

ಮೇಷ: ಕಚೇರಿಯಲ್ಲಿ ಒತ್ತಡ ಹೆಚ್ಚು. ಕೆಲವರು ಗಲಾಟೆ ಮಾಡಿಕೊಂಡರೆ, ಕೆಲವರಿಗೆ ತಲೆನೋವು ಬಂದೀತು. ಅದೃಷ್ಟಸಂಖ್ಯೆ: 9
ವೃಷಭ: ಕೆಲಸ ಮಾಡಿಕೊಡುವುದಾಗಿ ಕೆಲವರು ಮಾತು ಕೊಡುತ್ತಾರೆ. ಅನಾರೋಗ್ಯ ಪೀಡಿತರಿಗೆ ಪರದಾಟವಿದೆ. ಅದೃಷ್ಟಸಂಖ್ಯೆ: 1
ಮಿಥುನ: ಚರ್ಮವ್ಯಾಧಿ ಕಾಡಬಹುದು. ಕರಿದ ಪದಾರ್ಥಗಳನ್ನು ವರ್ಜಿಸಿ. ಆಯುರ್ವೆದ ಚಿಕಿತ್ಸೆ ಉತ್ತಮ. ಅದೃಷ್ಟಸಂಖ್ಯೆ: 5
ಕಟಕ: ಆರ್ಥಿಕ ವಿಚಾರದಲ್ಲಿ ಹಿನ್ನಡೆ. ನಿರ್ದಿಷ್ಟ ಮೊತ್ತವನ್ನು ಸಂಗ್ರಹಿಸುವ ಅನಿವಾರ್ಯತೆ ಬಂದೀತು. ಆಲಸ್ಯ ಬಿಡಿ. ಅದೃಷ್ಟಸಂಖ್ಯೆ: 3
ಸಿಂಹ: ಬಾಂಧವ್ಯ ಮುಖ್ಯವಾದರೂ ಹಣದ ಎದುರು ಗೌಣವಾಗಿಬಿಡುತ್ತದೆ. ದುಡಿಮೆ ಅನಿವಾರ್ಯವಾಗಲಿದೆ. ಅದೃಷ್ಟಸಂಖ್ಯೆ: 5
ಕನ್ಯಾ: ಅತಿಥಿಗಳ ಆಗಮನ ಸಂತಸವಾದರೂ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಸಿಹಿ ತಿನ್ನುವ ಅವಕಾಶವಿದೆ. ಅದೃಷ್ಟಸಂಖ್ಯೆ: 2
ತುಲಾ: ಒಂದು ಸುಳ್ಳು ನಿಮ್ಮನ್ನು ಸಿಕ್ಕಿಹಾಕಿಸುತ್ತದೆ. ಅವಮಾನ ಸಹ ಆಗಬಹುದು. ಸ್ನೇಹಿತರು ಹತ್ತಿರ ಇರುವುದಿಲ್ಲ. ಅದೃಷ್ಟಸಂಖ್ಯೆ: 6
ವೃಶ್ಚಿಕ: ಬಹಳ ದಿನಗಳಿಂದ ಹಾಗೇ ಇಟ್ಟುಕೊಂಡಿದ್ದ ಕೆಲಸಗಳನ್ನು ಪುನಃ ಆರಂಭಿಸುವಿರಿ. ಹಸಿವು ಹೆಚ್ಚಾಗುತ್ತದೆ. ಅದೃಷ್ಟಸಂಖ್ಯೆ: 1
ಧನಸ್ಸು: ಪ್ರಯಾಣ ಅನಿವಾರ್ಯವಾದರೂ ಸ್ವೀಕರಿಸುವ ಆಹಾರದ ವಿಚಾರದಲ್ಲಿ ಎಚ್ಚರವಿರಲಿ. ಹಾಲು ಹಣ್ಣು ಸೇವಿಸಿ. ಅದೃಷ್ಟಸಂಖ್ಯೆ: 9
ಮಕರ: ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಸಾರ್ವಜನಿಕ ಸಾರಿಗೆ ಉತ್ತಮ. ಶಿವನ ದರ್ಶನ ಪಡೆಯಿರಿ. ಅದೃಷ್ಟಸಂಖ್ಯೆ: 6
ಕುಂಭ: ಧರಿಸುವ ವಸ್ತ್ರದ ವಿಚಾರದಲ್ಲಿ ಹೆಚ್ಚಿನ ಕಾಳಜಿ ಇರಲಿ. ನಿಮಗೆ ದೈವಾನುಗ್ರಹ ಮಾತ್ರ ಬಹಳ ಚೆನ್ನಾಗಿದೆ. ಅದೃಷ್ಟಸಂಖ್ಯೆ: 5
ಮೀನ: ಚಿಕ್ಕಪುಟ್ಟ ವ್ಯವಹಾರಗಳನ್ನು ಸರಿದೂಗಿಸಿ ಮಿತ್ರರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಹೆಚ್ಚು ಮೌನ ವಹಿಸುವಿರಿ. ಅದೃಷ್ಟಸಂಖ್ಯೆ: 7