ನಿತ್ಯ ಭವಿಷ್ಯ: ಈ ರಾಶಿಯವರಿಂದು ದಾಂಪತ್ಯದಲ್ಲಿ ಶುಭ ಸುದ್ದಿ ಕೇಳುವಿರಿ

Nitya Bhavishya
Nitya Bhavishya
Published on
ಮೇಷ: ಸಾರಿಗೆ ಇಲಾಖೆಯ ಉದ್ಯೋಗ ಪ್ರಾಪ್ತಿ. ಹೊಸ ವ್ಯವಹಾರದಲ್ಲಿ ಧನಲಾಭ. ಸಿಮೆಂಟ್, ಮರಳು ಮಾರಾಟದಲ್ಲಿ ಚೇತರಿಕೆ. ಶುಭಸಂಖ್ಯೆ: 3
ವೃಷಭ: ಆಸ್ತಿ ಮಾರಾಟಕ್ಕೆ ಸೂಕ್ತ ಸಮಯ. ಪಾಲುದಾರಿಕೆಯಲ್ಲಿ ಹೊಸ ಬಂಡವಾಳ ಬರಲಿದೆ. ಸಾಲ ತೀರಿಸಲು ಮಕ್ಕಳಿಂದ ಸಹಕಾರ. ಶುಭಸಂಖ್ಯೆ: 8
ಮಿಥುನ: ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು. ಲೋಹಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 6
ಕಟಕ: ಸೇವಾ ವೃತ್ತಿಯವರಿಗೆ ಶುಭದಿನ. ಮಗನ ವಿವಾಹಕ್ಕೆ ಇದ್ದ ಅಡೆತಡೆ ನಿವಾರಣೆಯಾಗುವುದು. ಕುಲದೇವರ ಸನ್ನಿಧಿಗೆ ಹೋಗಿಬನ್ನಿ. ಶುಭಸಂಖ್ಯೆ: 2
ಸಿಂಹ: ದಾಂಪತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಮಾತೃಮೂಲವಾದ ಆಸ್ತಿ ಸಿಗಲಿದೆ. ಶುಭಸಂಖ್ಯೆ: 4
ಕನ್ಯಾ: ನಿಮ್ಮ ಬುದ್ಧಿವಂತಿಕೆಯಿಂದ ಕಚೇರಿಯಲ್ಲಿ ಒಳ್ಳೆಯ ಹೆಸರು ಗಳಿಸುವಿರಿ. ಸರ್ಕಾರಿ ಸೇವೆಯ ಪರೀಕ್ಷೆಯಲ್ಲಿ ಅನಿರೀಕ್ಷಿತ ಬೆಳವಣಿಗೆ. ಶುಭಸಂಖ್ಯೆ: 4
ತುಲಾ: ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ಆಧುನಿಕ ನೃತ್ಯ ತರಬೇತುದಾರರಿಗೆ ಬೇಡಿಕೆ ಹೆಚ್ಚಲಿದೆ. ಹಣ್ಣು ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 2
ವೃಶ್ಚಿಕ: ಆಹಾರ ಸಂಬಂಧಿ ವ್ಯಾಪಾರಕ್ಕೆ ಸೂಕ್ತ ಸಮಯ. ಅನಿರೀಕ್ಷಿತವಾಗಿ ಬಂದ ಹಣದಿಂದ ಸಾಲ ತೀರಿಸುವಿರಿ. ನಿವೇಶನ ಖರೀದಿ. ಶುಭಸಂಖ್ಯೆ: 4
ಧನಸ್ಸು: ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಮಾಲೀಕರಿಗೆ ಆರ್ಥಿಕ ಚೇತರಿಕೆ. ನೆರೆಹೊರೆಯವರ ಸಹಾಯ ದೊರೆತು ಆಪತ್ತಿನಿಂದ ಪಾರಾಗುವಿರಿ. ಶುಭಸಂಖ್ಯೆ: 7
ಮಕರ: ಕಾನೂನು ತಜ್ಞರಿಗೆ ಪ್ರಭಾವಿಗಳಿಂದ ಬುಲಾವ್. ಸಿದ್ಧ ಉಡುಪು ತಯಾರಿಕೆಯಲ್ಲಿ ಹೆಚ್ಚು ಲಾಭ. ಜಾಣ್ಮೆಯಿಂದ ಕಾರ್ಯಸಾಧನೆ. ಶುಭಸಂಖ್ಯೆ: 7
 ಕುಂಭ: ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಕೇಂದ್ರ ಸರ್ಕಾರಿ ಹುದ್ದೆಯಲ್ಲಿ ಬಡ್ತಿ. ಶುಭಸಂಖ್ಯೆ: 2
ಮೀನ: ಸ್ವಉದ್ಯಮದ ಮೂಲಕ ಆರ್ಥಿಕ ಬೆಳವಣಿಗೆ. ಸಾಂಬಾರ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ. ವಾಹನ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 6
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net