ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ವಉದ್ಯಮದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ವಉದ್ಯಮದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ವಉದ್ಯಮದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ
Published on
ಮೇಷ: ಸಹಕಾರಿ ಸಂಸ್ಥೆಯ ಕೆಲಸಕ್ಕಾಗಿ ತಿರುಗಾಟ. ಚಿತ್ರ ಕಲಾವಿದರಿಗೆ ಪರಿಶ್ರಮಕ್ಕೆ ತಕ್ಕ ಫಲ. ಗಾರ್ಮೆಂಟ್ ಉದ್ಯಮಗಳಲ್ಲಿ ಯಶಸ್ಸು. ಶುಭಸಂಖ್ಯೆ:1
ವೃಷಭ: ವಿವಾಹ ವಿಳಂಬದಿಂದ ಮಾನಸಿಕ ಚಿಂತೆ. ಉದ್ಯೋಗದಲ್ಲಿ ಹೆಚ್ಚು ಶ್ರಮ. ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ರೈತರಿಗೆ ಸನ್ಮಾನ. ಶುಭಸಂಖ್ಯೆ: 4
ಮಿಥುನ: ಧಾರ್ವಿುಕ ನಾಯಕರಿಗೆ ದೂರ ಪ್ರಯಾಣ ಮಾಡುವ ಅವಕಾಶ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರ್ಕಾರಿ ಕಚೇರಿಗಳಲ್ಲಿ ವಿಳಂಬ. ಶುಭಸಂಖ್ಯೆ: 6
ಕಟಕ: ಸ್ವಉದ್ಯಮದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ. ದೂರದ ಬಂಧುಗಳ ಭೇಟಿ. ದೇವತಾ ಕಾರ್ಯದಲ್ಲಿ ಮನೆ ಮಂದಿಯ ಸಹಾಯ. ಶುಭಸಂಖ್ಯೆ:2
ಸಿಂಹ: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆಗೆ ಮೀರಿ ಲಾಭ. ಕನಸಿನ ನಿವೇಶನ ಲಭ್ಯ. ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಬರಲಿದೆ. ಶುಭಸಂಖ್ಯೆ: 7
ಕನ್ಯಾ: ಹಿತೈಷಿಗಳ ಪ್ರಾಮಾಣಿಕತೆಯ ಮೇಲೆ ಸಂಶಯ. ಸಹೋದ್ಯೋಗಿಗಳ ಸಲಹೆಯಿಂದ ಕಚೇರಿ ಕೆಲಸ ಪೂರ್ಣಗೊಳಿಸುವಿರಿ. ಶುಭಸಂಖ್ಯೆ:6
ತುಲಾ: ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ನಿಮ್ಮ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಿಸುವುದಕ್ಕೆ ಯೋಚನೆ. ಶುಭಸಂಖ್ಯೆ:2
ವೃಶ್ಚಿಕ: ತಂದೆಯ ಆರೋಗ್ಯ ಸುಧಾರಿಸಲಿದೆ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಸ್ಥಾನಮಾನ. ಕುಶಲಕರ್ವಿುಗಳ ಸಾಧನೆಗೆ ಉತ್ತಮ ಬೇಡಿಕೆ.ಶುಭಸಂಖ್ಯೆ: 6
ಧನಸ್ಸು: ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ. ಕುಟುಂಬದ ಕುರಿತು ಆಶಾಭಾವನೆಯನ್ನು ಉಳಿಸಿಕೊಳ್ಳಿ .ಆತ್ಮೀಯರ ಭೇಟಿಯಿಂದ ಹರ್ಷ. ಶುಭಸಂಖ್ಯೆ:3
ಮಕರ: ಭೂ ವ್ಯವಹಾರದವರಿಗೆ ಅನುಕೂಲ. ಆಭರಣ ವ್ಯಾಪಾರದಲ್ಲಿ ಲಾಭ. ಹೋಟೆಲ್ ವ್ಯಾಪಾರ ವೃದ್ಧಿಗೆ ಪರಿಚಯಸ್ಥರ ಸಹಾಯ. ಶುಭಸಂಖ್ಯೆ: 5
ಕುಂಭ: ಉದ್ಯೋಗ ಸ್ಥಾನದಲ್ಲಿ ಸ್ಪರ್ಧೆ. ಆಭರಣ ಖರೀದಿಯಲ್ಲಿ ಲಾಭ. ಅಲ್ಪಾವಧಿ ಷೇರು ಹೂ ಡಿಕೆಗೆ ನಿರ್ಧಾರ. ವಿದೇಶ ಪ್ರಯಾಣ. ಶುಭಸಂಖ್ಯೆ: 6
ಮೀನಾ: ನಿಮ್ಮ ಒಳ್ಳೇತನ ದೌರ್ಬಲ್ಯವಾಗದಿರಲಿ. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಂದ ತೊಂದರೆ. ಉದ್ಯಮಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net