

ಮೇಷ: ಕಚೇರಿಯಲ್ಲಿ ಮೇಲಧಿಕಾರಿಯ ಪ್ರಶಂಸೆ ಪಡೆಯುವ ಅವಕಾಶ ಇದೆ. ಪದೋನ್ನತಿಯ ದಾರಿ ಸರಾಗವಾಗಲಿದೆ. ಶುಭಸಂಖ್ಯೆ: 1
ವೃಷಭ: ಸೂಕ್ಷ್ಮ ಮನೋಭಾವದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಪರಶಿವನನ್ನು ಸ್ತುತಿಸಿ. ಶುಭಸಂಖ್ಯೆ: 3
ಮಿಥುನ: ಯಾರು ಏನೆಂದರೂ ನಿಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಇದು ನಿಮ್ಮನ್ನು ಗುರಿಯೆಡೆಗೆ ಒಯ್ಯಲಿದೆ. ಶುಭಸಂಖ್ಯೆ: 5
ಕಟಕ: ಹಳೆಯ ವ್ಯಾಜ್ಯಗಳು ಬಳಲಿಸುತ್ತವೆ. ಮಾತುಮಾತಿಗೂ ಆಣೆ ಪ್ರಮಾಣಗಳನ್ನು ಮಾಡದೆ ಶಾಂತಿಯಿಂದಿರಿ. ಶುಭಸಂಖ್ಯೆ: 7
ಸಿಂಹ: ಕರುಣಾಮಯಿ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ. ಶುಭಸಂಖ್ಯೆ: 9
ಕನ್ಯಾ: ನಿಮ್ಮ ಮಾತಿಗೆ ಬೆಲೆಯುಂಟು ಎಂಬುದು ನಿಜ. ಆದರೆ ಎಲ್ಲ ಜನರೂ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಶುಭಸಂಖ್ಯೆ: 2
ತುಲಾ: ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಕೇಳಿಸಿಕೊಂಡು ಕಾರ್ಯದಲ್ಲಿ ಪ್ರವೃತ್ತರಾದರೆ ನಿಮಗೆ ಒಳಿತುಂಟಾಗಲಿದೆ. ಶುಭಸಂಖ್ಯೆ: 4
ವೃಶ್ಚಿಕ: ಗುರಿಯ ಬೆನ್ನುಹತ್ತಿ ಸೋತಿದ್ದೀರಿ ಎಂಬ ಖೇದಕರ ಭಾವನೆಗಳು ಬೇಡ. ಮುನ್ನುಗ್ಗಿದರೆ ಜಯಶೀಲರಾಗುವಿರಿ. ಶುಭಸಂಖ್ಯೆ: 6
ಧನಸ್ಸು: ದಿಢೀರ್ ನಿರ್ಧಾರ ಒಳ್ಳೆಯದೇನಲ್ಲ. ಹಿಂದುಮುಂದು ಆಲೋಚಿಸಿಯೇ ಕಾರ್ಯಪ್ರವೃತ್ತರಾದರೆ ಉತ್ತಮ. ಶುಭಸಂಖ್ಯೆ: 8
ಮಕರ: ಹತ್ತಿರದ ಜನ ವಿನಾಕಾರಣ ಜಗಳಕ್ಕೆ ಮುಂದಾಗಬಹುದು. ಆದರೆ ನೀವೇನೂ ಬೇಸರಪಟ್ಟುಕೊಳ್ಳಬೇಡಿ. ಶುಭಸಂಖ್ಯೆ: 1
ಕುಂಭ: ಮೇಲಧಿಕಾರಿಗಳು ನಿಮ್ಮ ಮೇಲೆ ಪ್ರೀತಿ, ವಾತ್ಸಲ್ಯ ತೋರುವರು. ದುರ್ಗಾಮಾತೆಯನ್ನು ಶ್ರದ್ಧಾಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 5
ಮೀನ: ದೂರದ ನೆಂಟರಿಂದ ಕಿರಿಕಿರಿಯ ಮಾತುಗಳು ಎದುರಾಗಬಹುದು. ಇದಕ್ಕೆ ಮಹತ್ವ ನೀಡದೆ ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 3