ನಿತ್ಯ ಭವಿಷ್ಯ: ಈ ರಾಶಿಯವರಿಗೆ ಅಪರಿಚಿತರಿಂದ ಸಹಾಯ ಸಿಗುವುದು

Nitya Bhavishya
Nitya Bhavishya
Published on
ಮೇಷ: ವಿರೋಧಿಗಳಿಂದ ಇದ್ದ ತೊಂದರೆಗಳ ನಿವಾರಣೆ. ಹೃದಯ ಸಂಬಂಧಿತ ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 3
ವೃಷಭ: ಟ್ರಾವೆಲ್ಸ್​ನವರಿಗೆ ಚಾಲಕರ ಸಮಸ್ಯೆ. ಆಯುರ್ವೇದ ಮೂಲಿಕೆಗಳ ವ್ಯಾಪಾರದಲ್ಲಿ ಲಾಭ ಬರಲಿದೆ. ಹಿರಿಯರಿಂದ ಹಿತನುಡಿ. ಶುಭಸಂಖ್ಯೆ: 7
ಮಿಥುನ: ಹೊಸ ವಾಹನ ಖರೀದಿ. ಭೋಗ ವಸ್ತುಗಳ ಖರೀದಿಯಲ್ಲಿ ಲಾಭ. ಸ್ತ್ರೀಯರಿಗೆ ವರ್ಗಾವಣೆ ಸಾಧ್ಯತೆ. ಶೀತ ಸಂಬಂಧಿತ ರೋಗ. ಶುಭಸಂಖ್ಯೆ: 5
ಕಟಕ: ಆತ್ಮೀಯರಲ್ಲಿ ಸಾಲ ಸಿಗಲಿದೆ. ಬೋರ್ಡ್ ಸಭೆಯಲ್ಲಿ ಗೌರವ. ಶರೀರದಲ್ಲಿ ಆಯಾಸ. ಆಹಾರಸೇವನೆಯಲ್ಲಿ ಹಿಡಿತ ಅಗತ್ಯ. ಶುಭಸಂಖ್ಯೆ: 7
ಸಿಂಹ: ದೃಷ್ಟಿ ದೋಷಕ್ಕೆ ಚಿಕಿತ್ಸೆ. ದೂರ ಪ್ರಯಾಣ ಸಾಧ್ಯತೆ. ರೇಷ್ಮೆ ಬೆಳೆಗಾರರಿಗೆ ಲಾಭ. ಸಗಟು ವ್ಯಾಪಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ: 7
ಕನ್ಯಾ: ವಿವಾಹ ವಿಷಯದಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಪ್ರಶಂಸೆ. ವಿವಾದಗಳಿಂದ ದೂರವಿರಿ. ಶುಭಸಂಖ್ಯೆ:1
ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದೇಶ ಪ್ರಯಾಣ ರದ್ದು. ದಾಂಪತ್ಯದಲ್ಲಿ ತಾಳ್ಮೆಅತ್ಯಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಭದ್ರತಾ ಉದ್ಯೋಗದಲ್ಲಿ ಪದವಿ ಲಭ್ಯ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 3
ಧನಸ್ಸು: ಹಳೆಯ ಮಿತ್ರರೊಂದಿಗೆ ಪ್ರವಾಸ. ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವಿರಿ. ನ್ಯಾಯಾಲಯದ ಪ್ರಕರಣದಲ್ಲಿ ನಿಮ್ಮ ಪರ ತೀರ್ಪ. ಶುಭಸಂಖ್ಯೆ: 7
ಮಕರ: ಶುಭಸುದ್ದಿ. ಬಟ್ಟೆ ಅಂಗಡಿಯವರಿಗೆ ಮಾರಾಟದಲ್ಲಿ ಪ್ರಗತಿ. ಸಕಾಲದಲ್ಲಿ ಯಾವುದೇ ಕೆಲಸ ಆಗದೆ ಬೇಸರ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 7
ಕುಂಭ: ಮಹಿಳೆಯರಿಗೆ ಪ್ರವಾಸ ಯೋಗ. ಅಪರಿಚಿತರಿಂದ ಸಹಾಯ ಸಿಗುವುದು. ಉದ್ಯೋಗದಲ್ಲಿ ಬದಲಾವಣೆ. ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 6
ಮೀನಾ: ಹಣದ ಸಂಕಷ್ಟ ನಿವಾರಣೆ. ಸಾರ್ವಜನಿಕವಾಗಿ ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಅನಗತ್ಯ ಹಸ್ತಕ್ಷೇಪ ಬೇಡ. ಶುಭಸಂಖ್ಯೆ: 5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net