ಮೇಷ: ಹೊಸ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಹೋಟೆಲ್, ರೆಸ್ಟೋರೆಂಟ್ ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ. ಶುಭಸಂಖ್ಯೆ: 5.ವೃಷಭ: ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ತಾಳ್ಮೆಯಿಂದ ವರ್ತಿಸಿ. ಬ್ಯಾಂಕಿನ ವ್ಯವಹಾರದಲ್ಲಿ ಗೊಂದಲ. ಶುಭಸಂಖ್ಯೆ: 3.ಮಿಥುನ: ಅಯಾಚಿತವಾಗಿ ಅಧಿಕಾರ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಹೂಡಿಕೆ ಆಗಲಿದೆ. ನಟನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಶುಭಸಂಖ್ಯೆ: 9.ಕಟಕ: ಶಕ್ತಿ ಇಂಧನಗಳ ವ್ಯಾಪಾರದಲ್ಲಿ ಲಾಭ. ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಗೌರವ, ಸನ್ಮಾನ. ಮಾನಸಿಕವಾಗಿ ಉತ್ಸಾಹವಿರಲಿದೆ. ಶುಭಸಂಖ್ಯೆ: 1.ಸಿಂಹ: ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಭೂ ವ್ಯವಹಾರದಲ್ಲಿ ಲಾಭಗಳಿಸುವಿರಿ. ಚಿತ್ರಕಲೆ, ಶಿಲ್ಪಕಲೆಯ ಪರಿಣಿತರಿಗೆ ಬೇಡಿಕೆ. ಶುಭಸಂಖ್ಯೆ: 7.ಕನ್ಯಾ: ಷೇರು ವ್ಯವಹಾರದಲ್ಲಿ ಲಾಭ ಗಳಿಕೆ. ತಾಂತ್ರಿಕ ಪದವೀಧರರಿಗೆ ವಿದೇಶ ಪ್ರಯಾಣ. ಸಾಹಿತ್ಯ ಲೋಕದಲ್ಲಿ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 6.ತುಲಾ: ಆತ್ಮೀಯರ ಸಹಾಯದಿಂದ ಆರ್ಥಿಕ ಸುಧಾರಣೆ. ಹಳೇ ಬಾಕಿ ಹಣ ವಾಪಸ್ ಬರಲಿದೆ. ಫ್ಯಾಷನ್ ಡಿಸೈನ್‌ನವರಿಗೆ ಶುಭದಿನ. ಶುಭಸಂಖ್ಯೆ: 5.ವೃಶ್ಚಿಕ: ಮಹಿಳಾ ಉದ್ಯೋಗಿಗಳಿಗೆ ಬೀಳ್ಕೊಡುಗೆ. ನನೆಗುದಿಗೆ ಬಿದ್ದ ಯೋಜನೆಗೆ ಮರುಚಾಲನೆ. ಕುಶಲಕರ್ಮಿಗಳಿಗೆ ಸರ್ಕಾರಿ ಸೌಲಭ್ಯ. ಶುಭಸಂಖ್ಯೆ: 4.ಧನು: ವಿದ್ಯಾರ್ಥಿಗಳು ಸವಾಲನ್ನು ಸಮರ್ಥವಾಗಿ ಎದುರಿಸುವಿರಿ. ಸ್ವಂತ ಉದ್ಯಮ ಪ್ರಾರಂಭಕ್ಕೆ ಶುಭಕಾಲ. ಆಧ್ಯಾತ್ಮಿಕದತ್ತ ಮನಸ್ಸು. ಶುಭಸಂಖ್ಯೆ: 2.ಮಕರ: ನಿಮ್ಮ ನಿರ್ಧಾರಕ್ಕೆ ಹಿರಿಯರಿಂದ ಬೆಂಬಲ. ಕಬ್ಬಿಣ, ಸಿಮೆಂಟ್ ವ್ಯಾಪಾರದಲ್ಲಿ ಲಾಭಗಳಿಕೆ. ಸಗಟು ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 7.ಕುಂಭ: ಹೊಸ ಆಲೋಚನೆ ಕಾರ್ಯಗತವಾಗಲಿದೆ. ಆನ್‌ಲೈನ್ ವ್ಯವಹಾರದಲ್ಲಿ ಎಚ್ಚರ. ವೈದ್ಯಕೀಯ ಕ್ಷೇತ್ರದ ಕೆಲಸಗಾರರಿಗೆ ವರ್ಗಾವಣೆ. ಶುಭಸಂಖ್ಯೆ: 3.ಮೀನ: ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಲಭ್ಯ. ಆದಾಯದ ಹೊಸ ಮೂಲ ಸೃಷ್ಟಿಯಾಗಲಿದೆ. ಆಸ್ತಿ ವಿವಾದ ಕೋರ್ಟ್ ಮೆಟ್ಟಲೇರಲಿದೆ. ಶುಭಸಂಖ್ಯೆ: 8