

ಮೇಷ: ನಿಮ್ಮನ್ನು ನಗಿಸಬೇಕೆಂಬ ಎಲ್ಲರ ಪ್ರಯತ್ನ ವಿಫಲವಾಗುತ್ತದೆ. ನಿಮ್ಮ ಕೋಪದ ಕಾರಣ ಯಾರಿಗೂ ತಿಳಿಯದು. ಅದೃಷ್ಟಸಂಖ್ಯೆ: 7
ವೃಷಭ: ಸಹೋದರ/ಸಹೋದರಿಯರ ಪ್ರಶ್ನೆಗಳಿಂದ ಬೇಸತ್ತುಕೊಳ್ಳುವಿರಿ. ರಸ್ತೆಯಲ್ಲಿ ಹೋಗುವಾಗ ಕಾಲು ಏಟು ಆಗುವ ದಿನ. ಅದೃಷ್ಟಸಂಖ್ಯೆ: 9
ಮಿಥುನ: ಆಗಿದ್ದು ಆಗಲಿ ಎಂದು ಪರೀಕ್ಷೆಗೆ ಸಿದ್ಧರಾಗಿ. ನಿಮಗೆ ಗುರು ಬಲ ಇರುವುದರಿಂದ ಜಯ ಸಿಕ್ಕೇ ಸಿಗುತ್ತದೆ. ಅದೃಷ್ಟಸಂಖ್ಯೆ: 1
ಕಟಕ: ಸಾಯಂಕಾಲ ಪರಿಚಿತರಿಂದ ದೃಷ್ಟಿ ತೆಗೆಸಿಕೊಳ್ಳಿ. ಸ್ತ್ರೀಯರು ಅಡುಗೆ ಮಾಡುವಾಗ ಕೈ ಸುಡುವ ದಿನ ಆಗಬಹುದು. ಎಚ್ಚರಿಕೆ. ಅದೃಷ್ಟಸಂಖ್ಯೆ: 6
ಸಿಂಹ: ಹೀಯಾಳಿಸುವ ಜನ ಇಂದು ಹೊಗಳುವುದನ್ನು ಕಂಡು ಅನುಮಾನ ಬರುತ್ತದೆ. ನೀವು ಎಲ್ಲರನ್ನೂ ಅನುಮಾನಿಸುತ್ತೀರಿ. ಅದೃಷ್ಟಸಂಖ್ಯೆ: 5
ಕನ್ಯಾ: ನಿರೀಕ್ಷಿತ ಖರ್ಚುಗಳಾಗದಂತೆ ಎಚ್ಚರ ವಹಿಸುತ್ತೀರಿ. ಮನಸ್ಸು ನಿಗ್ರಹ ದಾಟದಂತೆ ಎಚ್ಚರ ವಹಿಸುತ್ತೀರಿ. ಅದೃಷ್ಟಸಂಖ್ಯೆ: 2
ತುಲಾ:ನಿತ್ಯ ಮಾಡುವ ಉದ್ಯೋಗವೇ ಆದರೂ ಇಂದು ಆ ವೃತ್ತಿ ನಿರೀಕ್ಷಿತ ಫಲ ನೀಡುವುದಿಲ್ಲ. ಯಾರಿಗೂ ಎದುರುತ್ತರ ಕೊಡಬೇಡಿ. ಅದೃಷ್ಟಸಂಖ್ಯೆ: 4
ವೃಶ್ಚಿಕ: ಸ್ನೇಹಿತ ಅಥವಾ ಬಾಳ ಸಂಗಾತಿ ನಿಮ್ಮ ಆಸೆಗಳನ್ನು ನೆರವೇರಿಸುವಲ್ಲಿ ಸಹಕಾರ ನೀಡುತ್ತಾರೆ. ಅದೃಷ್ಟಸಂಖ್ಯೆ: 3
ಧನಸ್ಸು:ಒತ್ತಡ ಹೆಚ್ಚಾಗಿ ಉದ್ಯೋಗದಲ್ಲಿ ವಿಶ್ರಾಂತಿ ಸಿಗುವುದಿಲ್ಲ. ಲಾಭವೂ ಸಿಗುವುದಿಲ್ಲ. ಇದರಿಂದ ಬೇಸರವಾಗುತ್ತದೆ. ಅದೃಷ್ಟಸಂಖ್ಯೆ: 7
ಮಕರ: ಪರಿಚಿತರಂತೆ ದೂರದ ಪ್ರಯಾಣದ ಆಸೆ ಈಡೇರುವುದಿಲ್ಲ. ಬಾಳ ಸಂಗಾತಿ ಜತೆ ಸಿಟ್ಟು ಮಾಡುತ್ತೀರಿ. ಅದೃಷ್ಟಸಂಖ್ಯೆ: 1
ಕುಂಭ: ದೈವ ಸಹಾಯದ ಆವಶ್ಯಕತೆ ಬಹಳ ಕಾಣುತ್ತಿದೇ. ತುಪ್ಪದ ದೀಪ ಹಚ್ಚಿ . ನಿಮ್ಮ ಮುಂದೆ ಶತ್ರು ಸೋಲುತ್ತಾನೆ. ಅದೃಷ್ಟಸಂಖ್ಯೆ: 5
ಮೀನ: ಯಾರನ್ನೋ ಖುಷಿ ಪಡಿಸಬೇಕೆಂಬ ಅನಿವಾರ್ಯತೆ ಬರುತ್ತದೆ. ನಗೆ ಚಟಾಕಿ ಸಹ ಹಾರಿಸಲು ಪ್ರಯತ್ನಿಸುತ್ತೀರಿ. ಅದೃಷ್ಟಸಂಖ್ಯೆ: 3