ಸ್ಯಾನಿಟೈಜರ್​ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್​ ನಿಯಂತ್ರಣಕ್ಕೆ ಕೈಜೋಡಿಸಿದ ಐಟಿಸಿ ಕಂಪನಿ

sanitizar mar 20
Published on

ನವದೆಹಲಿ: ಕರೊನಾ ವೈರಸ್​ ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಕಂಪನಿ ಐಟಿಸಿ ಸ್ಯಾನಿಟೈಜರ್​ ದರ ಕಡಿಮೆ ಮಾಡಿದೆ.

ಐಟಿಸಿ ಕಂಪನಿ ಉತ್ಪಾದನೆಯ 55 ಎಂಎಲ್​​ನ ಸಾವ್​ಲಾನ್​ ಸ್ಯಾನಿಟೈಜರ್​ ಅನ್ನು ಕೇವಲ 27 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 55 ಎಂಎಲ್​ ಸಾವ್​ಲಾನ್​ ಸ್ಯಾನಿಟೈಜರ್​ ಬೆಲೆ 77 ರೂಪಾಯಿ ಇತ್ತು. 57 ರೂಪಾಯಿ ಕಡಿತ ಮಾಡಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.

ಕರೊನಾ ವೈರಸ್​ ಹರಡುತ್ತಿದ್ದಂತೆ ಸ್ಯಾನಿಟೈಜರ್​ಗೆ ಬೇಡಿಕೆ ಅಧಿಕವಾಗಿ ಬೆಲೆ ದಿಢೀರ್​ ಏರಿಕೆಯಾಗಿತ್ತು. ಅಂಗಡಿಗಳಲ್ಲಿ ದುಪ್ಪಟ್ಟು ದರ ಪಡೆದು ಮಾರಾಟ ಮಾಡುತ್ತಿದ್ದರು. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಅಧಿಕ ದರ ಪಡೆಯುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೂಡ ನೀಡಿತ್ತು.

ಈಗ ಐಟಿಸಿ ಕಂಪನಿ ಸ್ಯಾನಿಟೈಜರ್​ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್​ ಹರಡುವುದನ್ನು ತಪ್ಪಿಸುವ ಹೋರಾಕ್ಕೆ ಕೈಜೋಡಿಸಿದೆ. (ಏಜೆಸ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net