

ಮೇಷ: ಹೂಡಿಕೆದಾರರು ವಾಸ್ತವದ ಆಧಾರದಲ್ಲಿ ನಿರ್ಣಯಿಸಿ. ಶಿಕ್ಷಣ ಸಂಸ್ಥೆ ಉದ್ಯೋಗಿಗಳಿಗೆ ಪ್ರಗತಿ. ಬೆಲೆಬಾಳುವ ವಸ್ತು ಖರೀದಿ. ಶುಭಸಂಖ್ಯೆ: 6
ವೃಷಭ: ಸರ್ಕಾರಿ ಕೆಲಸಗಳಲ್ಲಿ ಮಂದಗತಿಯಿಂದ ಬೇಸರ. ಕಚ್ಚಾವಸ್ತುಗಳ ಪೂರೈಕೆದಾರರಿಗೆ ಉತ್ತಮ ದಿನ. ಕೌಟುಂಬಿಕವಾಗಿ ನೆಮ್ಮದಿ. ಶುಭಸಂಖ್ಯೆ: 4
ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ. ಅನಗತ್ಯ ಒತ್ತಡದಿಂದ ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾದೀತು, ಎಚ್ಚರ. ಶುಭಸಂಖ್ಯೆ: 9
ಕಟಕ: ರಿಯಲ್ ಎಸ್ಟೇಟ್ ಉದ್ಯಮಸ್ಥರಿಗೆ ಶುಭ. ಹಿರಿಯರ ಆರೋಗ್ಯದಲ್ಲಿ ಎಚ್ಚರವಹಿಸಿ. ತೈಲ ಮಾರಾಟಗಾರರಿಗೆ ಒಳ್ಳೆಯ ಆದಾಯ. ಶುಭಸಂಖ್ಯೆ: 2
ಸಿಂಹ: ವಾಹನ ವ್ಯವಹಾರದಲ್ಲಿ ಲಾಭ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಇಷ್ಟ ದೇವರ ಆರಾಧನೆಯಿಂದ ಕಷ್ಟ ನಿವಾರಣೆ. ಶುಭಸಂಖ್ಯೆ: 6
ಕನ್ಯಾ: ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವ. ಕೆಲಸದ ಆರಂಭದಲ್ಲಿ ಹಿನ್ನಡೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4
ತುಲಾ: ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಿರಿ. ದೃಢ ತೀರ್ವನದಲ್ಲಿ ವಿಫಲ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 6
ವೃಶ್ಚಿಕ: ಮಾತುಗಳಿಂದ ಆರೋಪ ಎದುರಿಸಬೇಕಾಗುತ್ತದೆ. ಒಡಹುಟ್ಟಿದವರಿಂದ ಮೋಸ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ. ಶುಭಸಂಖ್ಯೆ: 2
ಧನುಸ್ಸು: ಸ್ಟಾಕ್ ಷೇರಿನ ವ್ಯವಹಾರದಲ್ಲಿ ಆದಾಯ ಬರಲಿದೆ. ಆಭರಣ ವ್ಯಾಪಾರದಲ್ಲಿ ತೊಂದರೆ. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ. ಶುಭ ಸಂಖ್ಯೆ 7.
ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು. ತಾಯಿ ಯಿಂದ ಸಹಕಾರ. ಕೌಟುಂಬಿಕ ಅಗತ್ಯಗಳಿಗಾಗಿ ಖರ್ಚು. ಸಮಸ್ಯೆ ಪರಿಹಾರ. ಶುಭಸಂಖ್ಯೆ: 4
ಕುಂಭ: ಆರ್ಥಿಕ ಅನುಕೂಲವಾಗಲಿದೆ. ಸಮಾಜದಲ್ಲಿ ಗೌರವದ ಸ್ಥಾನಮಾನ ಲಭ್ಯ. ಸಿನಿಮಾ ಕ್ಷೇತ್ರದ ಸಾಧಕರಿಗೆ ಸಂತಸದ ದಿನ. ಶುಭಸಂಖ್ಯೆ: 1
ಮೀನ: ಮನಸ್ಸಿನಲ್ಲಿ ಚಿಂತೆ ಕೊರೆಯಲಿದೆ. ಪ್ರಯತ್ನಿಸಿದ ಕಾರ್ಯಗಳಲ್ಲಿ ವಿಘ್ನ ಉಂಟಾಗಿ ಬೇಸರ. ಅಧಿಕಾರಿಗಳೊಂದಿಗೆ ಜಗಳ. ಶುಭಸಂಖ್ಯೆ: 9