ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲ್ಲುವರು

Nithya Bhavishya vvani
Published on

ಮೇಷ: ಅಲ್ಪರ ಸಂಗ ಅಭಿಮಾನ ಭಂಗ ಎಂಬ ಗಾದೆಮಾತೇ ಪ್ರಚಲಿತವಾಗಿದೆ. ಅಲ್ಪರನ್ನು ನಯವಾಗಿ ದೂರ ಸರಿಸಿಬಿಡಿ. ಶುಭಸಂಖ್ಯೆ: 9

ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವನ್ನು ಸಾಧಿಸುವಿರಿ. ಕಚೇರಿಯಲ್ಲಿನ ಒತ್ತಡಗಳನ್ನು ತಾಳ್ಮೆಯಿಂದಲೇ ಎದುರಿಸಿ. ಶುಭಸಂಖ್ಯೆ: 7

ಮಿಥುನ: ಉನ್ನತ ವ್ಯಾಸಂಗದ ಅವಕಾಶ ಬಂದಿದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮಾಡಲು ಹೋಗಲೇಬೇಡಿ. ಶುಭಸಂಖ್ಯೆ: 5

ಕಟಕ: ಕುಲದೇವತಾ ದರ್ಶನದ ಭಾಗ್ಯ ಒದಗಲಿದೆ. ಇದರಿಂದ ಮಾನಸಿಕ ಉದ್ವೇಗ ಹತೋಟಿಯಾಗಿ ನೆಮ್ಮದಿಯೂ ಲಭ್ಯವಾಗಲಿದೆ. ಶುಭಸಂಖ್ಯೆ: 3

ಸಿಂಹ: ಶತ್ರುಗಳು ರಾಜಕೀಯದ ದಾಳವನ್ನು ಉರುಳಿಸಬಹುದು. ಅವರ ಸಾಮರ್ಥ್ಯವನ್ನು ಖಂಡಿತವಾಗಿ ಕಡೆಗಣಿಸದಿರಿ. ಶುಭಸಂಖ್ಯೆ: 1

ಕನ್ಯಾ: ಬಂಧುಗಳ ಜತೆಗೆ ಆತ್ಮೀಯತೆ ವೃದ್ಧಿಸಲಿದೆ. ಮುಂದಿನ ದಿನಗಳಲ್ಲಿ ಇದು ಹೊಸದಾದ ಲಾಭದ ದಾರಿಗೆ ತಿರುಗಲಿದೆ. ಶುಭಸಂಖ್ಯೆ: 8

ತುಲಾ: ಗಣೇಶನನ್ನು ಸ್ತುತಿಸುವುದರಿಂದ ಹಲವು ದಿನಗಳ ಕಿರುಕುಳಗಳು ದೂರವಾಗಲಿವೆ. ಮನಃಶಾಂತಿ ಸಿದ್ಧಿಸಲಿದೆ. ಶುಭಸಂಖ್ಯೆ: 6

ವೃಶ್ಚಿಕ: ಅಧ್ಯಯನದ ವಿಚಾರದಲ್ಲಿ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 4

ಧನಸ್ಸು: ವೃತ್ತಿಯಲ್ಲಿ ಹಲವಾರು ಸಮಸ್ಯೆಗಳಿವೆ. ವಿನಯದ ಮಾತುಗಳಿಂದಲೇ ಅವುಗಳನ್ನು ನಿಭಾಯಿಸಲು ಸಾಧ್ಯವಿದೆ. ಶುಭಸಂಖ್ಯೆ: 2

ಮಕರ: ದೂರಪ್ರಯಾಣದ ಸಂದರ್ಭ ಬರಬಹುದು. ತುಸು ಯೋಚಿಸಿಯೇ ನಿಮ್ಮ ಅಂತಿಮ ತೀರ್ವನವನ್ನು ತಿಳಿಸಿ. ಶುಭಸಂಖ್ಯೆ: 8

ಕುಂಭ: ಸಂಸಾರದಲ್ಲಿನ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಜಮೀನಿನ ಕುರಿತಾದ ಬಿಕ್ಕಟ್ಟು ಕೂಡ ಶಮನವಾಗಲಿದೆ. ಶುಭಸಂಖ್ಯೆ: 6

ಮೀನ: ವ್ಯಾಪಾರಕ್ಷೇತ್ರದಲ್ಲಿ ಲಾಭಕ್ಕೆ ಮಿತ್ರರ ಸಲಹೆ, ಸೂಚನೆಗಳು ಸಿಗಲಿವೆ. ಮನೆಯಲ್ಲಿ ಸಂತಸದ ವಾತಾವರಣ ತುಂಬಿರಲಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net