

ಮೇಷ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಅಧಿಕ ನಷ್ಟ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಗೊಂದಲ. ಶುಭಸಂಖ್ಯೆ: 9
ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವವು. ಸಹೋದರಿಯಿಂದ ಅನುಕೂಲ ಒದಗಿ ಬರಲಿದೆ. ಉನ್ನತ ವ್ಯಕ್ತಿಗಳ ಭೇಟಿಯಾಗುವುದು. ಶುಭಸಂಖ್ಯೆ: 1
ಮಿಥುನ: ಉದ್ಯೋಗ ಸ್ಥಳ ಮತ್ತು ಗೃಹ ಬದಲಾವಣೆ. ನಿಮ್ಮಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತ ಧನ ಪ್ರಾಪ್ತಿಯಾಗಿ ಅಚ್ಚರಿ. ಶುಭಸಂಖ್ಯೆ: 5
ಕಟಕ: ಕಚೇರಿ ಕೆಲಸದ ಮೇಲೆ ತಿರುಗಾಟ. ಅಧಿಕ ಧೈರ್ಯ, ದಕ್ಷತೆ. ಇಂದು ನಿಮಗೆ ಒಳ್ಳೆಯ ಹೆಸರು. ದಿನದ ಅಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2
ಸಿಂಹ: ಆದಾಯ-ನಷ್ಟ ಸಮ ಸಮ. ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ. ಆರ್ಥಿಕ ಒತ್ತಡಗಳಿಂದ ವ್ಯಾಪಾರದಲ್ಲಿ ಏರುಪೇರು. ಶುಭಸಂಖ್ಯೆ:1
ಕನ್ಯಾ: ಒತ್ತಡದಿಂದ ವಿಮುಕ್ತಿ. ನಿರೀಕ್ಷಿತ ಲಾಭ. ಸರ್ಕಾರಿ ಅಧಿಕಾರಿಗಳಿಂದ ಮಂದಗತಿ. ಧಾರ್ವಿುಕ ಕಾರ್ಯದಿಂದ ಸಮಾಧಾನ. ಶುಭಸಂಖ್ಯೆ:2
ತುಲಾ: ಉದ್ಯೋಗ ಲಾಭವಾಗಲಿದೆ. ಹಣ್ಣಿನ ವ್ಯಾಪಾರ ಮಾಡುವವರಿಗೆ ಲಾಭದ ಪ್ರಮಾಣ ಕುಂಠಿತ. ಆತ್ಮೀಯರ ವಿಯೋಗ ಸಾಧ್ಯತೆ. ಶುಭಸಂಖ್ಯೆ: 8
ವೃಶ್ಚಿಕ: ರಾಜಕೀಯದವರಿಂದ ಅನುಕೂಲ. ಹೊಸ ಉದ್ಯೋಗ ಆರಂಭಕ್ಕೆ ಶುಭದಿನ. ಹಿರಿಯ ಅಧಿಕಾರಿಗಳ ಪ್ರಶಂಸೆಯಿಂದ ಸಂತೋಷ. ಶುಭಸಂಖ್ಯೆ: 7
ಧನಸ್ಸು: ಅನಿರೀಕ್ಷಿತವಾಗಿ ಗಣ್ಯರ ಭೇಟಿಯಾಗಲಿದೆ. ಔಷಧಿ ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ಉದ್ಯೋಗ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ: 8
ಮಕರ: ಸಂಗಾತಿಯೊಂದಿಗೆ ಕಲಹ ಬೇಡ. ಪಾಲುದಾರಿಕೆಯಲ್ಲಿ ಪ್ರಗತಿ. ಮಹಿಳೆಯರಿಗೆ ಮಾನಸಿಕ ಒತ್ತಡ. ಉದರ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 7
ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ. ಸರ್ಕಾರದ ಕೆಲಸದಲ್ಲಿ ವಿಳಂಬ. ವಿವಾಹ ಪ್ರಯತ್ನದಲ್ಲಿ ಪದೇಪದೇ ವೈಫಲ್ಯದಿಂದ ಬೇಸರ. ಶುಭಸಂಖ್ಯೆ: 6
ಮೀನ: ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳೊಂದಿಗೆ ವಾಗ್ವಾದ. ಧನಾಗಮವಾಗಿ ಆರ್ಥಿಕ ಸ್ಥಿತಿ ಸಮಾಧಾನಕರ. ಇಂದು ಮಿಶ್ರಫಲ. ಶುಭಸಂಖ್ಯೆ:2