

ಮೇಷ: ಅನೇಕ ಥರದ ಒತ್ತಡಗಳ ನಡುವೆಯೂ ಯಶಸ್ಸಿನ ಹೊಸದೇ ಆದ ದಾರಿಯನ್ನು ಕಂಡುಕೊಳ್ಳಲು ಸುದಿನವಿದು. ಶುಭಸಂಖ್ಯೆ: 1
ವೃಷಭ: ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದೆ. ಪ್ರತಿಕ್ರಿಯಿಸಿದೆ ಮೌನವಾಗಿರಿ. ಶುಭಸಂಖ್ಯೆ: 3
ಮಿಥುನ: ದೂರಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಕೆಲಸಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 5
ಕಟಕ: ಮಾತೇ ಮುತ್ತು, ಮಾತೇ ಶತ್ರು ಎಂಬಂತೆ ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಿರಿ. ಶುಭಸಂಖ್ಯೆ: 7
ಸಿಂಹ: ದಿನದಿಂದ ದಿನಕ್ಕೆ ಉನ್ನತಿ ಹೊಂದುವ ನಿಮ್ಮ ಬಗ್ಗೆ ಇತರರು ಅಸೂಯೆಪಡುವರು. ಆ ಬಗೆಗೇನೂ ಚಿಂತೆ ಬೇಡ. ಶುಭಸಂಖ್ಯೆ: 9
ಕನ್ಯಾ: ಸಮಾಜದಲ್ಲಿ ನಿಮ್ಮಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಆದರೆ ಸಂಗಾತಿಯ ಆರೋಗ್ಯದ ಕಡೆಗೂ ಗಮನ ಹರಿಸಿ. ಶುಭಸಂಖ್ಯೆ: 2
ತುಲಾ: ಹಿತಶತ್ರುಗಳು ನಿಮ್ಮ ನೆಮ್ಮದಿ ಕೆಡಿಸುವ ಹುನ್ನಾರದಲ್ಲಿದ್ದಾರೆ. ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಶುಭಸಂಖ್ಯೆ: 4
ವೃಶ್ಚಿಕ: ಬಾಳಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಒಳಿತಾಗುವುದು. ಜತೆಗೆ ಹಣಕಾಸಿನ ಹರಿವೂ ನಿಮ್ಮತ್ತ ಬರುವುದು. ಶುಭಸಂಖ್ಯೆ: 6
ಧನಸ್ಸು: ಮಾತಿನ ವೈಖರಿಯಿಂದ ಎಲ್ಲರನ್ನೂ ಸೆಳೆಯುವಿರಿ. ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಶುಭಸಂಖ್ಯೆ: 4
ಮಕರ: ಮಂಗಳಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಆಸ್ತಿ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಶುಭಸಂಖ್ಯೆ: 8
ಕುಂಭ: ಆಲಸ್ಯದ ಕಾರಣದಿಂದ ಕೆಲಸಕಾರ್ಯಗಳಲ್ಲಿ ಹಿನ್ನಡೆಯಾಗುವುದು. ದೂರದ ಪ್ರಯಾಣ ಅನಿವಾರ್ಯವಾಗಲಿದೆ. ಶುಭಸಂಖ್ಯೆ: 1
ಮೀನ: ಮಕ್ಕಳ ವಿಷಯದಲ್ಲಿ ಹರ್ಷದ ವಾರ್ತೆ ಕೇಳುವಿರಿ. ಮನದ ತುಡಿತಗಳನ್ನು ಯಾರೆದುರೂ ಹೇಳದಿರಿ. ಶುಭಸಂಖ್ಯೆ: 3