ಮೇಷ: ಸಾರಿಗೆ ಸಂಸ್ಥೆಯ ಮಾಲೀಕರಿಗೆ ಅನಿರೀಕ್ಷಿತ ಲಾಭ. ವಿದೇಶ ಪ್ರಯಾಣದ ಕನಸು ನನಸಾಗಲಿದೆ. ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 9.ವೃಷಭ: ಭೋಗ ಸಾಮಗ್ರಿ ಖರೀದಿಗೆ ವ್ಯಯ. ಪಾಲುದಾರಿಕೆ ವ್ಯವಹಾರ ಪ್ರಾರಂಭಕ್ಕೆ ನಿರ್ಧಾರ. ಉನ್ನತ ವಿದ್ಯಾಭ್ಯಾಸಕ್ಕೆ ಪ್ರವೇಶಾತಿ ಲಭ್ಯ. ಶುಭಸಂಖ್ಯೆ: 1.ಮಿಥುನ: ಅವಿವಾಹಿತರಿಗೆ ವಿವಾಹ ಸಿದ್ಧಿ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಆಸ್ತಿ ವಿವಾದ ಬಗೆಹರಿಯಲಿದೆ. ವಕೀಲ ವೃತ್ತಿಯಲ್ಲಿ ಯಶಸ್ಸು. ಶುಭಸಂಖ್ಯೆ: 8.ಕಟಕ: ಬರಬೇಕಾದ ಹಣ ವಿಳಂಬ. ಸ್ನೇಹಿತರ ಭೇಟಿ. ಬೇಕರಿ, ಕಾಂಡಿಮೆಂಟ್ಸ್ ವ್ಯಾಪಾರದಲ್ಲಿ ಲಾಭ. ದಿಢೀರ್ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2.ಸಿಂಹ: ಕಚೇರಿಯಲ್ಲಿ ಸಹನಶೀಲತೆಯಿಂದ ವರ್ತಿಸಿ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಚಲನಚಿತ್ರ ಗಾಯಕಿಯರಿಗೆ ಯಶಸ್ಸು. ಶುಭಸಂಖ್ಯೆ: 7.ಕನ್ಯಾ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ ದೊರೆಯಲಿದೆ. ಕನಸಿನ ನಿವೇಶನ ಸಿಗಲಿದೆ. ಸಹಕಾರಿ ಸಂಘದಲ್ಲಿ ಗೌರವಾನ್ವಿತ ಪದವಿ ಪ್ರಾಪ್ತಿ. ಶುಭಸಂಖ್ಯೆ: 7.ತುಲಾ: ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಲಾಭ. ಮನರಂಜನಾ ಕಾರ್ಯಕ್ರಮಗಳ ಸಂಯೋಜಕರಿಗೆ ಅಧಿಕ ಲಾಭ ಬರಲಿದೆ. ಶುಭಸಂಖ್ಯೆ: 3.ವೃಶ್ಚಿಕ: ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿದ್ದ ಗೊಂದಲ ಪರಿಹಾರವಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ. ಕಟ್ಟಡ ಕಟ್ಟುವವರಿಗೆ ಲಾಭ. ಶುಭಸಂಖ್ಯೆ: 6.ಧನಸ್ಸು: ಮಗಳ ವಿವಾಹದ ಪ್ರಯತ್ನ ಫಲಿಸಲಿದೆ. ಕಚೇರಿಯ ಬದಲಾವಣೆಗೆ ನಿರ್ಧಾರ. ಧಾರ್ಮಿಕ ಕಾರ್ಯಕ್ರಮದಿಂದ ಮನಶ್ಶಾಂತಿ. ಶುಭಸಂಖ್ಯೆ: 4.ಮಕರ: ಆಸ್ತಿ ಖರೀದಿಯಲ್ಲಿ ಇದ್ದ ಅಡೆತಡೆ ನಿವಾರಣೆ. ವೈಮಾನಿಕ ಕಾರ್ಖಾನೆ ಕೆಲಸಗಾರರಿಗೆ ಬಡ್ತಿ. ಅಪರಿಚಿತರಿಂದ ಮೋಸ ಸಾಧ್ಯತೆ. ಶುಭಸಂಖ್ಯೆ: 5.ಕುಂಭ: ಸಾಲ ತೀರಿಸಲು ಸ್ನೇಹಿತರಿಂದ ಸಹಾಯ ಸಿಗಲಿದೆ. ಕೃಷಿ ಜಮೀನಿನ ಖರೀದಿಗೆ ನಿರ್ಧಾರ. ಹೈನೋತ್ಪನ್ನಗಳಲ್ಲಿ ಲಾಭ ಗಳಿಸುವಿರಿ. ಶುಭಸಂಖ್ಯೆ: 1.ಮೀನ: ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಮಗನ ವಿವಾಹಕ್ಕಿದ್ದ ಅಡ್ಡಿ ನಿವಾರಣೆ. ಪಾಲುದಾರಿಕೆಯ ಮನಸ್ತಾಪ ನಿವಾರಣೆ. ಶುಭಸಂಖ್ಯೆ: 9