

ಮೇಷ: ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡುಬರಲಿದೆ. ಮನೋಕಾಮನೆಗಳೆಲ್ಲ ಶೀಘ್ರ ಪೂರ್ಣಗೊಳ್ಳಲಿವೆ. ಶುಭಸಂಖ್ಯೆ: 2
ವೃಷಭ: ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ದೃಢಚಿತ್ತದಿಂದಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಶುಭಸಂಖ್ಯೆ: 1
ಮಿಥುನ: ಸಹೋದರರ ಜತೆಯಲ್ಲಿ ವಾದ ಬೇಡ. ನಿಮಗೆ ಇಷ್ಟವಾದದ್ದನ್ನು ನೇರವಾಗಿ ಹೇಳಿ. ಇದರಿಂದ ಅನುಕೂಲವಿದೆ. ಶುಭಸಂಖ್ಯೆ: 4
ಕಟಕ: ನಿಮ್ಮ ಏಳ್ಗೆ ಕಂಡು ಅಸೂಯೆಪಡುವವರು ನಿಮ್ಮ ಯತ್ನಗಳನ್ನು ವಿಫಲಗೊಳಿಸಲು ತಂತ್ರ ರೂಪಿಸುವರು. ಶುಭಸಂಖ್ಯೆ: 3
ಸಿಂಹ: ನೀವು ಅಂದುಕೊಂಡಿರುವುದಕ್ಕಿಂತಲೂ ಜಾಸ್ತಿ ಖರ್ಚುವೆಚ್ಚ ಎದುರಾಗುವುದು. ಕುಲದೇವತಾ ಸ್ಮರಣೆ ಮಾಡಿ. ಶುಭಸಂಖ್ಯೆ: 6
ಕನ್ಯಾ: ಸದ್ಯದಲ್ಲಿಯೇ ನಿಮ್ಮ ಜೀವನದಲ್ಲಿನ ಕಷ್ಟದ ಕಾಮೋಡಗಳು ಕರಗಿಹೋಗಲಿವೆ. ಸ್ವಲ್ಪ ಕಾಲ ತಾಳ್ಮೆಯಿಂದ ಇರಿ. ಶುಭಸಂಖ್ಯೆ: 5
ತುಲಾ: ಮಕ್ಕಳು ತರಲಿರುವ ಶುಭಕರ ವಾರ್ತೆಯಿಂದಾಗಿ ವಿಶೇಷವಾದ ಸಂತೋಷ ನಿಮ್ಮದಾಗಲಿವೆ. ಶುಭಸಂಖ್ಯೆ: 8
ವೃಶ್ಚಿಕ: ಬೆಳೆಯುತ್ತಿರುವ ಖರ್ಚಿನ ದಾರಿಯನ್ನು ದೃಢವಾಗಿ ನಿಯಂತ್ರಣ ಮಾಡಿ. ಆರೋಗ್ಯ ಉತ್ತಮವಾಗಿರುವುದು. ಶುಭಸಂಖ್ಯೆ: 7
ಧನಸ್ಸು: ಬಾಕಿ ಬರಬೇಕಾಗಿದ್ದ ದೊಡ್ಡ ಮೊತ್ತದ ಹಣ ಬರುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಶುಭಸಂಖ್ಯೆ: 9
ಮಕರ: ಸಣ್ಣಪುಟ್ಟ ಅನಾರೋಗ್ಯವನ್ನು ನೀವು ಎದುರಿಸಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ವಹಿಸುವುದು ಅಗತ್ಯ. ಶುಭಸಂಖ್ಯೆ: 2
ಕುಂಭ: ಚಾಂಚಲ್ಯಕ್ಕೆ ಒಳಗಾಗದೆಯೇ ಕುಲದೇವರನ್ನು ಪ್ರಾರ್ಥಿಸುವುದರಿಂದ ಮನದ ದುಗುಡಗಳೆಲ್ಲ ಕಡಿಮೆ ಆಗಲಿವೆ. ಶುಭಸಂಖ್ಯೆ: 1
ಮೀನ: ಹೊಸ ವಹಿವಾಟಿನ ಕುರಿತು ಮೇಲಧಿಕಾರಿಗಳ ಜತೆ ರ್ಚಚಿಸುವಿರಿ. ನಿಮ್ಮ ಮೇಲಿನ ಗೌರವವೂ ಹೆಚ್ಚಾಗಲಿದೆ. ಶುಭಸಂಖ್ಯೆ: 4