ನಿತ್ಯ ಭವಿಷ್ಯ: ಈ ರಾಶಿಯವರು ಅತಿ ಆತ್ಮವಿಶ್ವಾಸದಿಂದ ಮಾಡುವ ಕೆಲಸ ಕೆಡಬಹುದು

Nitya-Bhavishya-vvani-1-2
Published on

ಮೇಷ: ಮನೆ ಗೆದ್ದು ಮಾರು ಗೆಲ್ಲು ಎಂಬ ಮಾತಿದೆ. ಹಾಗಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಮಾಡಿಕೊಳ್ಳದಿರಿ. ಶುಭಸಂಖ್ಯೆ: 9

ವೃಷಭ: ಪ್ರವಾಸ ಕಾರ್ಯಕ್ರಮವನ್ನು ಮುಂದೂಡುವುದು ಒಳಿತು. ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 7

ಮಿಥುನ: ಹೊಸ ಹೊಸ ಕಾರ್ಯಗಳನ್ನು ಒಮ್ಮೆಲೇ ಪ್ರಾರಂಭಿಸುವುದು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿ. ಮುಂದೆ ಒಳಿತಿದೆ. ಶುಭಸಂಖ್ಯೆ: 4

ಕಟಕ: ಕಚೇರಿಯಲ್ಲಿನ ಹಿರಿಯರ ಜತೆಗಿನ ಒಡನಾಟದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ಮುಂದಕ್ಕೆ ಸಾಗುವುವು. ಶುಭಸಂಖ್ಯೆ: 6

ಸಿಂಹ: ಅತಿ ಆತ್ಮವಿಶ್ವಾಸದಿಂದ ಮಾಡುವ ಕೆಲಸ ಕೆಟ್ಟುಹೋಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಶುಭಸಂಖ್ಯೆ: 3

ಕನ್ಯಾ: ದೊಡ್ಡ ಕಾರ್ಯಗಳನ್ನು ಆರಂಭಿಸುವುದು ಸದ್ಯಕ್ಕೆ ಸೂಕ್ತವಲ್ಲ. ಗುರುಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಶುಭಸಂಖ್ಯೆ: 1

ತುಲಾ: ಚಾಣಾಕ್ಷರಾದ ನೀವು ಯೋಚಿಸದೆ ಯಾವುದೇ ಕೆಲಸ ಮಾಡಲಾರಿರಿ. ನಿಂತಿದ್ದ ಕಾರ್ಯಕ್ಕೆ ಚಾಲನೆ ಸಿಗುವುದು. ಶುಭಸಂಖ್ಯೆ: 2

ವೃಶ್ಚಿಕ: ಕಷ್ಟದಾಯಕ ದಿನಗಳು ಬೇಗ ಕರಗಲಿವೆ. ವಿರೋಧಿಗಳೇ ನಿಮಗೆ ಆರ್ಥಿಕ ನೆರವನ್ನು ನೀಡಲು ಬರುವರು. ಶುಭಸಂಖ್ಯೆ: 5

ಧನಸ್ಸು: ಮೇಲಧಿಕಾರಿಗಳ ಜತೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರಿ. ಬೀಗುವಿಕೆಗಿಂತ ಬಾಗಿ ನಡೆವುದೇ ಉತ್ತಮ. ಶುಭಸಂಖ್ಯೆ: 8

ಮಕರ: ಖರ್ಚಿನ ದೃಷ್ಟಿಯಿಂದ ಹೊಸದೇ ಒತ್ತಡ ಎದುರಾದರೂ ಬೇರೆ ಬೇರೆ ರೂಪಗಳಿಂದ ಹಣ ಹರಿದುಬರಲಿದೆ. ಶುಭಸಂಖ್ಯೆ: 9

ಕುಂಭ: ಇಚ್ಛಿಸಿದ ಕಾರ್ಯ ನೆರವೇರಲಿದೆ. ನಿಮಗೆ ನೆರವಾಗಲು ನಾ ಮುಂದು ತಾ ಮುಂದು ಎಂದು ಜನ ಬರುವರು. ಶುಭಸಂಖ್ಯೆ: 4

ಮೀನ: ಮನೆಗೆಲಸ, ಕಚೇರಿ ಕೆಲಸಗಳ ಒತ್ತಡ ನಿಮ್ಮನ್ನು ಬಾಧಿಸಬಹುದು. ವೈಯಕ್ತಿಕ ಆರೋಗ್ಯದತ್ತ ಗಮನ ಹರಿಸಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net