ನಿತ್ಯ ಭವಿಷ್ಯ: ಈ ರಾಶಿಯ ಮಹಿಳೆಯರಿಗೆ ಆಭರಣ ಲಾಭ

Nitya Bhavisya Vijayavani
Published on

ಮೇಷ: ಸಹೋದರನ ಆರೋಗ್ಯದಲ್ಲಿ ಚೇತರಿಕೆ. ದ್ರವ ಪದಾರ್ಥ ವ್ಯಾಪಾರದಲ್ಲಿ ಜಾಗರೂಕರಾಗಿರಿ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 9

ವೃಷಭ: ತಾಯಿಗೆ ಶಸ್ತ್ರಚಿಕಿತ್ಸೆ ಸಾಧ್ಯತೆ. ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ. ಆರಕ್ಷಕ ವೃತ್ತಿಯವರಿಗೆ ಪರಿಸ್ಥಿತಿಗಳು ಅನುಕೂಲವಾಗಿವೆ. ಶುಭಸಂಖ್ಯೆ: 7

ಮಿಥುನ: ಜ್ಯುವೆಲ್ಲರಿ ವ್ಯಾಪಾರದಲ್ಲಿ ಧನಾಗಮನ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾದೀತು. ಶುಭಸಂಖ್ಯೆ: 7

ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸ್ತ್ರೀಯರು ಖಿನ್ನತೆಗೆ ಜಾರುವ ಸಂಭವ ತಪ್ಪಿಸಿಕೊಳ್ಳಿ. ಕಾಲಿಗೆ ಪೆಟ್ಟಾಗುವ ಸಂಭವ. ಶುಭಸಂಖ್ಯೆ: 1

ಸಿಂಹ: ಯಂತ್ರೋಪಕರಣ ಮಾರಾಟದಲ್ಲಿ ಆದಾಯ. ಸಹೋದರರಿಂದ ಅನುಕೂಲ. ಪ್ರಯಾಣದಲ್ಲಿ ಹೊಸ ಸ್ನೇಹಿತರ ಪರಿಚಯ. ಶುಭಸಂಖ್ಯೆ:8

ಕನ್ಯಾ: ಸಮಾಜದಲ್ಲಿ ಗೌರವ ಲಭ್ಯ. ಉದ್ಯೋಗಕಾಂಕ್ಷಿಗಳಿಗೆ ಶುಭದಾಯಕ ದಿನ. ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಉತ್ತಮ ದಿನ. ಶುಭಸಂಖ್ಯೆ:2

ತುಲಾ: ಕೃಷಿ ಉಪಕರಣ ಖರೀದಿಯಲ್ಲಿ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಆರ್ಥಿಕ ಸಂಕಷ್ಟ ಎದುರಾಗಲಿವೆ. ಶುಭಸಂಖ್ಯೆ:1

ವೃಶ್ಚಿಕ: ಮಹಿಳೆಯರಿಗೆ ಆಭರಣ ಲಾಭ. ಮಧುಮೇಹ ತಜ್ಞರಿಗೆ ಸುಸಮಯ. ವಿಡಿಯೋಗ್ರಾಫರ್​ಗಳಿಗೆ ಆದಾಯದ ಪರ್ವಕಾಲ. ಶುಭಸಂಖ್ಯೆ: 9

ಧನಸ್ಸು: ತೀರ್ವನಗಳನ್ನು ಬದಲಾಯಿಸದಿರಿ. ಹವ್ಯಾಸದ ಕೆಲಸದಿಂದ ಜನ ಸಂಪಾದನೆಯಾಗುವುದು. ಪತ್ನಿಗೆ ಆರೋಗ್ಯದ ತೊಂದರೆ. ಶುಭಸಂಖ್ಯೆ:3

ಮಕರ: ದಿಟ್ಟತನದ ನಿರ್ಧಾರಗಳಿಂದ ಶುಭಫಲ. ವಾಹನ ಮಾಲೀಕರಿಗೆ ನಷ್ಟ. ವಕೀಲರಿಗೆ ಶುಭ. ಬಸ್ಸಿನ ನಿರ್ವಾಹಕರಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ:5

ಕುಂಭ: ಕೋಪದಿಂದ ಕುಟುಂಬದಲ್ಲಿ ನಿಷ್ಠುರ. ಉನ್ನತ ಅಧಿಕಾರಿಗಳು ಬದಲಾವಣೆ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬೇಕು. ಶುಭಸಂಖ್ಯೆ: 7

ಮೀನ: ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಮೆಕ್ಯಾನಿಕ್​ಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ರಕ್ತದೊತ್ತಡದ ಸಮಸ್ಯೆ ಕಾಡೀತು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net