ಮೇಷ: ಸಹೋದರನ ಆರೋಗ್ಯ ಸುಧಾರಿಸಲಿದೆ. ಹೊಸದಾಗಿ ಪ್ರಾರಂಭಿಸಿದ ಕೆಲಸಕ್ಕೆ ವೇಗ ಸಿಗಲಿದೆ. ಸಾಧು ಸಂತರ ದರ್ಶನ ಮಾಡಿ. ಶುಭಸಂಖ್ಯೆ:1.ವೃಷಭ: ಬ್ಯಾಂಕ್ನಿಂದ ಸಾಲ ಮಂಜೂರಾಗಲಿದೆ. ಕುಟುಂಬದಲ್ಲಿ ಸಹನೆಯಿಂದ ವರ್ತಿಸಿ. ಕಲಾವಿದರಿಗೆ ಅನಿರೀಕ್ಷಿತ ಅವಕಾಶ ಲಭ್ಯ. ಶುಭಸಂಖ್ಯೆ:6.ಮಿಥುನ: ಸಿಮೆಂಟ್ ಮತ್ತು ಮರಳು ವ್ಯಾಪಾರದಲ್ಲಿ ಹಣಗಳಿಕೆ. ಐಟಿ ಉದ್ಯಮದಲ್ಲಿ ಪ್ರಗತಿ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:8.ಕಟಕ: ಖರೀದಿಗೆ ಅನಗತ್ಯ ಹಣವ್ಯಯ. ಹೃದಯ ಸಂಬಂಧಿ ಸಮಸ್ಯೆ ಇರುವವರು ಹುಷಾರು. ಜಿಮ್ ತರಬೇತುದಾರರಿಗೆ ಹಣ ಲಾಭ. ಶುಭಸಂಖ್ಯೆ:7.ಸಿಂಹ: ಶಿಕ್ಷಣ ಇಲಾಖೆಯ ನೌಕರರಿಗೆ ಬಡ್ತಿ. ಪ್ರಮುಖ ನಿರ್ಧಾರ ಕೈಗೊಳ್ಳುವಾಗಿನ ಗೊಂದಲ ನಿವಾರಣೆ. ಅಪರಿಚಿತರೊಂದಿಗೆ ಜಾಗ್ರತೆ. ಶುಭಸಂಖ್ಯೆ:1.ಕನ್ಯಾ: ಒತ್ತಡದ ನಡುವೆ ಪ್ರಗತಿ. ಪೋಷಕರ ಅಸಮ್ಮತಿಯಿದ್ದರೆ ವಿವಾಹದ ನಿರ್ಧಾರ ಮುಂದೂಡಿ. ದವಸ ಧಾನ್ಯ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6.ತುಲಾ: ನನೆಗುದಿಗೆ ಬಿದ್ದ ಕೆಲಸ ಪ್ರಾರಂಭ. ಸಾರ್ವಜನಿಕ ಜೀವನದಲ್ಲಿ ಗೌರವ ಪ್ರಾಪ್ತಿ. ಕೋರ್ಟ್ ವ್ಯವಹಾರದಲ್ಲಿ ವಿಳಂಬ ಕಾಡಲಿದೆ. ಶುಭಸಂಖ್ಯೆ:3.ವೃಶ್ಚಿಕ: ಹಿತ ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ನೂತನ ಗೃಹ ನಿರ್ಮಾಣ ಆರಂಭ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಶುಭಸಂಖ್ಯೆ:8. ಧನಸ್ಸು: ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ವಿದೇಶದಲ್ಲಿ ಹೋಟೆಲ್ ಆರಂಭಿಸುವಿರಿ. ಆಸ್ತಿವಿವಾದ ವಿಳಂಬ. ಧಾರ್ವಿುಕ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ:1.ಮಕರ: ಜೋಳ, ರಾಗಿ ಬೆಳೆಯಲು ಸರ್ಕಾರದ ಸಹಾಯಧನ ಪ್ರಾಪ್ತಿ. ತಂದೆಗೆ ಶಸ್ತ್ರಚಿಕಿತ್ಸೆ ಯಶಸ್ವಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:5.ಕುಂಭ: ವೈದ್ಯಕೀಯ ವಿಜ್ಞಾನದ ಅಧ್ಯಯನಕ್ಕಾಗಿ ವಿದೇಶ ಪ್ರವಾಸದ ಅವಕಾಶ. ಆರ್ಥಿಕ ಮುಗ್ಗಟ್ಟಿನ ನಿವಾರಣೆಗೆ ಸ್ನೇಹಿತರ ಸಹಾಯ. ಶುಭಸಂಖ್ಯೆ:3.ಮೀನಾ: ಮಾತಿನಲ್ಲಿ ಮಾಧುರ್ಯ ಇರಲಿ. ನ್ಯಾಯಾಲಯದ ಕೆಲಸ ಸುಗಮವಾಗಲಿದೆ. ಸಂಗಾತಿಯ ಸಲಹೆಯಿಂದ ವಿಪತ್ತಿನಿಂದ ಪಾರು. ಶುಭಸಂಖ್ಯೆ:8