿಂದ ಅನುಕೂಲ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಮಿತ್ರರಿಂದ ಭಾಗ್ಯೋದಯ. ಶುಭಸಂಖ್ಯೆ: 2
ಮೀನಾ: ಬಟ್ಟೆ ಮಾರಾಟಗಾರರಿಗೆ ಅನಿರೀಕ್ಷಿತ ಧನಾಗಮನ. ಸಾರ್ವಜನಿಕ ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತಿ. ನೆರೆಯವರಿಂದ ಸೂಕ್ತ ಸಲಹೆ. ಶುಭಸಂಖ್ಯೆ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net