ನಿತ್ಯ ಭವಿಷ್ಯ: ಈ ರಾಶಿಯವರ ಬಹುಮುಖ ಪ್ರತಿಭೆ ಇಂದು ಹೊರಕ್ಕೆ ಬರುವ ಸಾಧ್ಯತೆ ಇದೆ

Nitya-Bhavishya-vvani-1
Published on

ಮೇಷ: ಅನಗತ್ಯ ಅನುಮಾನ ಹುಟ್ಟಿಸಿದರೆ ಸಕಾಲಕ್ಕೆ ಕೆಲಸ ಮುಗಿಯದು. ಮೇಲಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುವಿರಿ. ಶುಭಸಂಖ್ಯೆ: 9

ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ತಕರಾರನ್ನು ಕೋರ್ಟ್​ನತ್ತ ಒಯ್ಯದೆ ಸಂಧಾನದಲ್ಲೇ ಮುಗಿಸಿದರೆ ಶುಭವಿದೆ. ಶುಭಸಂಖ್ಯೆ: 7

ಮಿಥುನ: ಯಾವುದೋ ಕಾರಣಕ್ಕೆ ನಿಮ್ಮಿಂದ ಆದ ಅಚಾತುರ್ಯಕ್ಕೆ ಕಿರುಕುಳ ಕೊಡುವರು. ಮನಸಾ ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 5

ಕಟಕ: ಕೆಲಸಕಾರ್ಯಗಳು ನಿಮ್ಮ ನಿರೀಕ್ಷೆಯಂತೆ ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಶುಭಸಂಖ್ಯೆ: 3

ಸಿಂಹ: ನಗುನಗುತ್ತ ಎಲ್ಲ ಕಷ್ಟಗಳನ್ನು ನಿಭಾಯಿಸುವ ನಿಮ್ಮ ಗುಣ ಅನುಕರಣೀಯ. ಇದು ನಿಮಗೆ ಪರೀಕ್ಷೆಯ ಕಾಲವಾಗಿದೆ. ಶುಭಸಂಖ್ಯೆ: 1

ಕನ್ಯಾ: ಅನೇಕ ಸಮಸ್ಯೆಗಳು ದಿಢೀರ್ ಎಂದು ಎದುರಾಗುತ್ತವೆ. ವಿವಿಧ ಮೂಲಗಳಿಂದ ಹಣ ಒದಗುವುದರಿಂದ ನೆಮ್ಮದಿ. ಶುಭಸಂಖ್ಯೆ: 2

ತುಲಾ: ದೇವರು ಸ್ವತಃ ಬಂದೇನೂ ನಿಮ್ಮನ್ನು ತಿದ್ದಲಾರ. ಮನೆಯ ಹಿರಿಯರ ರೂಪದಲ್ಲಿದ್ದು ಎಚ್ಚರಿಕೆ ನೀಡಲಿದ್ದಾನೆ. ಶುಭಸಂಖ್ಯೆ: 4

ವೃಶ್ಚಿಕ: ನಿಮ್ಮ ಬಹುಮುಖ ಪ್ರತಿಭೆ ಹೊರಕ್ಕೆ ಬರಲಿದೆ. ಜತೆಗೆ ಹಣಕಾಸಿನ ಪರಿಸ್ಥಿತಿ ಕೂಡ ಉತ್ತಮಗೊಳ್ಳಲಿದೆ. ಶುಭಸಂಖ್ಯೆ: 6

ಧನಸ್ಸು: ತೋಳ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ಮನೆಯವರೇ ಆಡಿಕೊಳ್ಳುವುದು ಬಿಸಿ ತುಪ್ಪವಾಗಲಿದೆ. ಶುಭಸಂಖ್ಯೆ: 8

ಮಕರ: ಕೆಲಸಕಾರ್ಯಗಳಲ್ಲಿ ಹಿರಿಯರ ಮಾತನ್ನು ಉದಾಸೀನ ಮಾಡದಿದ್ದರೆ ಇಚ್ಛಿತ ಕಾರ್ಯಗಳು ಬೇಗನೆ ಕೈಗೂಡಲಿವೆ. ಶುಭಸಂಖ್ಯೆ: 9

ಕುಂಭ: ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗುತ್ತಿಲ್ಲ ಎಂದೇನೂ ಚಿಂತಿಸದಿರಿ. ತಗ್ಗಿಬಗ್ಗಿ ನಡೆದಲ್ಲಿ ಯಶಸ್ಸನ್ನು ಹೊಂದುವಿರಿ. ಶುಭಸಂಖ್ಯೆ: 7

ಮೀನ: ಒತ್ತಡಗಳ ಮಧ್ಯೆ ಇನ್ನೊಂದಷ್ಟು ಒತ್ತಡಗಳು ಸೇರಿ ತಾಳ್ಮೆಯ ಪರೀಕ್ಷೆ ಎದುರಿಸುವಿರಿ. ಗುರುಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net