ನಿತ್ಯ ಭವಿಷ್ಯ: ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಪದವಿ ಪ್ರಾಪ್ತಿ

Nitya Bhavisya Vijayavani
Published on

ಮೇಷ: ಅನಿರೀಕ್ಷಿತ ಧನ ಲಾಭವಿರುತ್ತದೆ. ಸಂತೋಷ ಕೂಟಕ್ಕೆ ಅನವಶ್ಯಕ ಖರ್ಚು. ಕಾರ್ವಿುಕ ವೃಂದಕ್ಕೆ ಹೆಚ್ಚಿನ ಧನ ಸಂಪಾದನೆ. ಶುಭಸಂಖ್ಯೆ: 7

ವೃಷಭ: ಗೃಹ ನಿರ್ಮಾಣ ಯೋಜನೆಗಳನ್ನು ರೂಪಿಸುವಾಗ ಎಚ್ಚರ. ದಾಂಪತ್ಯದಲ್ಲಿ ವಿರಸ. ವಿಚ್ಛೇದಿತ ವಿವಾಹಕಾಂಕ್ಷಿಗಳಿಗೆ ಶುಭ ಫಲ. ಶುಭಸಂಖ್ಯೆ:5

ಮಿಥುನ: ಅಗ್ನಿಶಾಮಕ ವಿಭಾಗದವರು ಎಚ್ಚರವಾಗಿರಿ. ಯಂತ್ರಗಳ ಆಮದು - ರಫ್ತುದಾರರಿಗೆ ಲಾಭ. ಒಟ್ಟಾರೆ ಶುಭದಾಯಕ ದಿನ. ಶುಭಸಂಖ್ಯೆ: 3

ಕಟಕ: ಜವಳಿ, ಹೋಟೆಲ್ ಉದ್ಯಮಿಗಳಿಗೆ ಲಾಭ. ಹಿರಿಯರಿಂದ ಹೂಡಿಕೆಗೆ ಧನಸಹಾಯ. ಸ್ವ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಶುಭಸಂಖ್ಯೆ: 7

ಸಿಂಹ: ಅನಿರೀಕ್ಷಿತ ಧನ ಲಾಭ. ಅನ್ಯರ ವಿಚಾರಕ್ಕೆ ಕೈ ಹಾಕಬೇಡಿ. ಸ್ಥಿರಾಸ್ತಿಯನ್ನು ಮಾರುವ ಸಂಭವ. ಚರ್ಮದ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ:2

ಕನ್ಯಾ: ಮನೆ ಪಾಠದವರಿಗೆ ಅನಿರೀಕ್ಷಿತ ಘಟನೆ. ಆರೋಗ್ಯದಲ್ಲಿ ವ್ಯತ್ಯಾಸ. ಕುಟುಂಬದಲ್ಲಿ ಆಸ್ತಿ ಕಲಹ ಸಾಧ್ಯತೆ. ಸಮಾಧಾನ ಮುಖ್ಯ. ಶುಭಸಂಖ್ಯೆ: 6

ತುಲಾ: ದುಡುಕಿ ಮಾತನಾಡಬೇಡಿ. ವಿಜ್ಞಾನ ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ಶುಭಸಂಖ್ಯೆ:1

ವೃಶ್ಚಿಕ: ರಾಜಕಾರಣಿಗಳಿಗೆ ಒತ್ತಡ. ನೌಕರರಿಗೆ ಮೇಲಧಿಕಾರಿ ಗಳಿಂದ ಸಹಕಾರ. ಸ್ನೇಹಿತರ ಭೇಟಿ. ನೌಕೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ. ಶುಭಸಂಖ್ಯೆ: 9

ಧನಸ್ಸು: ಕೆಲಸಗಳಲ್ಲಿ ಏರುಪೇರಿದ್ದರೂ ತೊಂದರೆಗಳಿಲ್ಲ, ಆದರೆ ದುಡುಕುತನದಿಂದ ನಷ್ಟವಾದೀತು. ಕಚೇರಿಯಲ್ಲಿ ವಾದವಿವಾದ ಬೇಡ. ಶುಭಸಂಖ್ಯೆ: 3

ಮಕರ: ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮಗಳ ವಿವಾಹ ಪ್ರಯತ್ನದಲ್ಲಿ ದುಡುಕದೆ ಸಾರಾಸಾರ ಯೋಚಿಸಿ ನಿರ್ಣಯ ಕೈಗೊಳ್ಳಿ. ಶುಭಸಂಖ್ಯೆ: 5

ಕುಂಭ: ನಿಮ್ಮ ಕುಟುಂಬಕ್ಕೆ ಭೂ ಲಾಭವಿದೆ. ಅವಕಾಶದ ಸದ್ಬಳಕೆಯಾಗಲಿ. ದಾಂಪತ್ಯದಲ್ಲಿ ಸಾಮರಸ್ಯ. ಬಟ್ಟೆ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 8

ಮೀನ: ಭೂ ವ್ಯವಹಾರಗಳಲ್ಲಿ ಗೊಂದಲ. ಧಾರ್ವಿುಕ ವಿಷಯಗಳಲ್ಲಿ ಒಲವು ಹೆಚ್ಚಲಿದೆ. ರಾಜಕೀಯ ವ್ಯಕ್ತಿಗಳಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net