ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ

Nitya Bhavishya
Nitya Bhavishya
Published on
ಮೇಷ: ಬಂಧುಗಳ ಸಹಾಯದಿಂದ ಗೃಹ ನಿರ್ಮಾಣ ಪ್ರಾರಂಭ. ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸಿ. ತಾಯಿಯ ಆರೋಗ್ಯ ಚೇತರಿಕೆ. ಶುಭಸಂಖ್ಯೆ: 9
ವೃಷಭ: ಪತ್ರಿಕೋದ್ಯಮದವರಿಗೆ ಆಕಸ್ಮಿಕ ಧನ ಲಾಭ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ. ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಶುಭಸಂಖ್ಯೆ: 1
ಮಿಥುನ: ಅಮೂಲ್ಯ ವಸ್ತು ಸಂಗ್ರಹಕಾರರಿಗೆ ಗೌರವ, ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ:8
ಕಟಕ: ಕೇಂದ್ರ ಸರ್ಕಾರದ ಉನ್ನತ ಹುದ್ದೆ ಪ್ರಾಪ್ತಿ ಸಾಧ್ಯತೆ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಅಡಿಕೆ ಕೃಷಿಕಾರಿಗೆ ಶುಭದಿನ. ಶುಭಸಂಖ್ಯೆ:3
ಸಿಂಹ: ಐಟಿ ಉದ್ಯಮದಲ್ಲಿ ಬದಲಾವಣೆಗೆ ಯೋಜನೆ. ಅಲಂಕಾರಿಕ ವಸ್ತುಗಳ ಮಳಿಗೆಗೆ ಲಾಭ. ನೂತನ ವಾಹನ ಖರೀದಿಗೆ ಶುಭದಿನ. ಶುಭಸಂಖ್ಯೆ:7
ಕನ್ಯಾ: ವಿದೇಶದಲ್ಲಿ ಅವಕಾಶಗಳು ದೊರೆಯಲಿವೆ. ಹೊಸ ಕೆಲಸದಲ್ಲಿ ಉತ್ಸಾಹ. ಸಂತಾನ ಅಪೇಕ್ಷಿತರಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:4
ತುಲಾ: ನೂತನ ಗೃಹ ಖರೀದಿಗೆ ನಿರ್ಧಾರ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಯೋಜನೆ ಪೂರ್ಣ ಮಾಡುವಿರಿ. ಶುಭಸಂಖ್ಯೆ: 5
ವೃಶ್ಚಿಕ: ಸಹಕಾರ ಸಂಸ್ಥೆಯಲ್ಲಿ ಉದ್ಯೋಗ ಸಿಗಲಿದೆ. ಹೊಸ ಪಾಲುದಾರರ ಸೇರ್ಪಡೆ. ಕಿರುಚಿತ್ರ ನಿರ್ದೇಶಕರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಶುಭಸಂಖ್ಯೆ: 6
ಧನುಸ್ಸು: ಲಲಿತ ಕಲೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಹೊಸ ವ್ಯಾಪಾರದಿಂದ ಲಾಭ. ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದಲ್ಲಿ ಲಾಭ. ಶುಭಸಂಖ್ಯೆ: 7
ಮಕರ: ಹೈನೋದ್ಯಮದಲ್ಲಿ ಲಾಭಗಳಿಸುವಿರಿ. ನ್ಯಾಯಾಲಯದ ವಿವಾದದಲ್ಲಿ ನಿಮ್ಮ ಪರವಾಗಿ ತೀರ್ಪ. ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ:2
ಕುಂಭ: ಧಾರ್ವಿುಕ ಸಂಸ್ಥೆಯಲ್ಲಿ ಮುಖ್ಯ ಹುದ್ದೆ ಪ್ರಾಪ್ತಿಯಾಗು ವುದು. ಸಹೋದ್ಯೋಗಿಗಳಿಂದ ಪೋ›ತ್ಸಾಹ. ಹಳೆಯ ಸ್ನೇಹಿತೆಯ ಭೇಟಿ. ಶುಭಸಂಖ್ಯೆ:9
ಮೀನ: ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶ. ನಿಮ್ಮ ಸಾಧನೆಗೆ ಸಾರ್ವಜನಿಕ ಮನ್ನಣೆ. ಸೌಂದರ್ಯ ವರ್ಧಕಗಳ ಮಾರಾಟದಿಂದ ಲಾಭ. ಶುಭಸಂಖ್ಯೆ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net