

ಮೇಷ: ಮಕ್ಕಳಿಗೆ ತಿಳಿಸಬೇಕೆಂದಿರುವ ಪ್ರಮುಖ ವಿಷಯವನ್ನು ತಿಳಿಸಲು ಉತ್ತಮ ದಿನ. ಅವರಿಗೆ ಜವಾಬ್ದಾರಿ ಕಲಿಸಿ. ಶುಭಸಂಖ್ಯೆ: 1
ವೃಷಭ: ಕೌಟುಂಬಿಕ ವಿಚಾರದಲ್ಲಿ ಸಮಸ್ಯೆಗಳು ಎದುರಾಗುವವು. ಭಗವಂತನಿಗೆ ಶರಣಾಗಿ. ವಿಷ್ಣು ಸಹಸ್ರನಾಮ ಪಠಿಸಿ. ಶುಭಸಂಖ್ಯೆ: 7
ಮಿಥುನ: ಹಲವು ದಿನಗಳಿಂದ ಸ್ಪಷ್ಟ ರೂಪ ಕೊಡಲಾಗದ ವಿಚಾರಕ್ಕೆ ನಿಶ್ಚಿತ ಸ್ವರೂಪ ಸಿಗಲಿದೆ. ಆರ್ಥಿಕವಾಗಿ ಲಾಭವಿದೆ. ಶುಭಸಂಖ್ಯೆ: 9
ಕಟಕ: ಏನೋ ಆತಂಕ ಎದುರಾಗಲಿದೆ ಎನಿಸಿದ್ದರೂ, ಎಲ್ಲವೂ ಕುಲದೇವರ ಕೃಪೆಯಿಂದ ಬೇಗ ಪರಿಹಾರವಾಗಲಿದೆ. ಶುಭಸಂಖ್ಯೆ: 3
ಸಿಂಹ: ಹಾಸಿಗೆ ಇದ್ದಷ್ಟು ಕಾಲು ಚಾಚಲು ಅಭ್ಯಾಸ ಮಾಡಿಕೊಳ್ಳಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಶುಭಸಂಖ್ಯೆ: 5
ಕನ್ಯಾ: ವಾಯುಬಾಧೆ ಉಂಟಾಗುವ ಸಾಧ್ಯತೆ ಇದೆ. ಮನೆವೈದ್ಯರ ಸಲಹೆಯಂತೆ ತಕ್ಕ ಔಷಧೋಪಚಾರ ಪಡೆಯಿರಿ. ಶುಭಸಂಖ್ಯೆ: 8
ತುಲಾ: ನಿಮಗೆ ಸಂಬಂಧಿಸದ ವ್ಯಕ್ತಿಗಳು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸಬಹುದು. ಅಂಥವರಿಂದ ದೂರ ಇರಿ. ಶುಭಸಂಖ್ಯೆ: 6
ವೃಶ್ಚಿಕ: ನಿಮ್ಮವರೇ ನಿಮ್ಮ ಬಗ್ಗೆ ತಿಳಿದುಕೊಂಡಿದ್ದಂಥ ತಪ್ಪು ತಿಳಿವಳಿಕೆಗಳು ದೂರವಾಗಲು ಇದು ಶುಭದಿನವಾಗಿದೆ. ಶುಭಸಂಖ್ಯೆ: 2
ಧನಸ್ಸು: ಮಾತು ಮನೆ ಕೆಡಿಸಿತು ಎಂಬಂತೆ ನಿಮ್ಮ ಮಾತು ಆಪ್ತ ವ್ಯಕ್ತಿಗೆ ಘಾಸಿ ಮಾಡಬಹುದು. ತುಸು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 4
ಮಕರ: ಯಾರೇ ಟೀಕೆ ಮಾಡಿದರೂ ನಿಮ್ಮ ನಿಲುವು ಅರ್ಥಪೂರ್ಣವಾಗಿದ್ದಲ್ಲಿ ಖಂಡಿತ ಹಿಂದಕ್ಕೆ ಹೆಜ್ಜೆ ಇಡಲೇಬೇಡಿ. ಶುಭಸಂಖ್ಯೆ: 1
ಕುಂಭ: ಮನ್ನಣೆ ಪಡೆದ ನಿಮ್ಮ ಕಾರ್ಯದಲ್ಲೂ ತಪ್ಪು ಹುಡುಕುವವರಿದ್ದಾರೆ. ಟೀಕೆಗಳನ್ನು ನಗುಮುಖದಿಂದ ಸ್ವೀಕರಿಸಿ. ಶುಭಸಂಖ್ಯೆ: 9
ಮೀನ: ದಿಢೀರಾಗಿ ಪ್ರವಾಸ ಕಾರ್ಯಕ್ರಮ ನಿಗದಿಗೊಳ್ಳಲು ಅವಕಾಶ ಕೂಡಿಬರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಶುಭಸಂಖ್ಯೆ: 7