ಈ ರಾಶಿಯವರು ಆರೋಗ್ಯ ವಿಚಾರದಲ್ಲಿ ಎಚ್ಚರದಿಂದ ಇರಬೇಕು

Nitya-Bhavishya-vvani-1-2-1
Published on

ಮೇಷ: ವರ್ಷದ ಆಯವ್ಯಯ ಪಟ್ಟಿಯನ್ನು ತಯಾರಿಸಿ. ವರಮಾನ ತೆರಿಗೆಯ ಬಗ್ಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ. ಶುಭಸಂಖ್ಯೆ: 6

ವೃಷಭ: ಸರ್ಕಾರಿ ಕೆಲಸಕಾರ್ಯಗಳಲ್ಲಿ ಉಂಟಾಗುವ ವಿಳಂಬವನ್ನು ತಡೆಯಲು ಭಕ್ತಿಯಿಂದ ಕುಲದೇವತೆಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4

ಮಿಥುನ: ಕಾರಣವಿರದ ಚಿಂತೆ, ಖಿನ್ನತೆಗಳನ್ನು ಬಿಟ್ಟು ಮಿತ್ರರೊಡನೆ ರ್ಚಚಿಸಿ. ಭಿಕ್ಷುಕರಿಗೆ ದಾನ ಮಾಡಿ. ಒಳಿತಾಗುವುದು. ಶುಭಸಂಖ್ಯೆ: 1

ಕಟಕ: ಅನಗತ್ಯ ವಾದಗಳಲ್ಲಿ ಪಾಲ್ಗೊಳ್ಳದಿರುವುದು ಯುಕ್ತ. ಇಬ್ಬರ ಜಗಳ ನಿಲ್ಲಿಸಲು ಹೋದರೆ ನಿಮಗೇ ಕಷ್ಟವಾದೀತು. ಶುಭಸಂಖ್ಯೆ: 3

ಸಿಂಹ: ನಿಮ್ಮ ಸಾಮಾಜಿಕ ಕಾಳಜಿ, ಸೇವೆಯನ್ನು ಜನ ಕೊಂಡಾಡುವರು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಶುಭಸಂಖ್ಯೆ: 7

ಕನ್ಯಾ: ಉದರಶೂಲೆಗೆ ಸಂಬಂಧಿಸಿದ ನಿರ್ಜಲೀಕರಣದ ಕಾರಣದದಿಂದ ಆಯಾಸ ಆದೀತು. ಅದಕ್ಕೆ ತಕ್ಕ ಔಷಧೋಪಚಾರ ನಡೆಸಿ. ಶುಭಸಂಖ್ಯೆ: 9

ತುಲಾ: ತಾಂತ್ರಿಕ ವರ್ಗದವರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ವಿಶೇಷವಾದ ಅನುಕೂಲಗಳು ಉಂಟಾಗಲಿವೆ. ಶುಭಸಂಖ್ಯೆ: 8

ವೃಶ್ಚಿಕ: ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆ ಬೇಡ. ವೈದ್ಯರ ಶಿಫಾರಸಿನಂತೆ ನಡೆದರೆ ಹೆಚ್ಚಿನ ಹಾನಿಯುಂಟಾಗದು. ಶುಭಸಂಖ್ಯೆ: 5

ಧನಸ್ಸು: ಕನಸು ಕಾಣುತ್ತಿರುವ ಪ್ರೇಮಿಗಳು ಮನೆಯ ಹಿರಿಯರ ಒಪ್ಪಿಗೆಯನ್ನು ಪಡೆಯುವುದರಿಂದ ಜೀವನ ಉತ್ತಮವಾಗಿರಲಿದೆ. ಶುಭಸಂಖ್ಯೆ: 2

ಮಕರ: ಷೇರು ಮಾರಾಟ ಅಥವಾ ಖರೀದಿಗೆ ಮುನ್ನ ಎಲ್ಲ ರೀತಿಯ ಸಾಧಕಬಾಧಕಗಳನ್ನು ಲೆಕ್ಕ ಹಾಕುವುದು ಉತ್ತಮ. ಶುಭಸಂಖ್ಯೆ: 6

ಕುಂಭ: ಕೆಲಸದ ಸ್ಥಳದಲ್ಲಿ ಉತ್ಸಾಹ ಹಾಗೂ ಚೈತನ್ಯದಾಯಕವಾದ ಸಕಾರಾತ್ಮಕ ಬೆಳವಣಿಗೆಗಳು ಉಂಟಾಗಲಿವೆ. ಶುಭಸಂಖ್ಯೆ: 4

ಮೀನ: ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ನಿಮಗೆ ದೈವಬಲ ಇರುವುದರಿಂದ ಚಿಂತಿಸಬೇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net