More

    Video: ಹೃದಯಾಘಾತಕ್ಕೆ ಒಳಗಾಗಿದ್ದ ಬೀದಿನಾಯಿಗೆ ಮರುಜೀವ ನೀಡಿದ ಯುವಕ

    ಬೀದಿನಾಯಿಗಳು ಅನಾರೋಗ್ಯಕ್ಕೆ ತುತ್ತಾಗಿ ನರಳುತ್ತಿದ್ದರೆ ಯಾರೊಬ್ಬರೂ ಅವುಗಳತ್ತ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಪ್ರಾಣಿ ದಯಾ ಸಂಘದವರಿಗೂ ಮಾಹಿತಿ ನೀಡುವ ಕನಿಷ್ಠ ಸೌಜನ್ಯವನ್ನೂ ತೋರುವುದಿಲ್ಲ. ಆದರೆ, ಹೃದಯಾಘಾತಕ್ಕೆ ಒಳಗಾಗಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಬೀದಿನಾಯಿಗೆ ಸೂಕ್ತ ಚಿಕಿತ್ಸೆ ನೀಡಿದ ಯುವಕನೊಬ್ಬ ಅದಕ್ಕೆ ಮರುಜೀವ ನೀಡಿ, ಔದಾರ್ಯ ಮೆರೆದಿದ್ದಾನೆ.

    ಪಶ್ಚಿಮ ಬ್ರೆಜಿಲ್​ನ ಪಿರನ್ಹಾಸ್​ನ ಲೂಕಸ್​ ಮಾರ್ಟಿನ್​ (19) ಈ ಔದಾರ್ಯ ತೋರಿದವರು. ಇವರು ಪಶುವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

    ಲೂಕಸ್​ ಮಾರ್ಟಿನ್​ ಮನೆಯ ಬಳಿ ಬೀದಿನಾಯಿಯೊಂದು ಜೀವನ್ಮರಣದ ಹೋರಾಟ ನಡೆಸುತ್ತಾ, ಉಸಿರು ಚೆಲ್ಲುವ ಹಂತ ತಲುಪಿತ್ತು. ಇದನ್ನು ಗಮನಿಸಿದ ಅವರು ಆ ನಾಯಿಗೆ ಹೃದಯಾಘಾತವಾಗಿರಬಹುದು ಎಂದು ಊಹಿಸಿ, ಚಿಕಿತ್ಸೆ ನೀಡಲು ಮುಂದಾದರು. ಮೊದಲಿಗೆ ಅದು ಕಕ್ಕಿದ್ದನ್ನು ಸ್ವಚ್ಛಗೊಳಿಸಿದ್ದಲ್ಲದೆ, ಅದರ ಮೂಗಿನಲ್ಲಿ ಒಸರುತ್ತಿದ್ದ ಗೊಣ್ಣೆಯನ್ನು ಸ್ವಚ್ಛಗೊಳಿಸಿದರು.

    ಇದನ್ನೂ ಓದಿ: ಬೊಗಳಿತೆಂದು ನಾಯಿಯ ಕೊಲ್ಲಲು ಹೋದವ ತಾನೇ ಶವವಾದ!

    ಬಳಿಕ ನಿಧಾನವಾಗಿ ಅದರ ಎದೆಯನ್ನು ಒತ್ತುವ ಮೂಲಕ ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್​ (ಸಿಪಿಆರ್​) ಮಾಡಲು ಮುಂದಾದರು. ಆರಂಭದಲ್ಲಿ ಹೆಚ್ಚಿನ ಯಶ ದೊರೆಯದಿದ್ದರೂ, ನಾಯಿಯನ್ನು ಬೆನ್ನಮೇಲೆ ಮಲಗಿಸಿ, ಸ್ವಲ್ಪ ಜೋರಾಗಿ ಎದೆ ಒತ್ತುವುದನ್ನು ಮುಂದುವರಿಸಿದರು. ಹೀಗೆ 5 ನಿಮಿಷ ಮಾಡಿದ ಮೇಲೆ ನಾಯಿ ಉಸಿರಾಡಲಾರಂಭಿಸಿದ್ದಲ್ಲದೆ, ಛಂಗನೆ ನೆಗೆದು ನಿಧಾನವಾಗಿ ನಡೆದುಕೊಂಡು ಹೋಯಿತು.

    ತಮ್ಮ ಈ ಕಾರ್ಯದ ಬಗ್ಗೆ ಹೆಮ್ಮೆಪಟ್ಟುಕೊಂಡಿರುವ ಲೂಕಸ್​, ಬಹುಶಃ ನಾಯಿ ಯಾವುದೋ ವಿಷ ಬೆರೆಸಿದ ಪದಾರ್ಥ ತಿಂದು ಸಾವು-ಬದುಕಿನ ನಡುವೆ ಹೋರಾಡುತ್ತಿತ್ತೆಂದು ಕಾಣುತ್ತದೆ ಎಂದು ಹೇಳಿದ್ದಾರೆ. ಆದರೆ, ಅದು ವಿಷ ಸೇವನೆ ಮಾಡಿರುವುದನ್ನು ಖಚಿತಪಡಿಸಲು ಅವರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎನ್ನಲಾಗಿದೆ.

    ಮಾಸ್ಕ್​ ಧರಿಸದೆ ಹೊರ ಬಂದ ತಹಸೀಲ್ದಾರ್​ಗೆ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts