

ಮೇಷ: ಬಸ್ ಮಾಲೀಕರಿಗೆ ಧನಲಾಭವಿದೆ. ಅಡಕೆ ಕೃಷಿಯಲ್ಲಿ ಯಶಸ್ಸು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಅಭ್ಯಾಗತರ ಆಗಮನ. ಶುಭಸಂಖ್ಯೆ: 5
ವೃಷಭ: ಚಂಚಲ ಮನಸ್ಸು. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯಾಗಲಿದೆ. ಮಿತ್ರರಲ್ಲಿ ದ್ವೇಷ ಉಂಟಾಗ ಬಹುದು. ಸುಖ ಭೋಜನ ಪ್ರಾಪ್ತಿ.ಶುಭಸಂಖ್ಯೆ: 9
ಮಿಥುನ: ಆತ್ಮೀಯರಲ್ಲಿ ಹಗೆತನ ಬೇಡ. ಆಹಾರಧಾನ್ಯಗಳ ಮಳಿಗೆ ವ್ಯವಹಾರ ಸಮಾಧಾನಕರ. ಸಲ್ಲದ ಅಪವಾದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಶುಭಸಂಖ್ಯೆ: 4
ಕಟಕ: ಹೊಸ ಉದ್ಯೋಗ ಪ್ರಾಪ್ತಿ. ಪರ ಸ್ತ್ರೀಯರಿಂದ ತೊಂದರೆ. ಅನಿರೀಕ್ಷಿತ ದ್ರವ್ಯಲಾಭವಾಗುವುದು. ಮಾತಿನಿಂದ ಅನರ್ಥ. ಶುಭಸಂಖ್ಯೆ:1
ಸಿಂಹ: ಸಂಗಾತಿಯೊಂದಿಗೆ ಮನಸ್ತಾಪ. ನೆಮ್ಮದಿ ಇಲ್ಲದ ಜೀವನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 9
ಕನ್ಯಾ: ಬಾಕಿ ವಸೂಲಿಯಾಗುವುದು. ದೂರ ಪ್ರಯಾಣ ಸಾಧ್ಯತೆ. ಇಷ್ಟವಾದ ವಸ್ತುಗಳ ಖರೀದಿ. ವಾದ- ವಿವಾದಗಳಲ್ಲಿ ಸೋಲು. ಶುಭಸಂಖ್ಯೆ: 7
ತುಲಾ: ಹೈನೋದ್ಯಮದಲ್ಲಿ ಲಾಭ ಬರಲಿದೆ. ಆತ್ಮೀಯರಲ್ಲಿ ವಿರಸ. ಏಕಾಂತ ವಾಸ. ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬರಬಹುದು. ಶುಭಸಂಖ್ಯೆ:4
ವೃಶ್ಚಿಕ: ಸ್ತ್ರೀಯರಿಂದ ಲಾಭ. ವ್ಯವಹಾರದಲ್ಲಿ ಅಲ್ಪ ಆದಾಯ. ಪ್ರಯಾಣದಿಂದ ಅನಾರೋಗ್ಯ ಕಾಡೀತು. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ:3
ಧನಸ್ಸು: ಆಸ್ತಿ ವಿಚಾರವಾಗಿ ವೈಮನಸ್ಸು. ಆತ್ಮೀಯರನ್ನು ದ್ವೇಷಿಸುವಿರಿ. ರೇಷ್ಮೆ ಕೃಷಿಕರಿಗೆ ಅಧಿಕ ಹಣ ಪ್ರಾಪ್ತಿಯಾಗಿ ಸಮಾಧಾನ. ಶುಭಸಂಖ್ಯೆ: 8
ಮಕರ: ಆಕಸ್ಮಿಕ ಆಪತ್ತಿನಿಂದ ಪಾರಾಗುವಿರಿ. ದಂಡ ಕಟ್ಟುವ ಸಾಧ್ಯತೆ. ಹಿತಶತ್ರುಗಳಿಂದ ತೊಂದರೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಶುಭಸಂಖ್ಯೆ: 7
ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ. ಸ್ತ್ರೀಯರಿಂದ ನೆಮ್ಮದಿ. ಪರರಿಂದ ಮೋಸವಾದೀತು. ಸ್ಥಿರಾಸ್ತಿ ಮಾರಾಟ. ಶತ್ರು ಬಾಧೆ. ಶುಭಸಂಖ್ಯೆ: 6
ಮೀನ: ದಾನ ಧರ್ಮದಲ್ಲಿ ಆಸಕ್ತಿ. ನೆಮ್ಮದಿ. ಮಾತಿನ ಚಕಮಕಿ. ತಂದೆಯ ಆರೋಗ್ಯದಲ್ಲಿ ಏರುಪೇರು. ದಾಂಪತ್ಯದಲ್ಲಿ ಅನ್ಯೋನ್ಯತೆ. ಶುಭಸಂಖ್ಯೆ:4