ಮೇಷ: ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ. ದೇವತಾ ಕಾರ್ಯಗಳಿಗೆ ಉತ್ತಮ ಸಮಯ. ಆಸ್ತಿ ವಿಚಾರದಲ್ಲಿ ಕುಟುಂಬದ ಸಹಕಾರ. ಶುಭಸಂಖ್ಯೆ: 9.ವೃಷಭ: ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಉತ್ಸಾಹ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ನಾಟ್ಯಕಲಾವಿದರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 9.ಮಿಥುನ: ಶೈಕ್ಷಣಿಕ ಕ್ಷೇತ್ರದವರಿಗೆ ಆರ್ಥಿಕ ಚೇತರಿಕೆ. ಕೋರ್ಟ್ ಕೇಸುಗಳಲ್ಲಿ ಯಶಸ್ಸು. ಪತ್ರ ವ್ಯವಹಾರಗಳಲ್ಲಿ ಅನಾನುಕೂಲ ಆಗಬಹುದು. ಶುಭಸಂಖ್ಯೆ: 6.ಕಟಕ: ಕಾರ್ಯದಲ್ಲಿ ಮುನ್ನಡೆ. ಮಾನಸಿಕ ಗಾಬರಿ. ದ್ವಂದ್ವ ಮನಸ್ಥಿತಿಯಿಂದ ಹೊರಬರುವಿರಿ. ಸಂಗೀತ ಕಲಾವಿದರ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 1.ಸಿಂಹ: ಆರ್ಥಿಕ ಕೊರತೆ ನಿವಾರಣೆಗೆ ಹೊಸ ದಾರಿ ಕಾಣಲಿದೆ. ಕೌಟುಂಬಿಕ ಸಹಕಾರದಲ್ಲಿ ಆಸ್ತಿ ವಿಭಾಗ. ಶುಭಕಾರ್ಯ ಯತ್ನದಲ್ಲಿ ಯಶ. ಶುಭಸಂಖ್ಯೆ: 4.ಕನ್ಯಾ: ಮಿತ್ರರೊಂದಿಗೆ ಔತಣಕೂಟ. ಪ್ರಯಾಣದಲ್ಲಿ ಹೊಸ ಪರಿಚಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಾಟ ಮಂತ್ರದ ಭೀತಿ ನಿವಾರಣೆ. ಶುಭಸಂಖ್ಯೆ: 6.ತುಲಾ: ದಿನಸಿ ವ್ಯವಹಾರದಲ್ಲಿ ಗಣನೀಯ ವೃದ್ಧಿ. ಮಹಿಳೆಯರಿಗೆ ಕಚೇರಿಯಲ್ಲಿ ಒತ್ತಡ. ಕುಟುಂಬದೊಂದಿಗೆ ಕುಲದೇವತಾ ದರ್ಶನ. ಶುಭಸಂಖ್ಯೆ: 9.ವೃಶ್ಚಿಕ: ನನೆಗುದಿಗೆ ಬಿದ್ದ ಕೆಲಸಕ್ಕೆ ಚುರುಕಿನ ಕಾರ್ಯಚಟುವಟಿಕೆ. ಸಾಲ ತೀರಿಸಲು ಮಾರ್ಗ ಸಿಗಲಿದೆ, ಪಾಲುದಾರಿಕೆಯಲ್ಲಿ ಪ್ರಗತಿ. ಶುಭಸಂಖ್ಯೆ: 6.ಧನು: ಅಥ್ಲೀಟ್‌ಗಳಿಗೆ ಕೇಂದ್ರ ಸರ್ಕಾರದಿಂದ ಗೌರವ. ವಿದೇಶದಲ್ಲಿರುವ ಆತ್ಮೀಯರಿಂದ ಸಹಕಾರ. ರೋಗಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 1.ಮಕರ: ಕೃಷಿ ಉಪಕರಣ ಮಾರಾಟಗಾರರಿಗೆ ದೊಡ್ಡ ಲಾಭ. ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ. कुटुंबದ ಬಗ್ಗೆ ಕಾಳಜಿ ಇರಲಿ. ಶುಭಸಂಖ್ಯೆ: 6.ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ. ಆಧ್ಯಾತ್ಮಿಕ ಚಿಂತನೆಯಿಂದ ಮನಶ್ಶಾಂತಿ. ಸಂಜೆ ಸ್ವಗ್ರಾಮಕ್ಕೆ ಪಯಣ. ಶುಭಸಂಖ್ಯೆ: 2.ಮೀನ: ರೇಷ್ಮೆ ಮತ್ತು ಜೇನು ಕೃಷಿಯಿಂದ ಹಣ ಗಳಿಸುವಿರಿ. ಸರ್ಕಾರಿ ಹರಾಜಿನಲ್ಲಿ ಆರ್ಥಿಕ ಲಾಭ. ದೂರ ಪ್ರಯಾಣಕ್ಕೆ ಅನುಕೂಲ ದಿನ. ಶುಭಸಂಖ್ಯೆ: 6