ಮೇ 30ರಂದು ಕಾಂಗ್ರೆಸ್ ಸಭೆ

KAREHALLI ULLAS
Published on

ಚಿತ್ರದುರ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಜೂ.7ರಂದು ಬೆಂಗಳೂರಲ್ಲಿ ನಡೆಯಲಿದೆ.

ಗ್ರಾಪಂ ಮಟ್ಟದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆಗಾಗಿ ಮೇ 30ರಂದು ಕಾರ್ಯಕರ್ತರ ಸಭೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ 11, ಹೊಳಲ್ಕೆರೆ ಕಚೇರಿಯಲ್ಲಿ ಮಧ್ಯಾಹ್ನ 1, ಹೊಸದುರ್ಗ ಕಚೇರಿಯಲ್ಲಿ ಸಂಜೆ 4ಕ್ಕೆ ನಡೆಯುವ ಸಭೆಗೆ ವಿವಿಧ ಘಟಕಗಳ ಕಾರ್ಯಕರ್ತರು, ಸದಸ್ಯರು ಹಾಜರಾಗಬೇಕೆಂದು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net